ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫೈನಲ್‌ಗಿನ್ನು ಒಂದು ದಿನ ಬಾಕಿಯಿರುವಾಗ ಮೌನ ಮುರಿದ ಎಬಿಡಿ!

ICC World Cup 2019 : ಕೊನೆಗೂ ಮೌನ ಮುರಿದ ಡಿವಿಲಿಯರ್ಸ್..! | AB de Villiers
AB de Villiers breaks silence on his way into South Africa’s World Cup squad

ಜೊಹಾನ್ಸ್‌ಬರ್ಗ್, ಜುಲೈ 12: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಐಸಿಸಿ ವಿಶ್ವಕಪ್ 2019ಕ್ಕೆ ಇನ್ನು ಒಂದು ದಿನ ಬಾಕಿಯಿದೆ ಅನ್ನುವಾಗ ಮೌನ ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡಕ್ಕೆ ಸೇರಲು ನಾನು ಯಾರನ್ನೂ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯ ಆರಂಭಿಕ 4 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಸತತ ಸೋಲು ಕಂಡಿತ್ತು. ಆಫ್ರಿಕಾ ತಂಡದಲ್ಲಿ ಗಮನಾರ್ಹ ಬದಲಾವಣೆಗಳಾಗಬೇಕಿದೆ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಶುರುವಾಗಿತ್ತು. ಈ ವೇಳೆ ಎಬಿಡಿಗೆ ತಾಗಿ ವಿವಾದವೊಂದೂ ಸೃಷ್ಟಿಯಾಗಿತ್ತು.

ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!ಗಿಮಿಕ್‌ಗಳನ್ನು ಮಾಡೋದನ್ನು ನಿಲ್ಲಿಸಿ: ಎಬಿಡಿಯತ್ತ ಬೌನ್ಸರ್ ಎಸೆದ ಅಖ್ತರ್!

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನ, ಎಬಿಡಿ ನಿವೃತ್ತಿ-ವಿವಾದ-ಸ್ಪಷ್ಟನೆಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

ಭಾರತ-ದಕ್ಷಿಣ ಆಫ್ರಿಕಾ ಪಂದ್ಯ

ಭಾರತ-ದಕ್ಷಿಣ ಆಫ್ರಿಕಾ ಪಂದ್ಯ

ಜೂನ್ 5ರಂದು ವಿಶ್ವಕಪ್ ಮೊದಲ ಮುಖಾಮುಖಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಸೋಲನುಭವಿಸಿದಾಗ ವಿವಾದ ಸೃಷ್ಟಿಯಾಗಿತ್ತು. ವರದಿಯ ಪ್ರಕಾರ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ, ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದ ಎಬಿಡಿ ನಿವೃತ್ತಿ ಹಿಂಪಡೆದು ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತಾನು ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡ ಸೇರಲು ಬಯಸಿರಲಿಲ್ಲ. ಮುಖ್ಯವಾಗಿ ಇದಕ್ಕೆ ಒತ್ತಾಯಿಸಿರಲಿಲ್ಲ ಎಂದು ಎಬಿಡಿ ತಿಳಿಸಿದ್ದಾರೆ.

ಯಾರನ್ನೂ ಒತ್ತಾಯಿಸಿಲ್ಲ

ಅಂದು ಸೃಷ್ಟಿಯಾಗಿದ್ದ ಆ ವಿವಾದಕ್ಕೆ ಈಗ ಸ್ಪಷ್ಟನೆ ನೀಡಲು ಮುಂದಾಗಿರುವ ಎಬಿಡಿ, ಟ್ವಿಟರ್‌ನಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡದಲ್ಲಿ ತನ್ನನ್ನು ಸೇರಿಸಿ ಎಂದು ಒತ್ತಾಯ ಮಾಡಿಲ್ಲ. ಬದಲಿಗೆ ದೇಸಿ ತಂಡಕ್ಕೆ ನನ್ನ ಅಗತ್ಯವಿದ್ದರೆ ನಾನು ಸೇವೆ ಸಲ್ಲಿಸಲು ಸಿದ್ಧನಿದ್ದೇನೆ ಎಂಬುದಷ್ಟೇ ಹೇಳಿದ್ದೆ ಎಂದು ವಿಸ್ತೃತ ವಿವರಣೆ ನೀಡಿದ್ದಾರೆ. ಎಬಿಡಿ ಟ್ವಿಟರ್ ಪೋಸ್ಟ್ ಮೇಲಿದೆ.

