ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: 4,000 ರನ್‌ನೊಂದಿಗೆ ದಾಖಲೆ ಬರೆದ ಎಬಿ ಡಿವಿಲಿಯರ್ಸ್

AB de Villiers completes 4000 runs in IPL, joins elite list of overseas players

ಬೆಂಗಳೂರು, ಮಾರ್ಚ್ 29: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಯರ್ಸ್ ಗುರುವಾರ (ಮಾರ್ಚ್ 28) ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದರು. ಅಲ್ಲದೆ ಐಪಿಎಲ್‌ನಲ್ಲಿ ದಾಖಲೆಗೂ ಕಾರಣರಾಗಿದ್ದಾರೆ.

ಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯಐಪಿಎಲ್: ರಾಯಲ್ ಚಾಲೆಂಜರ್ಸ್ ವಿರುದ್ಧ ಇಂಡಿಯನ್ಸ್‌ಗೆ ರೋಚಕ ಜಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಮೈದಾನಕ್ಕಿಳಿದಿದ್ದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ, 41 ಎಸೆತಗಳಿಗೆ 70 ರನ್ ಬಾರಿಸಿದ್ದರು. ಇದರಲ್ಲಿ 4 ಫೋರ್‌ ಮತ್ತು 6 ಸಿಕ್ಸ್‌ಗಳೂ ಸೇರಿದ್ದವು. ಈ ರನ್‌ನೊಂದಿಗೆ ಎಬಿಡಿ ಐಪಿಎಲ್‌ನಲ್ಲಿ 4000 ರನ್ ಪೂರೈಸಿದ ಸಾಧನೆಗೂ ಕಾರಣರಾದರು.

ಐಪಿಎಲ್‌ನಲ್ಲಿ 4000 ರನ್ ಬಾರಿಸಿದ ಎಬಿ ಡಿ ವಿಲಿಯರ್ಸ್, ಈ ಸಾಧನೆ ಮಾಡಿದ 3ನೇ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡರು. ವಿದೇಶಿ ಆಟಗಾರರಲ್ಲಿ ಇದೇ ಸಾಧನೆಯನ್ನು ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್, ಕಿಂಗ್ಸ್‌ ಇಲೆವೆನ್ ಪಂಜಾಬ್‌ನ ಕ್ರಿಸ್‌ಗೇಲ್ ಕೂಡ ಮಾಡಿದ್ದಾರೆ.

ಸ್ಮಿತ್-ವಾರ್ನರ್ ನಿಷೇಧ ಅಂತ್ಯ, ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ?ಸ್ಮಿತ್-ವಾರ್ನರ್ ನಿಷೇಧ ಅಂತ್ಯ, ಆಸ್ಟ್ರೇಲಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆ?

ಗುರುವಾರದ ಪಂದ್ಯದಲ್ಲಿ ಎಬಿಡಿ ಮೊದಲ ಎಸೆತದಲ್ಲೇ ಕ್ಯಾಚಿತ್ತು ಔಟ್ ಆಗುವುದರಲ್ಲಿದ್ದರು. ಆದ್ರೆ ಕ್ಯಾಚ್ ಡ್ರಾಪ್ ಅನ್ನಿಸಿತ್ತು. ಹೀಗೆ ಬಚಾವಾದ ಎಬಿಡಿ, ಆರ್‌ಸಿಬಿ ಪರ ಭರ್ಜರಿ ಬ್ಯಾಟ್ ಬೀಸಿದ್ದರು. ಆದರೆ ಅಂಪೈರ್ ಎಡವಟ್ಟಿನಿಂದಾಗಿ ರೋಚಕ ಪಂದ್ಯವನ್ನು ಆರ್‌ಸಿಬಿ 6 ರನ್‌ನಿಂದ ಕಳೆದುಕೊಂಡಿತ್ತು.

Story first published: Friday, March 29, 2019, 18:14 [IST]
Other articles published on Mar 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X