ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆರಳು ನೋವು ನನ್ನನ್ನು ಮೆಲ್ಬರ್ನ್ ಟೆಸ್ಟ್‌ನಲ್ಲಿ ಆಡದಂತೆ ತಡೆಯಲಾರದು: ಫಿಂಚ್

Aaron Finch determined to play Boxing Day Test despite finger injury

ಮೆಲ್ಬರ್ನ್, ಡಿಸೆಂಬರ್ 23: ಗಾಯಕ್ಕೀಡಾಗಿರುವ ಭಾರತದ ಆಟಗಾರರಾದ ಆರ್‌ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೆಲ್ಬರ್ನ್ ನಲ್ಲಿ ನಡೆಯಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್ ನಲ್ಲಿ ಆಡುವುದು ಅನುಮಾನವೆಂಬಂತಿದೆ. ಆದರೆ ಆಸೀಸ್‌ನ ಆ್ಯರನ್ ಫಿಂಚ್ ತಾನು ಬೆರಳಿನ ನೋವಿನ ಹೊರತಾಗಿಯೂ ಆಡಿಯೇ ತೀರುತ್ತೇನೆ ಎಂದಿದ್ದಾರೆ.

ಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಸಂಪೂರ್ಣ ವೇಳಾಪಟ್ಟಿಭಾರತದಿಂದ ನ್ಯೂಜಿಲೆಂಡ್ ಪ್ರವಾಸ ಸಂಪೂರ್ಣ ವೇಳಾಪಟ್ಟಿ

ಆಟಗಾರರ ಗಾಯ ಭಾರತದ ತಂಡ ನಿರ್ವಹಣ ಸಮಿತಿಗೆ ತಲೆ ನೋವಾಗಿದೆ. ಇದೇ ಪರಿಸ್ಥಿತಿ ಆಸೀಸ್ ನಲ್ಲೂ ಇದೆ. ದ್ವಿತೀಯ ಟೆಸ್ಟ್‌ಗೂ ಮುನ್ನ ಆಸೀಸ್ ತಂಡದ ಬಗ್ಗೆ ಮಾತನಾಡಿದ್ದ ಮಾಜಿ ಆಟಗಾರ ರಿಕಿ ಪಾಂಟಿಂಗ್, ಪರ್ತ್ ಪಿಚ್‌ ನಮ್ಮವರಿಗೆ ಅನುಕೂಲ ಮಾಡಲಿದೆ ಎಂದಿದ್ದರು.

ಜೊತೆಗೆ ತಂಡದ ಆಟಗಾರರು ಗಾಯಕ್ಕೀಡಾಗಿ ತಂಡದಿಂದ ಹೊರ ಬೀಳದಂತೆ ನೋಡಿಕೊಳ್ಳಬೇಕು. ಮೊದಲ ಟೆಸ್ಟ್ ನಲ್ಲಿ ಆಡಿದ್ದ ಇದೇ ತಂಡ ದ್ವಿತೀಯ ಟೆಸ್ಟ್ ನಲ್ಲೂ ಆಡಬೇಕು ಎಂದು ರಿಕಿ ಎಚ್ಚರಿಸಿದ್ದರು. ಅದರಂತೆ ಅದೇ ತಂಡವನ್ನು ಮೈದಾನಕ್ಕಿಳಿಸಿದ್ದ ಆಸೀಸ್ ದ್ವಿತೀಯ ಪಂದ್ಯವನ್ನು ಜಯಿಸಿತ್ತು. ಆದರೆ ಮೂರನೇ ಪಂದ್ಯದ ವೇಳೆಗಾಗುವಾಗ ಆಸೀಸ್ ಆರಂಭಿಕ ಆಟಗಾರ ಫಿಂಚ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್: ಹಾರ್ದಿಕ್ ಪಾಂಡ್ಯ ಫುಲ್ ಫಿಟ್; ಅಶ್ವಿನ್, ಜಡೇಜಾ ಡೌಟ್!ಬಾಕ್ಸಿಂಗ್‌ ಡೇ ಟೆಸ್ಟ್: ಹಾರ್ದಿಕ್ ಪಾಂಡ್ಯ ಫುಲ್ ಫಿಟ್; ಅಶ್ವಿನ್, ಜಡೇಜಾ ಡೌಟ್!

ಈ ಬಗ್ಗೆ ಮಾತನಾಡಿದ ಆ್ಯರನ್, 'ಪರ್ತ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ವೇಳೆ ಮೊಹಮ್ಮದ್ ಶಮಿ ಓವರ್‌ನಲ್ಲಿ ಬ್ಯಾಟ್ ಬೀಸುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದೆ. 3ನೇ ಟೆಸ್ಟ್‌ಗಾಗಿ ಅಭ್ಯಾಸ ನಡೆಸುವಾಗ ನೋವು ಇನ್ನೂ ಜೋರಾಗಿತ್ತು. ಹೀಗಾಗಿ ಪಂದ್ಯದಿಂದ ಹೊರಗುಳಿಯಬೇಕಾದ ಪರಿಸ್ಥಿತಿಯಿತ್ತು' ಎಂದರು.

'ಈಗ ನೋವು ಕೊಚ ಕಡಿಮೆಯಾಗಿದೆ. ಬ್ಯಾಟಿಂಗ್ ಮಾಡಬಲ್ಲೆ ಅನ್ನಿಸಿದೆ. ಆದರೆ ಫೀಲ್ಡಿಂಗ್ ಮತ್ತು ಕ್ಯಾಚ್ ಸ್ವಲ್ಪ ಸವಾಲಾಗಬಲ್ಲದು. ಆದರೂ ಮೈದಾನಕ್ಕಿಳಿಯುವ ಇಂಗಿತ ನನ್ನದು. ಅಭ್ಯಾಸದ ವೇಳೆ ನಾನು ಸ್ಲಿಪ್‌ ನಲ್ಲಿ ನಿಂತು ಕ್ಯಾಚ್‌ಗಾಗಿ ಅಭ್ಯಾಸ ನಡೆಸಿದ್ದೇನೆ. ಮೂರನೇ ಟೆಸ್ಟ್‌ನಲ್ಲೂ ಅದನ್ನೇ ಮುಂದುವರೆಸುತ್ತೇನೆ. ಅಥವಾ ತಂಡ ಬಯಸಿದ ಜವಾಬ್ದಾರಿ ನಿರ್ವಹಿಸುತ್ತೇನೆ. ಹಾಗೂ ತಂಡದದಿಂದ ಹೊರಗೆ ಕೂರಲೇಬೇಕಾಗಿ ಬಂದರೆ ಅದಕ್ಕೂ ನಾನು ಬದ್ಧ' ಎಂದು ಫಿಂಚ್ ಭಾನುವಾರ (ಡಿಸೆಂಬರ್ 23) ತಿಳಿಸಿದ್ದಾರೆ.

Story first published: Sunday, December 23, 2018, 13:51 [IST]
Other articles published on Dec 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X