ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಯಲ್ಲಿ ಅಧಿಕ ರನ್: ತಮ್ಮ ದಾಖಲೆ ತಾವೇ ಮುರಿದ ಆರೋನ್ ಫಿಂಚ್!

Aaron Finch created record in t20

ಹರಾರೆ, ಜುಲೈ 3: ಆಸ್ಟ್ರೇಲಿಯಾದ ಟಿ20 ಕ್ರಿಕೆಟ್ ತಂಡದ ನಾಯಕ ಆರೋನ್ ಫಿಂಚ್, ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಸಾಧನೆ ಮಾಡಿದ್ದಾರೆ.

ಇದುವರೆಗಿನ ವೈಯಕ್ತಿಕ ಗರಿಷ್ಠ ರನ್ ದಾಖಲೆಯೂ ಅವರದೇ ಹೆಸರಿನಲ್ಲಿತ್ತು. ಮಂಗಳವಾರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮ ದಾಖಲೆಯನ್ನು ಫಿಂಚ್ ಉತ್ತಮಪಡಿಸಿದ್ದಾರೆ.

ಭಾರತ 'ಎ' ತಂಡದ ಮಡಿಲಿಗೆ ತ್ರಿಕೋನ ಏಕದಿನ ಸರಣಿ ಭಾರತ 'ಎ' ತಂಡದ ಮಡಿಲಿಗೆ ತ್ರಿಕೋನ ಏಕದಿನ ಸರಣಿ

ಜಿಂಬಾಬ್ವೆ ಬೌಲರ್‌ಗಳಲ್ಲಿ ಮನಬಂದಂತೆ ದಂಡಿಸಿದ ಫಿಂಚ್, ಕೇವಲ 76 ಎಸೆತಗಳಲ್ಲಿ 172 ರನ್ ಚಚ್ಚಿದರು. ಇದರಲ್ಲಿ 16 ಬೌಂಡರಿ ಮತ್ತು 10 ಸಿಕ್ಸರ್‌ಗಳು ಸೇರಿವೆ.

ಇದಲ್ಲದೆ ಡಿ ಆರ್ಸಿ ಶಾರ್ಟ್ ಅವರೊಂದಿಗೆ ಮೊದಲ ವಿಕೆಟ್‌ಗೆ 223 ರನ್‌ ಸೇರಿಸುವ ಮೂಲಕ, ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿ ದೊಡ್ಡ ಜೊತೆಯಾಟದ ಹೆಗ್ಗಳಿಕೆಗೂ ಪಾತ್ರರಾದರು.

ಇಂದಿನಿಂದ ಆಂಗ್ಲರ ನಾಡಲ್ಲಿ ಚುಟುಕು ಕ್ರಿಕೆಟ್ ಕದನ ಶುರು ಇಂದಿನಿಂದ ಆಂಗ್ಲರ ನಾಡಲ್ಲಿ ಚುಟುಕು ಕ್ರಿಕೆಟ್ ಕದನ ಶುರು

ಫಿಂಚ್ ಅವರಿಗೆ ಸೂಕ್ತ ಬೆಂಬಲ ನೀಡಿದ ಆರ್ಸಿ ಶಾರ್ಟ್ 46 ರನ್ ಗಳಿಸಿ ಕೊನೆಯ ಓವರ್‌ನ ಎರಡನೆಯ ಎಸೆತದಲ್ಲಿ ಬ್ಲೆಸಿಂಗ್ ಮುಜರಬನಿ ಅವರ ಬೌಲಿಂಗ್‌ನಲ್ಲಿ ಔಟಾದರು. ನಾಲ್ಕನೆಯ ಎಸೆತದಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಫಿಂಚ್, ಒಟ್ಟಾರೆ ಟಿ20ಯಲ್ಲಿಯೂ ಅತ್ಯಧಿಕ ರನ್ ಮಾಡಿದ ದಾಖಲೆ ಬರೆಯುವ ಅವಕಾಶದಿಂದ ಕೇವಲ ಮೂರು ರನ್‌ನಿಂದ ವಂಚಿತರಾದರು.

