ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರೋನ್ ಫಿಂಚ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ: 10 ವಾರಗಳ ವಿಶ್ರಾಂತಿಗೆ ಸೂಚನೆ

Aaron Finch undergoe successful knee surgery and will be out for around ten weeks

ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್ ಫಿಂಚ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಏಕದಿನ ಸರಣಿಯಿಂದ ಅವರು ಹೊರಗುಳಿದಿದ್ದರು. ಈಗ ಆಸ್ಟ್ರೇಲಿಯಾ ತಂಡದ ನಾಯಕ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಬಾರ್ಬಡೋಸ್‌ನಿಂದ ತವರಿಗೆ ಮರಳಿದ ನಂತರ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದ ಆರೋನ್ ಫಿಂಚ್ ಗುರುವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆಗಿಂತ ಮೊದಲು ಆರೋನ್ ಫಿಂಚ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣವೇ ನನ್ನ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಆರೋನ್ ಫಿಂಚ್ ತಿಳಿಸಿದ್ದರು. ಅದಾದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ನಾಯಕ ಆರೋಫನ್ ಫಿಂಚ್ ಅವರ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ಶಸ್ತ್ರಚಿಕಿತ್ಸೆ ಯೋಜನೆಯಂತೆಯೇ ನಡೆದಿದ್ದು ಆಸ್ಟ್ರೇಲಿಯಾ ತಂಡದ ನಾಯಕ ಚೇತರಿಕೆಯ ಹಾದಿಯಲ್ಲಿದ್ದಾರೆ. ಗುಣಮುಖರಾಗಲು 10 ವಾರಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!

ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಈಗ ಆದಷ್ಟು ಶೀಘ್ರವಾಗಿ ಚೇತರಿಕೆ ಕಾಣುವತ್ತ ದೃಷ್ಟಿನೆಟ್ಟಿದ್ದಾರೆ. ಮಹಿನಿರೀಕ್ಷಿತ ಟಿ20 ವಿಶ್ವಕಪ್ ಹತ್ತಿರವಾಗುತ್ತಿರುವ ಕಾರಣ ಆರೋನ್ ಫಿಂಚ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲವಾದರೆ ಮೆಗಾ ಟೂರ್ನಿಯಿಂದ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದರೂ ಅಚ್ಚರಿಯಿಲ್ಲ.

ಆರೋನ್ ಫಿಂಚ್ ಚೇತರಿಕೆಗೆ 10 ವಾರಗಳ ವಿಶ್ರಾಂತಿಯನ್ನು ಸೂಚಿಸಿರುವ ಕಾರಣದಿಂದಾಗಿ ಈ ಅವಧಿ ಅಕ್ಟೋಬರ್ 21ರ ವರೆಗೆ ಇರಲಿದೆ. ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯಗಳು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಆದರೆ ಆಸ್ಟ್ರೇಲಿಯಾ ತಂಡದ ಸೆಣೆಸಾಟ ಸುಮಾರು ಒಂದು ವಾರಗಳ ಬಳಿಕ ಅಂದರೆ ಅಕ್ಟೋಬರ್ 25ರಿಂದ ಸೂಪರ್ 12 ಹಂತದಿಂದ ಆರಂಭವಾಗಲಿದೆ. ಹೀಗಾಗಿ ಆರೋನ್ ಫಿಂಚ್ ಯಾವುದೇ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಅಗತ್ಯಗಳು ಇಲ್ಲವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳ ಜೊತೆಗೆ ಗ್ರೂಫ್ ಹಂತದಿಂದ ತೇರ್ಗಡೆಯಾದ ಎರಡು ತಂಡಗಳ ಜೊತೆಗೆ ಸೂಪರ್ 12 ಹಂತದಲ್ಲಿ ಸ್ಪರ್ಧೆ ನಡೆಸಲಿದೆ.

ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್‌ಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿಯೇ ಮೊಣಕಾಲಿನ ನೋವು ಕಾಣಿಸಿಕೊಂಡಿತ್ತು. ಆದರೆ ಟಿ20 ಸರಣಿಯಲ್ಲಿ ಸಂಪೂರ್ಣವಾಗಿ ಭಾಗಿಯಾಗಿ ತಂಡವನ್ನು ಮುನ್ನಡೆಸಿದ್ದ ಅವರು ಬಳಿಕ ಏಕದಿನ ಸರಣಿಯಿಂದ ಮಾತ್ರ ಹೊರಗುಳಿದಿದ್ದರು. ಏಕದಿನ ಸರಣಿಗೆ ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು 1-4 ಅಂತರದಿಂದ ಸೋತಿದ್ದರೆ ಏಕದಿನ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ ಬಾಂಗ್ಲಾದೇಶ ಪ್ರವಾಸದಿಂದಲೂ ಹೊರಗುಳಿದಿದ್ದರು ಆರೋನ್ ಫಿಂಚ್

ಎರಡು ರನ್ ಗಳಿಸಿ Rahul ಔಟ್, ಫೇಲ್ಯೂರ್ ಆದ Rahane | Oneindia Kannada

ಇನ್ನು ತನ್ನ ಮೊಣಕಾಲಿನ ಗಾಯದ ಬಗ್ಗೆ ಇತ್ತೀಚೆಗೆ ಆರೋನ್ ಫಿಂಚ್ 'ಸೆನ್' ರೇಡಿಯೋಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮಾಹಿತಿ ನೀಡಿದ್ದರು. "ನಾನು ಪಂದ್ಯದಿಂದ ಹೊರಗುಳಿಯುವ ಮುನ್ನ ಫೀಲ್ಡಿಂಗ್ ಸೆಶನ್‌ನಲ್ಲಿ ಸಣ್ಣ ಗಾಯವಾಗಿತ್ತು. ನನಗೆ ಇದಕ್ಕೂ ಮುನ್ನ ಮಿಣಕಾಲಿನ ಯಾವುದೇ ಸಮಸ್ಯೆಗಳು ಇರಲಿಲ್ಲ. ಅದಾದ ಬಳಿಕ ನನಗೆ ನೋವಾಗಲು ಆರಂಭಿಸಿತ್ತು. ನಾನು ವೆಸ್ಟ್ ಇಂಡೀಸ್‌ನಲ್ಲಿದ್ದಾಗ ಕೆಲ ಸ್ಕ್ಯಾನಿಂಗ್‌ಅನ್ನು ನಡೆಸಿದ್ದೆ. ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಕಾರ್ಟಿಲೇಜ್ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಮೆನಿಸ್ಕಸ್ ಘಾಸಿಗೆ ಒಳಗಾಗಿರುವುದು ಕೂಡ ಕಂಡುಬಂದಿತ್ತು" ಎಂದು ಫಿಂಚ್ ಈ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ.

Story first published: Friday, August 13, 2021, 20:46 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X