ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಆರ್‌ಸಿಬಿ ಆಪದ್ಬಾಂಧವ ಎಬಿ ಡಿವಿಲಿಯರ್ಸ್

ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿರುವ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಎಬಿ ಡಿವಿಲಿಯರ್ಸ್ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದು ಐಪಿಎಲ್ ಸಹಿತ ಉಳಿದ ಎಲ್ಲಾ ಕ್ರಿಕೆಟ್‌ನಿಂದಲೂ ನಿವೃತ್ತಿಯನ್ನು ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮೂಲದ ಈ ದಿಗ್ಗಜ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿಯನ್ನು ಪಡೆದಿದ್ದರು. ಆದರೆ ಲೀಗ್ ಕ್ರಿಕೆಟ್‌ಗಳ ಮೂಲಕ ಸಕ್ರಿಯವಾಗಿದ್ದು ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಕಳೆದ ಹಲವು ವರ್ಷಗಳಿಮದ ಆರ್‌ಸಿಬಿ ಪರವಾಗಿ ಐಪಿಎಲ್‌ನಲ್ಲಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೊಂದು ಅದ್ಭುತವಾದ ಪ್ರಯಾಣವಾಗಿದ್ದು ಈಗ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಘೋಷಿಸಿದ್ದಾರೆ.

ಬಾಲ್ಯದಲ್ಲಿ ಸೋದರರ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಶುದ್ಧ ಆನಂದ ಹಾಗೂ ಉತ್ಸಾಹದಿಂದಲೇ ಈವರೆಗೂ ಆಡಿದ್ದೇನೆ. ಈಗ 37ನೇ ವಯಸ್ಸಿನಲ್ಲಿ ನನಗೆ ತುಂಬಾ ಪ್ರಖರವಾಗಿ ಬೆಳಗಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಸತ್ಯವನ್ನು ನಾನು ಒಪ್ಪಿಕೊಳ್ಳಬೇಕಿದೆ. ಇದು ತಕ್ಷಣದ ನಿರ್ಧಾರದಂತೆ ಅನಿಸಿದರೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಸಮಯ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣವಾದ ಪ್ರಭಾವ ಬೀರಿದೆ" ಎಂದು ಎಬಿ ಡಿವಿಲಿಯರ್ಸ್ ಟ್ವಿಟ್ಟರ್‌ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಾ ಬರೆದುಕೊಂಡಿದ್ದಾರೆ.

"ಕ್ರಿಕೆಟ್ ನನಗೆ ಅಪಾರವಾದ ಕರುಣೆ ತೋರಿಸಿದೆ. ನಾನು ಟೈಟಾನ್ಸ್ ಪರವಾಗಿ ಆಡುವಾಗ ಅಥವಾ ಪ್ರೊಟೀಸ್ ಪರವಾಗಿ ಅಥವಾ ಆರ್‌ಸಿಬಿ ಪರವಾಗಿ ಆಡುವಾದ ಅಥವಾ ವಿಶ್ವಾದ್ಯಂತ ಆಡುವಾಗ ಈ ಕ್ರೀಡೆ ನನಗೆ ಊಹಿಸಲೂ ಸಾಧ್ಯವಾಗದ ಅನುಭವ ಹಾಗೂ ಅವಕಾಶವನ್ನು ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಕೊನೆಯದಾಗಿ ತನಗೆ ಸಹಕಾರ ನೀಡಿದ ಕುಟುಂಬಕ್ಕೆ ಎಬಿ ಡಿವಿಲಿಯರ್ಸ್ ಧನ್ಯವಾದ ಸಲ್ಲಿಸಿದ್ದಾರೆ. "ಅಂತಿಮವಾಗಿ, ನನ್ನ ಕುಟುಂಬ ನನ್ನ ಹೆತ್ತವರು, ನನ್ನ ಸೋದರರು, ನನ್ನ ಪತ್ನಿ ಡೇನಿಯೆಲ್ ಹಾಗೂ ನನ್ನ ಮಕ್ಕಳು ನನಗಾಗಿ ತ್ಯಾಗವನ್ನು ಮಾಡದಿದ್ದರೆ ನನ್ನಿಂದ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೀನ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ" ಎಂದು ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ ಎಬಿ ಡಿವಿಲಿಯರ್ಸ್ ಹಂಚಿಕೊಂಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ ಭಾರತದಲ್ಲಿ ಪಡೆದುಕೊಂಡ ಬೆಂಬಲಕ್ಕೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ.

ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada

2008ರಿಂದಲೂ ಐಪಿಎಲ್‌ನಲ್ಲಿ ಸಕ್ರಿಯ: ಎಬಿ ಡಿವಿಲಿಯರ್ಸ್ ಐಪಿಎಲ್‌ನ ಆರಂಭಿಕ ಆವೃತ್ತಿಯಿಂದಲೂ ಸಕ್ರಿಯವಾಗಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆರಂಭಿಕ ಮೂರು ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರು. ನಂತರ 2011ರ ಆವೃತ್ತಿಯಲ್ಲಿ 5 ಕೋಟಿ ಮೊತ್ತಕ್ಕೆ ಆರ್‌ಸಬಿ ಪಾಲಾದರು. ಅದಾದ ಬಳಿಕ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಎಬಿ ಡಿವಿಲಿಯರ್ಸ್. ಅನೇಕ ಪಮದ್ಯಗಳಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ ಎಬಿ ಡಿವಲಿಯರ್ಸ್.

For Quick Alerts
ALLOW NOTIFICATIONS
For Daily Alerts
Story first published: Friday, November 19, 2021, 12:55 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X