ಎರಡು ಬಾರಿ ಅಧಿಕ ರನ್ ದಾಖಲೆ

ಎರಡು ಬಾರಿ ಅಧಿಕ ರನ್ ದಾಖಲೆ

ಅಂತರರಾಷ್ಟ್ರೀಯ ಕ್ರಿಕೆಟ್‌ನ ವಿಭಾಗವೊಂದರಲ್ಲಿ ಎರಡು ಬಾರಿ ಅತ್ಯಧಿಕ ವೈಯಕ್ತಿಕ ರನ್ ದಾಖಲೆ ಮಾಡಿದ ಎರಡನೆಯ ಆಟಗಾರ ಎಂಬ ಶ್ರೇಯಸ್ಸನ್ನು ಪಡೆದುಕೊಂಡರು. ಇದಕ್ಕೂ ಮೊದಲು 156 ರನ್ ಗಳಿಸಿದ್ದ ಫಿಂಚ್, ವೈಯಕ್ತಿಕ ಗರಿಷ್ಠ ರನ್ ದಾಖಲೆ ನಿರ್ಮಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಗ್ಯಾರಿ ಸೋಬರ್ಸ್ ಅವರು ನಿರ್ಮಿಸಿದ್ದ 365 ರನ್ ದಾಖಲೆಯನ್ನು ಮುರಿದಿದ್ದ ಬ್ರಿಯಾನ್ ಲಾರಾ, ಇಂಗ್ಲೆಂಡ್ ವಿರುದ್ಧ 375 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಅದನ್ನು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 380 ರನ್ ಗಳಿಸುವ ಮೂಲಕ ಮುರಿದಿದ್ದರು.

ಮತ್ತೆ ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಲಾರಾ 400 ರನ್ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ದಾಖಲೆಯನ್ನು ತಮ್ಮ ಹೆಸರಿಗೆ ಮತ್ತೆ ವರ್ಗಾಯಿಸಿಕೊಂಡಿದ್ದರು.

ಆಸ್ಟ್ರೇಲಿಯಾಕ್ಕೆ ಸುಲಭ ಗೆಲುವು

ಆಸ್ಟ್ರೇಲಿಯಾಕ್ಕೆ ಸುಲಭ ಗೆಲುವು

ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ 229 ರನ್ ಗಳಿಸಿತು.

ಬೃಹತ್ ಗುರಿ ಬೆನ್ನತ್ತಿದ ಜಿಂಬಾಬ್ವೆ, 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತವಾಯಿತು. ಅಷ್ಟೊನ್ ಅಗರ್ ಮತ್ತು ಆಂಡ್ರೂ ಟೈ ದಾಳಿಗೆ ತತ್ತರಿಸಿದ ಜಿಂಬಾಬ್ವೆ 100 ರನ್‌ಗಳಿಂದ ಸೋಲು ಅನುಭವಿಸಿತು.

ಆಂಡ್ರೂ ಟೈ 12 ರನ್ ನೀಡಿ 3 ವಿಕೆಟ್ ಕಿತ್ತರೆ, ಅಷ್ಟೊನ್ ಅಗರ್ 16 ರನ್ ಕೊಟ್ಟು 2 ವಿಕೆಟ್ ಕಬಳಿಸಿದರು.

ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್

ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್

ಆರೋನ್ ಫಿಂಚ್ (ಆಸ್ಟ್ರೇಲಿಯಾ)- 172 ರನ್, ಜಿಂಬಾಬ್ವೆ ವಿರುದ್ಧ.
ಆರೋನ್ ಫಿಂಚ್ (ಆಸ್ಟ್ರೇಲಿಯಾ)- 156 ರನ್, ಇಂಗ್ಲೆಂಡ್ ವಿರುದ್ಧ.
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)- 145* ರನ್, ಶ್ರೀಲಂಕಾ ವಿರುದ್ಧ
ಎವಿನ್ ಲೆವಿಸ್ (ವೆಸ್ಟ್ ಇಂಡೀಸ್)- 125 ರನ್, ಭಾರತದ ವಿರುದ್ಧ
ಶೇನ್ ವಾಟ್ಸನ್ (ಆಸ್ಟ್ರೇಲಿಯಾ)- 124* ರನ್ ಭಾರತದ ವಿರುದ್ಧ

