ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿವಿಲಿಯರ್ಸ್ ಕರೆ ಮಾಡಿದ್ದರು, ಆದರೆ ಕಾಲ ಮಿಂಚಿಹೋಗಿತ್ತು: ಡು ಪ್ಲೆಸಿಸ್

ICC World Cup 2019 : ವಿಶ್ವಕಪ್ ನಲ್ಲಿ ಡಿವಿಲಿಯರ್ಸ್ ಯಾಕೆ ಆಡ್ಲಿಲ್ಲ ಗೊತ್ತಾ..? | Oneindia Kannada

ಲಂಡನ್, ಜೂನ್ 11: ದಕ್ಷಿಣ ಆಫ್ರಿಕಾದ ಅಬ್ಬರದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತೆ ತಂಡಕ್ಕೆ ಮರಳಲು ಬಯಸಿದ್ದ ಸಂಗತಿ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹೀನಾಯ ಪ್ರದರ್ಶನ ತೋರುವ ವೇಳೆಯೇ ಎಬಿಡಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡು ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡಲು ಬಯಕೆ ವ್ಯಕ್ತಪಡಿಸಿದ್ದ ಸಂಗತಿ ಬಹಿರಂಗವಾಗಿರುವುದರಿಂದ ಈ ಕುರಿತಾದ ಚರ್ಚೆ ತೀವ್ರವಾಗಿದೆ.

ವಿಶ್ವಕಪ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿ ಎಬಿ ಡಿವಿಲಿಯರ್ಸ್ ತಮಗೂ ಕರೆ ಮಾಡಿದ್ದರು ಎಂದು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

ಅಗತ್ಯವಿದ್ದರೆ ತಮ್ಮ ನಿವೃತ್ತಿಯನ್ನು ವಾಪಸ್ ತೆಗೆದುಕೊಂಡು ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧರಾಗಿರುವುದಾಗಿ ಎಬಿಡಿ, ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದ ಅಂತಿಮ ಬಳಗವನ್ನು ಪ್ರಕಟಿಸುವ ಹಿಂದಿನ ರಾತ್ರಿಯಷ್ಟೇ ಕರೆ ಮಾಡಿದ್ದರು.

ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೊಂದು ಸಿಹಿ-ಕಹಿ ಸುದ್ದಿ

ಎಬಿಡಿ ತಂಡಕ್ಕೆ ಮರಳಲು ಬಯಸಿದ್ದ ಸಂಗತಿ ಬಹಿರಂಗವಾಗಿದ್ದು ಮತ್ತು ವಿಶ್ವಕಪ್‌ನ ತಂಡದ ಆಯ್ಕೆಯ ವಿಚಾರವಾಗಿ ಉಂಟಾಗಿರುವ ವಿವಾದಗಳು ತಂಡದ ಆಟಗಾರರ ಮೇಲೆ ಪರಿಣಾಮ ಬೀರಿಲ್ಲ. ಮಿಗಿಲಾಗಿ ಇದು ದಕ್ಷಿಣ ಆಫ್ರಿಕಾವನ್ನು ತಂಡವಾಗಿ ಒಂದುಗೂಡಿಸಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ಎಬಿಡಿ ಬರಲು ಅವಕಾಶವಿರಲಿಲ್ಲ

ಎಬಿಡಿ ಬರಲು ಅವಕಾಶವಿರಲಿಲ್ಲ

ಎಬಿಡಿ ಉತ್ತಮ ಗೆಳೆಯರಾಗಿದ್ದರೂ, ಈ ವಿಚಾರದಲ್ಲಿ ಫಾಫ್ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಆಗಲೇ ತಡವಾಗಿತ್ತು. ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಆಯ್ಕೆ ಮಂಡಳಿ ಆಗಲೇ 15 ಜನರ ತಂಡವನ್ನು ಸಿದ್ಧಪಡಿಸಿತ್ತು. ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳುವ ಬಯಕೆಯ ಕುರಿತು ಆಯ್ಕೆ ಮಂಡಳಿ, ನಾಯಕ ಹಾಗೂ ಕೋಚ್‌ಗೆ ತಿಳಿದಿದ್ದರೂ ಪ್ರಕಟಗೊಂಡ ಅಂತಿಮ ತಂಡದಲ್ಲಿ ಅವರ ಹೆಸರು ಇರಲಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ.

ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

ಸ್ವಲ್ಪ ಹೊತ್ತು ಮಾತನಾಡಿದ್ದಷ್ಟೇ

ಸ್ವಲ್ಪ ಹೊತ್ತು ಮಾತನಾಡಿದ್ದಷ್ಟೇ

'ಅಂದು ಸ್ವಲ್ಪ ಸಮಯ ಮಾತನಾಡಿದ್ದಷ್ಟೇ. ತಂಡದ ಘೋಷಣೆ ಮಾಡುವ ಹಿಂದಿನ ರಾತ್ರಿ ಅವರು ಕರೆ ಮಾಡಿದ್ದರು. ಈಗ ತುಂಬಾ ವಿಳಂಬವಾಗಿದೆ. ಆದರೆ ಮರುದಿನ ಬೆಳಿಗ್ಗೆ ಕೋಚ್ ಹಾಗೂ ಆಯ್ಕೆದಾರರೊಂದಿಗೆ ಮಾತನಾಡುತ್ತೇನೆ ಎಂದು ಅವರಿಗೆ ತಿಳಿಸಿದ್ದೆ' ಎಂಬುದಾಗಿ ಫಾಫ್ ಹೇಳಿದ್ದಾರೆ.

'ಕೋಚ್ ಮತ್ತು ಆಯ್ಕೆದಾರರೊಂದಿಗೆ ಮಾತನಾಡಿದಾಗ, ಎಲ್ಲರದೂ ಒಂದೇ ಅಭಿಪ್ರಾಯವಾಗಿತ್ತು. ತಂಡವನ್ನು ಬದಲಿಸುವುದು ಶೇ 99.99ರಷ್ಟು ಕಷ್ಟ. ಏಕೆಂದರೆ ಈಗಾಗಲೇ ತಡವಾಗಿದೆ ಎಂದು ಹೇಳಿದರು' ಎಂದು ಫಾಫ್ ವಿವರಿಸಿದ್ದಾರೆ.

ಗೆಳೆತನಕ್ಕೆ ಭಂಗವಿಲ್ಲ

ಗೆಳೆತನಕ್ಕೆ ಭಂಗವಿಲ್ಲ

ಎಬಿ ಡಿವಿಲಿಯರ್ಸ್ ಅವರನ್ನು ತಂಡಕ್ಕೆ ಪರಿಗಣಿಸದೆಯೇ ಇರುವುದು ತಮ್ಮ ನಡುವಿನ ಸಂಬಂಧಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 'ನಾನು ಮತ್ತು ಎಬಿಡಿ ಈಗಲೂ ಸ್ನೇಹಿತರು. ಈ ಘಟನೆ ಅದನ್ನು ಬದಲಿಸಿಲ್ಲ. ಸುದೀರ್ಘ ಕಾಲದ ಗೆಳೆತನಕ್ಕೆ ಇದು ಸಣ್ಣ ಸಂಗತಿಯಷ್ಟೇ' ಎಂದಿದ್ದಾರೆ.

ತಂಡದ ಮೇಲೆ ಪರಿಣಾಮವಾಗಿಲ್ಲ

ತಂಡದ ಮೇಲೆ ಪರಿಣಾಮವಾಗಿಲ್ಲ

'ಸುದ್ದಿ ಬಂದು ತಂಡದ ಮಧ್ಯೆ ಹಾದುಹೋಯಿತು ಎಂದಷ್ಟೇ ನಮಗೆ ಅನುಭವವಾಯಿತು. ಇದರಿಂದ ಅಂತಹ ದೊಡ್ಡ ಪರಿಣಾಮವೇನೂ ಆಗಿಲ್ಲ. ಏನಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಲು ಹಾಗೂ ಮುಂದೆ ಸಾಗಲು ಸ್ಪಷ್ಟನೆ ಇರುವ ಸಲುವಾಗಿಯಷ್ಟೇ ಚರ್ಚೆ ನಡೆದಿತ್ತು ಎಂದು ತಿಳಿಸಿದ್ದಾರೆ.

ಮರಳಲು ಬಯಸಿದ್ದ ಎಬಿಡಿ

ಮರಳಲು ಬಯಸಿದ್ದ ಎಬಿಡಿ

35 ವರ್ಷದ ಎಬಿಡಿ, ಕಳೆದ ವರ್ಷದ ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಐಪಿಎಲ್‌ನಲ್ಲಿ ಆಡಿದ್ದ ಅವರು, ವಿಶ್ವಕಪ್‌ನ ಅಂತಿಮ 15ರ ತಂಡವನ್ನು ಪ್ರಕಟಿಸುವ ಹಿಂದಿನ ದಿನವಷ್ಟೇ ತಂಡದ ನಾಯಕ ಫ್ಲಾಪ್ ಡು ಪ್ಲೆಸಿಸ್, ಕೋಚ್ ಒಟ್ಟಿಸ್ ಗಿಬ್ಸನ್ ಮತ್ತು ಆಯ್ಕೆದಾರರ ಸಂಚಾಲಕ ಲಿಂಡಾ ಜೊಂಡಿ ಅವರನ್ನು ಸಂಪರ್ಕಿಸಿ ಮಾತನಾಡಿ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ, ಅವರ ಮನವಿಯನ್ನು ಪರಿಗಣಿಸಿರಲಿಲ್ಲ ಎಂದು ವರದಿ ಹೇಳಿತ್ತು.

Story first published: Tuesday, June 11, 2019, 15:08 [IST]
Other articles published on Jun 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X