ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸತತ ಸೋಲು, ಕಳಪೆ ಮೊತ್ತದಲ್ಲೂ ಆಸ್ಟ್ರೇಲಿಯಾ ದಾಖಲೆ

Australia Vs South Africa, 1st ODI: Finch frustrated by latest Australia humbling

ಪರ್ತ್, ನವೆಂಬರ್ 04: ಕ್ರಿಕೆಟ್ ಜಗತ್ತಿನಲ್ಲಿ ವೇಗಿಗಳಿಗೆ ಸಹಾಯಕ ಪಿಚ್ ಗಳ ಪೈಕಿ ಒಂದೆನಿಸಿರುವ ಪರ್ತ್ ಅಂಗಳದಲ್ಲಿ ಇಂದು ಆಸ್ಟ್ರೇಲಿಯಾ ತಂಡ ತಲೆ ತಗ್ಗಿಸಿ ನಿಂತಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿ ತಲೆ ಎತ್ತಿ ನಿಂತಿದೆ.

ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲು ಆಡುವ ಅವಕಾಶ ಪಡೆದುಕೊಂಡ ಅತಿಥೇಯ ಆಸ್ಟ್ರೇಲಿಯಾ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಂಡು 38.1ಓವರ್ ಗಳಲ್ಲಿ 152ಸ್ಕೋರಿಗೆ ಆಲೌಟ್ ಆಗಿದೆ.

ದಕ್ಷಿಣ ಆಫ್ರಿಕಾ ಪರ ಆಂಡಿಲೆ ಫೆಹ್ಲುಕ್ವಾಯೊ 3/33, ಡೇಲ್ ಸ್ಟೇನ್ 2/18 ಹಾಗೂ ಲುಂಗಿ ನಿಗಿಡಿ 2/26 ಬೌಲಿಂಗ್ ದಾಳಿಗೆ ಆಸೀಸ್ ಬ್ಯಾಟ್ಸ್ ಮನ್ ಗಳು ತತ್ತರಿಸಿದರು.

ಮೊದಲ ಏಕದಿನ ಪಂದ್ಯದ ಸ್ಕೋರ್ ಕಾರ್ಡ್, ವ್ಯಾಗನ್ ವ್ಹೀಲ್, ಕಾಮೆಂಟರಿ

ಕೇಪ್ ಟೌನ್ ನಲ್ಲಿ ಬ್ಯಾಲ್ ಟ್ಯಾಂಪರಿಂಗ್ ಪ್ರಕರಣವಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಅವರು 12ತಿಂಗಳುಗಳ ಕಾಲ ಹೊರಗುಳಿದ ಬಳಿಕ, ತವರು ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ.

153ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾಕ್ಕೆ ಕ್ವಿಂಟಾನ್ ಡಿಕಾಕ್ (47) ಹಾಗೂ ರೀಜಾ ಹೆಂಡ್ರಿಕ್ಸ್ (44) ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಇನ್ನು 20 ಓವರ್ ಗಳು ಬಾಕಿಯಿರುವಂತೆ 153/4 ಸ್ಕೋರ್ ಮಾಡಿ ಜಯ ದಾಖಲಿಸಿತು.

ಆಸ್ಟ್ರೇಲಿಯಾ ಕಳೆದ 19 ಏಕದಿನ ಪಂದ್ಯಗಳಲ್ಲಿ 17 ಪಂದ್ಯಗಳನ್ನು ಕಳೆದುಕೊಂಡಿದೆ. ಸತತ 7 ಪಂದ್ಯಗಳನ್ನು ಕಳೆದುಕೊಂಡಿದೆ. 152 ಸ್ಕೋರ್ ಆಸೀಸ್ ತನ್ನ ತವರು ನೆಲದಲ್ಲಿ ಕಳೆದ 21 ವರ್ಷಗಳಲ್ಲೆ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ ಅತ್ಯಂತ ಕಡಿಮೆ ಮೊತ್ತ ಎನಿಸಿದೆ.

Story first published: Sunday, November 4, 2018, 22:28 [IST]
Other articles published on Nov 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X