ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

Aaron Finch names India-Australia combined ODI XI team, Sachin, Rohit misses out

ಬೆಂಗಳೂರು: ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ಸೇರಿಸಿ ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ ಏಕದಿನ ತಂಡ ಪ್ರಕಟಿಸಿದ್ದಾರೆ. ಅಚ್ಚರಿಯೆಂದರೆ ಈ ತಂಡದಲ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರೇ ಇಲ್ಲ. ಫಿಂಚ್ ಪ್ರಕಟಿಸಿರುವ ಈ ತಂಡ ಬಲಿಷ್ಠವಾಗಿದೆ ಅಂತೋನೋ ಅನ್ನಬಹುದು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ವಿಶ್ವದಾಖಲೆ ಹೊಂದಿರುವ ರೋಹಿತ್ ಶರ್ಮಾ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಇನ್ನೂ ಬೇಸರದ ಸಂಗತಿಯೆಂದರೆ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಹೆಸರೂ ಕೂಡ ಫಿಂಚ್ ತಂಡದಲ್ಲಿಲ್ಲ.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಆ್ಯರನ್ ಪಿಂಚ್ ಆರಿಸಿರುವ ಈ ತಂಡದಲ್ಲಿ ಹಳೆ ಪೀಳಿಗೆ ಮತ್ತು ಹೊಸ ಪೀಳಿಗೆ ಎರಡರ ಆಟಗಾರರೂ ಇದ್ದಾರೆ. ಆದರೆ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದರಲ್ಲೂ ಒಡಿಐನಲ್ಲಿ 3 ದ್ವಿಶತಕಗಳ ದಾಖಲೆ ಹೊಂದಿರುವ ಏಕಮಾತ್ರ ಆಟಗಾರ ರೋಹಿತ್ ಹೆಸರಿಲ್ಲದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರುಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

ಹಾಗಾದರೆ ಆ್ಯರನ್ ಫಿಂಚ್ ಆರಿಸಿರುವ ಭಾರತ-ಆಸ್ಟ್ರೇಲಿಯಾ ಆಲ್ ಟೈಮ್ ಒಡಿಐ ತಂಡದಲ್ಲಿ ಯಾರೆಲ್ಲ ಇದ್ದಾರೆ ನೋಡಿ.

ಸೆಹ್ವಾಗ್ ಆರಂಭಿಕ ಬ್ಯಾಟ್ಸ್‌ಮನ್

ಸೆಹ್ವಾಗ್ ಆರಂಭಿಕ ಬ್ಯಾಟ್ಸ್‌ಮನ್

'ಆರಂಭಿಕ ಬ್ಯಾಟಿಂಗ್‌ಗೆ ವೀರೇಂದ್ರ ಸೆಹ್ವಾಗ್ ನನ್ನ ಮೊದಲ ಆಯ್ಕೆ. ಅವರು ಬಹಳ ಪಾರಮ್ಯ ಮೆರೆಯುತ್ತಾರೆ. ಅವರು ಇದ್ದಷ್ಟು ಹೊತ್ತು ಆದಷ್ಟು ಬೇಗ ಮ್ಯಾಚ್ ಮುಗಿಯುತ್ತದೆ. ರೋಹಿತ್ ಶರ್ಮಾ ಕಡೆಗೆ ಹೋಗುವುದಾದರೆ, ರೋಹಿತ್ ಹೆಸರಿನಲ್ಲಿ ಅದ್ಭುತ ದಾಖಲೆಗಳಿವೆ. ಆದರೆ ನಾನು ಸೆಹ್ವಾಗ್ ಜೊತೆಗೆ ಆ್ಯಡಮ್ ಗಿಲ್‌ಕ್ರಿಸ್ಟ್ ಆಟ ಆರಂಭಿಸುವುದನ್ನು ನೋಡಬಯಸುತ್ತೇನೆ. ಇದಕ್ಕಾಗೇ ನಾನು ಗಿಲ್‌ಕ್ರಿಸ್ಟ್ ಆರಿಸಿದ್ದೇನೆ,' ಎಂದು ಫಿಂಚ್ ಹೇಳಿದ್ದಾರೆ.

5ರಲ್ಲಿ ಹಾರ್ದಿಕ್ ಪಾಂಡ್ಯ

5ರಲ್ಲಿ ಹಾರ್ದಿಕ್ ಪಾಂಡ್ಯ

'3ನೇ ಬ್ಯಾಟಿಂಗ್ ಕ್ರಮಾಂಕಕ್ಕಾಗಿ ನಾನು ರಿಕಿ ಪಾಂಟಿಂಗ್ ಎಡೆಗೆ ಹೋಗುತ್ತೇನೆ. 4ನೇ ಕ್ರಮಾಂಕಕ್ಕೆ ನನ್ನ ಆಯ್ಕೆ ವಿರಾಟ್ ಕೊಹ್ಲಿ. 5ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಆಟಗಾರನ ಆರಿಸೋದು ತುಂಬಾ ಕಷ್ಟ. ಆದರೆ ನಾನಿಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆರಿಸುತ್ತೇನೆ. 6ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನನ್ನ ಆಯ್ಕೆ ಆ್ಯಂಡ್ರ್ಯೂ ಸೈಮಂಡ್ಸ್,' ಎಂದು ಫಿಂಚ್ ನುಡಿದರು.

7ರಲ್ಲಿ ಕೂಲ್ ಕ್ಯಾಪ್ಟನ್

7ರಲ್ಲಿ ಕೂಲ್ ಕ್ಯಾಪ್ಟನ್

ಫಿಂಚ್ ಆಯ್ಕೆಯ ಭಾರತ-ಆಸ್ಟ್ರೇಲಿಯಾ ಒಡಿಐ ತಂಡದಲ್ಲಿ 7ನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಇದ್ದಾರೆ. 8ರಲ್ಲಿ ಆಸೀಸ್ ವೇಗಿ ಬ್ರೆಟ್ ಲೀ ಇದ್ದಾರೆ. 9ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಫಿಂಚ್ ಯಾರನ್ನೂ ಹೆಸರಿಸಿಲ್ಲ. ಸ್ಪಿನ್ನರ್‌ನ ಈ ಸ್ಥಾನ ಖಾಲಿಯಿದೆ.

ಫಿಂಚ್ ಆಯ್ಕೆಯ ಆಸ್ಟ್ರೇಲಿಯಾ-ಭಾರತ ಏಕದಿನ ತಂಡ

ಫಿಂಚ್ ಆಯ್ಕೆಯ ಆಸ್ಟ್ರೇಲಿಯಾ-ಭಾರತ ಏಕದಿನ ತಂಡ

ವೀರೇಂದ್ರ ಸೆಹ್ವಾಗ್ (ಭಾರತ), ಆ್ಯಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ (ಭಾರತ), ಹಾರ್ದಿಕ್ ಪಾಂಡ್ಯ (ಭಾರತ), ಆ್ಯಂಡ್ರ್ಯೂ ಸೈಮಂಡ್ಸ್ (ಆಸ್ಟ್ರೇಲಿಯಾ), ಎಂ.ಎಸ್. ಧೋನಿ (ಭಾರತ), ಬ್ರೆಟ್ ಲೀ (ಆಸ್ಟ್ರೇಲಿಯಾ), (ತೀರ್ಮಾನಿಸದ ಸ್ಪಿನ್ ಬೌಲಿಂಗ್ ಆಯ್ಕೆ), ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ), ಜಸ್‌ಪ್ರೀತ್‌ ಬೂಮ್ರಾ (ಭಾರತ).

Story first published: Saturday, June 6, 2020, 10:15 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X