ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಸಿಕ್ಸ್‌ಗಳ ಚಚ್ಚಿ ನೂತನ ದಾಖಲೆ ಬರೆದ ಆ್ಯರನ್ ಫಿಂಚ್!

Aaron Finch becomes first Australian to hit 100 sixes in T20Is

ವೆಲ್ಲಿಂಗ್ಟನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆ್ಯರನ್ ಫಿಂಚ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಗಾಗಿ ಫಿಂಚ್ ಗುರುತಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ವೆಸ್ಟ್‌ಪ್ಯಾಕ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 5) ನಡೆದ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಫಿಂಚ್ ಈ ಸಾಧನೆ ತೋರಿದ್ದಾರೆ.

ಭಾರತ vs ಇಂಗ್ಲೆಂಡ್: ಭರ್ಜರಿ ಶತಕ ಸಿಡಿಸಿ ಮಿಂಚಿದ ರಿಷಭ್ ಪಂತ್ಭಾರತ vs ಇಂಗ್ಲೆಂಡ್: ಭರ್ಜರಿ ಶತಕ ಸಿಡಿಸಿ ಮಿಂಚಿದ ರಿಷಭ್ ಪಂತ್

ಆಸ್ಟ್ರೇಲಿಯಾ ಪರ 2ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಆ್ಯರನ್ ಫಿಂಚ್ 55ಎಸೆತಗಳಿಗೆ ಅಜೇಯ 79 ರನ್ ಬಾರಿಸಿದರು. ಇದರಲ್ಲಿ 5 ಫೋರ್ಸ್, 4 ಸಿಕ್ಸರ್ ಕೂಡ ಸೇರಿತ್ತು. ಈ ಸಿಕ್ಸರ್ ಸಾಧನೆಯೊಂದಿಗೆ ಫಿಂಚ್ ಟಿ20ಐನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಗಮ್ಮತ್ತಿನ ಸಂಗತಿಯೆಂದರೆ, ಈ ಬಾರಿ ಐಪಿಎಲ್ ಆಟಗಾರರ ಹರಾಜು ಕಣದಲ್ಲಿದ್ದ ಆ್ಯರನ್ ಫಿಂಚ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸುವ ಮನಸ್ಸು ಮಾಡಿರಲಿಲ್ಲ.

ಆಸ್ಟ್ರೇಲಿಯಾ ಪರ ಹೊಸ ದಾಖಲೆ

ಆಸ್ಟ್ರೇಲಿಯಾ ಪರ ಹೊಸ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸುವುದರೊಂದಿಗೆ ಆ್ಯರನ್ ಫಿಂಚ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಪರ ಟಿ20ಐ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಮೊದಲನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಆ್ಯರನ್ ಫಿಂಚ್ ಪಾತ್ರರಾಗಿದ್ದಾರೆ.

ವಿಶ್ವದಲ್ಲಿ 6ನೇ ಬ್ಯಾಟ್ಸ್‌ಮನ್‌ ಫಿಂಚ್

ವಿಶ್ವದಲ್ಲಿ 6ನೇ ಬ್ಯಾಟ್ಸ್‌ಮನ್‌ ಫಿಂಚ್

ಅಂತಾರಾಷ್ಟ್ರೀಯ ಟಿ20ನಲ್ಲಿ 100ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ 6ನೇ ಬ್ಯಾಟ್ಸ್‌ಮನ್‌ ಆಗಿ ಕೂಡ ಆ್ಯರನ್ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಈಗಾಗಲೇ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (135 ಸಿಕ್ಸರ್), ಭಾರತದ ರೋಹಿತ್ ಶರ್ಮಾ (127), ಇಂಗ್ಲೆಂಡ್‌ನ ಇಯಾನ್ ಮಾರ್ಗನ್ (113), ನ್ಯೂಜಿಲೆಂಡ್‌ನ ಕಾಲಿನ್ ಮುನ್ರೋ (107), ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ (105) ಇದ್ದಾರೆ.

ಪಂದ್ಯದ ಫಲಿತಾಂಶ/ಅಂಕಿ-ಅಂಶ

ಪಂದ್ಯದ ಫಲಿತಾಂಶ/ಅಂಕಿ-ಅಂಶ

* ಒಟ್ಟು 70 ಟಿ20ಐ ಇನ್ನಿಂಗ್ಸ್‌ಗಳನ್ನಾಡಿರುವ ಆ್ಯರನ್ ಫಿಂಚ್ 172 ರನ್ ವೈಯಕ್ತಿಕ ಅತ್ಯಧಿಕ ರನ್‌ನೊಂದಿಗೆ 2310 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ, 14 ಅರ್ಧ ಶತಕಗಳು ಸೇರಿವೆ.
* ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ, ಆ್ಯರನ್ ಫಿಂಚ್ 79 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 156 ರನ್‌ ಬಾರಿಸಿತ್ತು.
* ನ್ಯೂಜಿಲೆಂಡ್ ತಂಡ ಕೈಲ್ ಜೇಮಿಸನ್ 30, ಟಿಮ್ ಸೀಫರ್ಟ್ 19, ಡಿವಾನ್ ಕಾನ್ವೆ 17 ರನ್‌ನೊಂದಿಗೆ 18.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 106 ರನ್ ಬಾರಿಸಿ 50 ರನ್‌ನಿಂದ ಶರಣಾಯ್ತು.

Story first published: Friday, March 5, 2021, 18:20 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X