ಒಟ್ಟಾರೆ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ರನ್

ಒಟ್ಟಾರೆ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ರನ್

ಕ್ರಿಸ್ ಗೇಲ್ (ಆರ್‌ಸಿಬಿ)- 175*
ಆರೋನ್ ಫಿಂಚ್ (ಆಸ್ಟ್ರೇಲಿಯಾ)- 172
ಹ್ಯಾಮಿಲ್ಟನ್ ಮಸಕಜಾ (ಮೌಂಟೆನೀರ್ಸ್)- 162
ಆಡಂ ಲಿಥ್ (ಯಾರ್ಕ್‌ಷೈರ್)- 161
ಬ್ರೆಂಡನ್ ಮೆಕಲಂ (ಕೆಕೆಆರ್)- 158
ಬ್ರೆಂಡನ್ ಮೆಕಲಂ (ಬರ್ಮಿಂಗ್‌ಹ್ಯಾಮ್)- 158
ಆರೋನ್ ಫಿಂಚ್ (ಆಸ್ಟ್ರೇಲಿಯಾ)-156

ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ಜೊತೆಯಾಟ

ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್ ಜೊತೆಯಾಟ

ಆರೋನ್ ಫಿಂಚ್ ಮತ್ತು ಡಿ ಶಾರ್ಟ್ (ಆಸ್ಟ್ರೇಲಿಯಾ)- 223, ಜಿಂಬಾಬ್ವೆ ವಿರುದ್ಧ
ಮಾರ್ಟಿನ್ ಗುಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)- 171*, ಪಾಕಿಸ್ತಾನ ವಿರುದ್ಧ
ಗ್ರಹಾಂ ಸ್ಮಿತ್ ಮತ್ತು ಎಲ್. ಬೋಸ್ಮಾನ್ (ದಕ್ಷಿಣ ಆಫ್ರಿಕಾ)- 170, ಇಂಗ್ಲೆಂಡ್ ವಿರುದ್ಧ
ಮಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ (ಶ್ರೀಲಂಕಾ)- 166, ವೆಸ್ಟ್ ಇಂಡೀಸ್ ವಿರುದ್ಧ
ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ (ಭಾರತ)- 165, ಶ್ರೀಲಂಕಾ ವಿರುದ್ಧ

ಟಿ20ಯಲ್ಲಿ ಅತ್ಯಧಿಕ ರನ್ ಜೊತೆಯಾಟ

ಟಿ20ಯಲ್ಲಿ ಅತ್ಯಧಿಕ ರನ್ ಜೊತೆಯಾಟ

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ (ಆರ್‌ಸಿಬಿ) - 229, ಗುಜರಾತ್ ಲಯನ್ಸ್
ಆರೋನ್ ಫಿಂಚ್ ಮತ್ತು ಡಿ ಶಾರ್ಟ್ (ಆಸ್ಟ್ರೇಲಿಯಾ)- 223, ಜಿಂಬಾಬ್ವೆ
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ (ಆರ್‌ಸಿಬಿ)- 215*, ಮುಂಬೈ ಇಂಡಿಯನ್ಸ್
ಕಮ್ರಾನ್ ಅಕ್ಮಲ್ ಮತ್ತು ಸಲ್ಮಾನ್ ಭಟ್ (ಲಾಹೋರ್)- 209*, ಇಸ್ಲಮಾಬಾದ್
ಜೋ ಡೆನ್ಲಿ ಮತ್ತು ಡಿ ಬೆಲ್ ಡ್ರಮ್ಮೊಂಡ್ (ಕೆಂಟ್)- 207, ಎಸೆಕ್ಸ್
ಆಡಂ ಗಿಲ್ ಕ್ರಿಸ್ಟ್ ಮತ್ತು ಶಾನ್ ಮಾರ್ಷ್ (ಪಂಜಾಬ್)- 206, ಆರ್‌ಸಿಬಿ

Story first published: Tuesday, July 3, 2018, 18:24 [IST]
Other articles published on Jul 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X