Ind vs Aus: ಪ್ರೇಕ್ಷಕರ ಮುಂದೆ ಆಡಿದ್ದು, ಒಡಿಐ ಸರಣಿ ಗೆದ್ದಿದ್ದು ಖುಷಿ ನೀಡಿದೆ: ಫಿಂಚ್

ಸಿಡ್ನಿ: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ 2-0ಯ ಮುನ್ನಡೆಯಲ್ಲಿದೆ. ಸರಣಿ ವಶವಾಗಿಸಿಕೊಂಡಿದೆ. ಆಸ್ಟ್ರೇಲಿಯಾದ ಅಭಿಮಾನಿಗಳ ಎದುರು ಆಡೋದು ಮತ್ತು ಏಕದಿನ ಸರಣಿ ಗೆದ್ದಿದ್ದು ಖುಷಿ ನೀಡಿದೆ ಎಂದು ಆಸೀಸ್ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ.

ಭಾರತದ ರೈತರ ಪ್ರತಿಭಟನೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಬೆಂಬಲ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಕಾಂಗರೂ ಪಡೆಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ನಿಂದ ಸೋತಿತ್ತು. ಭಾನುವಾರ (ನೆವೆಂಬರ್ 29) ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ 51 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಐಪಿಎಲ್‌ನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದ ಫಿಂಚ್, ಈ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್‌ ತೋರಿಕೊಂಡಿದ್ದರು.

ದ್ವಿತೀಯ ಪಂದ್ಯದ ಗೆಲುವಿನ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಫಿಂಚ್, 'ಭಾರತ ವಿರುದ್ಧ ಏಕದಿನ ಸರಣಿ ಗೆದ್ದಿರುವುದು ಶ್ರೇಷ್ಠ ಅನುಭವ ನೀಡಿದೆ. ಮತ್ತೆ ತವರಿಲ್ಲಿ ಅದರಲ್ಲೂ ಅಭಿಮಾನಿಗಳ ಎದುರು ಆಡಿದ್ದು ತುಂಬಾ ಖುಷಿ ನೀಡಿತು,' ಎಂದು ಬರೆದುಕೊಂಡಿದ್ದಾರೆ.

ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್

ಏಕದಿನ ಸರಣಿಯ ಏರಡೂ ಪಂದ್ಯಗಳನ್ನು ಸೋತಿರುವುದು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೌಲರ್‌ಗಳು ಸೋಲುತ್ತಿರುವುದು ಒಂದೆಡೆಯಾದರೆ, ಮಿಸ್ ಫೀಲ್ಡಿಂಗ್, ತಂತ್ರಗಾರಿಕೆಯಲ್ಲಿ ಭಾರತ ತಂಡ ಎಡವುತ್ತಿರುವುದು ಕಾಣಿಸುತ್ತಿದೆ. ಇತ್ತಂಡಗಳ ಕೊನೇಯ ಏಕದಿನ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, November 30, 2020, 23:03 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X