ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್-ವಾರ್ನರ್‌ಗಾಗಿ ವಿಶ್ವಕಪ್‌ ಬ್ಯಾಟಿಂಗ್‌ ಕ್ರಮಾಂಕ ಬದಲಿಸಬಲ್ಲೆ: ಫಿಂಚ್

Aaron Finch happy to demote himself in Australian World Cup batting order

ಸಿಡ್ನಿ, ಮಾರ್ಚ್ 21: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್‌ಗಳಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲಿನ ನಿಷೇಧ ತೆರವಾಗುವುದರಲ್ಲಿದೆ. ಇಬ್ಬರೂ ಆಟಗಾರರು ವಿಶ್ವಕಪ್ ವೇಳೆ ಆಸೀಸ್ ತಂಡ ಸೇರಿಕೊಳ್ಳುವುದರಲ್ಲಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಆ್ಯರನ್ ಫಿಂಚ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರಾ ಸ್ಮಿತ್, ವಾರ್ನರ್!?ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರಾ ಸ್ಮಿತ್, ವಾರ್ನರ್!?

2015ರ ವಿಶ್ವಕಪ್ ನಲ್ಲಿ ಆ್ಯರನ್ ಫಿಂಚ್ ಅವರು ಡೇವಿಡ್ ವಾರ್ನರ್ ಜೊತೆ ಆರಂಭಿಕರಾಗಿ ಮೈದಾನಕ್ಕಿಳಿದಿದ್ದರು. ಭಾರತ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ವಾರ್ನರ್ ಅನುಪಸ್ಥಿತಿಯಲ್ಲಿ ಫಿಂಚ್, ಉಸ್ಮಾನ್ ಖವಾಜಾ ಜೊತೆ ಕ್ರಮವಾಗಿ 0, 3, 76, 83, 193 ರನ್ ಗಳಿಸಲಷ್ಟೇ ಶಕ್ತವಾಗಿದ್ದರು.

ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!

ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿದ್ದ ಸ್ಮಿತ್-ವಾರ್ನರ್ ಇಬ್ಬರೂ ಆಸೀಸ್ ತಂಡ ಸೇರಿಕೊಳ್ಳುವ ಯೋಜನೆಯಲ್ಲಿರುವುದರಿಂದ ಹಿಂದಿನ ಸರಣಿಗಳಲ್ಲಿ ಅಷ್ಟೇನೂ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸದ ಫಿಂಚ್ ಬ್ಯಾಟಿಂಗ್ ಕ್ರಮಾಂಕ ಪಲ್ಲಟಗೊಳ್ಳುವುದರಲ್ಲಿದೆ. ಇದು ಫಿಂಚ್‌ಗೂ ಅರಿವಿದೆ.

ಆಸೀಸ್ ಬ್ಯಾಟ್ಸ್ಮನ್‌ಗಳಲ್ಲಿ ಖವಾಜಾ ಈಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಡೇವಿಡ್-ಫಿಂಚ್ ಜೋಡಿ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದರೆ, ಖವಾಜಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಅಥವಾ ಬೇರೆ ಬದಲಾವಣೆಗಳಾದರೂ ಅಚ್ಚರಿಯಿಲ್ಲ.

ಆಸೀಸ್ ವಿರುದ್ಧ ಭಾರತ ಏಕದಿನ ಸರಣಿ ಸೋತಿದ್ದು ಒಳ್ಳೇದೆ ಆಯ್ತು: ದ್ರಾವಿಡ್ಆಸೀಸ್ ವಿರುದ್ಧ ಭಾರತ ಏಕದಿನ ಸರಣಿ ಸೋತಿದ್ದು ಒಳ್ಳೇದೆ ಆಯ್ತು: ದ್ರಾವಿಡ್

ಈ ಹಿಂದಿನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಫಿಂಚ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ವಿಶ್ವಕಪ್‌ವೇಳೆ ಅವರಿಗೆ ಯಾವ ಬ್ಯಾಟಿಂಗ್‌ ಕ್ರಮಾಂಕ ಸಿಗಲಿದೆಯೋ ಗೊತ್ತಿಲ್ಲ. ಆದರೆ ಯಾವ ಕ್ರಮಾಂಕದ ಬ್ಯಾಟಿಂಗ್‌ಗೂ ನಾನು ತಯಾರಿದ್ದೇನೆ ಎಂಬರ್ಥದಲ್ಲಿ ಫಿಂಚ್ ಮಾತನಾಡಿದ್ದಾರೆ.

'ನನಗೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶ ಲಭಿಸಿದರೆ ನಾನದನ್ನು ಖುಷಿಯಲ್ಲಿ ಮಾಡಬಲ್ಲೆ. ಇನ್ನು ಆರಂಭಿಕ, ಮೂರನೇ ಅಥವಾ ನಾಲ್ಕನೇ ಏನೇ ಇರಲಿ ನಾನು ಬ್ಯಾಟಿಂಗ್ ಮಾಡಬಲ್ಲೆ. ಇಲ್ಲಿ ವೈಯಕ್ತಿಕ ಸಾಧನೆಗಿಂತ ತಂಡದ ಫಲಿತಾಂಶ ಮುಖ್ಯ' ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಆ್ಯರನ್ ತಿಳಿಸಿದ್ದಾರೆ.

Story first published: Thursday, March 21, 2019, 19:59 [IST]
Other articles published on Mar 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X