ದಕ್ಷಿಣ ಆಫ್ರಿಕಾಕ್ಕೆ ಏಳನೇ ಸ್ಥಾನ

ದಕ್ಷಿಣ ಆಫ್ರಿಕಾಕ್ಕೆ ಏಳನೇ ಸ್ಥಾನ

ಶುಕ್ರವಾರ (ಜುಲೈ 12) ಸ್ಪಷ್ಟನೆ ನೀಡಿ ಮಾಡಿರುವ ಟ್ವೀಟ್‌ ಹೇಳಿಕೆಯಲ್ಲಿ ಎಬಿಡಿ, 'ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಸವಾಲು ಅಂತ್ಯಗೊಂಡಿದೆ. ತಂಡಕ್ಕೆ ಇದರಿಂದ ತೊಂದರೆಯೇನಿಲ್ಲ. ಹೀಗಾಗಿ ಟೂರ್ನಿಯ ವೇಳೆ ಹುಟ್ಟಿಕೊಂಡ ವಿವಾದ, ಟೀಕೆಗಳಿಗೆ ನಾನಿವತ್ತು ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ವಿಶ್ವಕಪ್‌ನ 9 ಪಂದ್ಯಗಳಲ್ಲಿ ಆಫ್ರಿಕಾ 3 ಗೆಲುವು, 5 ಸೋಲು, 1 ಪಂದ್ಯ ರದ್ದಾಗಿಸಿಕೊಂಡಿತ್ತು. ಸದ್ಯ ಅಂಕಪಟ್ಟಿಯಲ್ಲಿ ಪ್ರೋಟಿಯಾಸ್ 7ನೇ ಸ್ಥಾನದಲ್ಲಿದೆ.

ಅಖ್ತರ್‌ಗೆ ಎಬಿಡಿ ತಿರುಗೇಟು

ಅಖ್ತರ್‌ಗೆ ಎಬಿಡಿ ತಿರುಗೇಟು

ಮೇ 2018ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದೆ ಯಾಕೆಂದರೆ ನಾನು ನನ್ನ ಕೆಲದ ಒತ್ತಡವನ್ನು ಕಡಿಮೆಗೊಳಿಸಿ ಪತ್ನಿ ಮತ್ತು ಪುಟಾಣಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದೆ. ಆದರೆ ಇದನ್ನು ಕೆಲವರು ನಾನು ನಿವೃತ್ತಿ ಹೇಳಿದ್ದು ಹಣದಾಸೆಗಾಗಿ ಎಂದರು. ದೇಶ ಬದಿಗಿಟ್ಟು ಹಣಕ್ಕಾಗಿ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ನಾನು ಹೀಗೆ ಮಾಡಿದೆ ಎಂದು ಒಂದಿಷ್ಟು ಮಂದಿ ಆಡಿಕೊಂಡರು. ಆದರೆ ಅವರ ಹೇಳಿಕೆ ಸರಿಯಲ್ಲ ಎಂದು ಎಬಿಡಿ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ವಿವಾದದ ವೇಳೆ ಪಾಕ್ ಕ್ರಿಕೆಟರ್ ಶೋಯೆಬ್ ಅಖ್ತರ್ ಎಬಿಡಿಯನ್ನು ಹೆಚ್ಚು ಟೀಕಿಸಿದ್ದರು.

Story first published: Friday, July 12, 2019, 18:43 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X