ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್‌ಎಲ್‌: ಮತ್ತೆ ಕ್ರಿಕೆಟ್ ರಸದೌತಣ ಬಡಿಸಲಿದ್ದಾರೆ ಎಬಿ ಡಿ ವಿಲಿಯರ್ಸ್!

AB De Villiers Headlines New South African T20 League

ಕೇಪ್‌ಟೌನ್, ನವೆಂಬರ್ 15: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಶುಕ್ರವಾರ (ನವೆಂಬರ್ 16) ಆರಂಭವಾಗಲಿರುವ ಮಝನ್ಸಿ ಸೂಪರ್ ಲೀಗ್ ನಲ್ಲಿ ಎಬಿಡಿ ಕ್ರಿಕೆಟ್ ಅಭಿಮಾನಿಗಳನ್ನು ಮತ್ತೆ ರಂಜಿಸಲಿದ್ದಾರೆ.

ಎಂಎಸ್‌ಎಲ್‌ ಟಿ20: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಭಾರತದ ಅಧಿಕೃತ ಪ್ರಸಾರಕಎಂಎಸ್‌ಎಲ್‌ ಟಿ20: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಭಾರತದ ಅಧಿಕೃತ ಪ್ರಸಾರಕ

ಕೇಪ್‌ ಟೌನ್‌ನ ನ್ಯೂ ಲ್ಯಾಂಡ್ಸ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ಉದ್ಘಾಟನಾ ಪಂದ್ಯದಲ್ಲಿ ಕೇಪ್ ಟೌನ್ ಬ್ಲಿಟ್ಜ್ ಮತ್ತು ಷ್ವಾನೆ ಸ್ಪಾರ್ಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಷ್ವಾನೆ ಸ್ಪಾರ್ಟನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವಿಲಿಯರ್ಸ್ ತಂಡದ ಮುಂದಾಳತ್ವವನ್ನೂ ವಹಿಸಿಕೊಂಡಿದ್ದಾರೆ.

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ಉಳಿಸಿಕೊಂಡ ಪಂಕಜ್ ಅಡ್ವಾಣಿವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ಉಳಿಸಿಕೊಂಡ ಪಂಕಜ್ ಅಡ್ವಾಣಿ

ಅನೇಕ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಮೊದಲ ಆವೃತ್ತಿಯ ಮಝನ್ಸಿ ಸೂಪರ್ ಲೀಗ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಆಕರ್ಷಣೀಯ ಆಟಗಾರರಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ

ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ

ಜೋಜಿ ಸ್ಟಾರ್ಸ್ ವಿರುದ್ಧ ಬುಧವಾರ (ನವೆಂಬರ್ 14) ನಡೆದ ಅಭ್ಯಾಸ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ನಿವೃತ್ತಿ ಹೇಳಿದ ಬಳಿಕ ಎಬಿಡಿ ಆಡಿದ ಮೊದಲ ಪಂದ್ಯವಿದು. ಈ ವೇಳೆ ಕೇವಲ 31 ಎಸೆತಗಳಲ್ಲಿ ವಿಲಿಯರ್ಸ್ 93 ರನ್ ಚಚ್ಚುವ ಮೂಲಕ ಟೂರ್ನಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಬಡಿಸುವ ಮುನ್ಸೂಚನೆ ನೀಡಿದ್ದರು. ಅದ್ಹಾಗೆ ಅಭ್ಯಾಸ ಪಂದ್ಯದಲ್ಲಿ ಎಬಿಡಿಯ ಸ್ಪಾರ್ಟನ್ಸ್ ತಂಡ ಜೋಜಿ ಸ್ಟಾರ್ಸ್ ತಂಡವನ್ನು 5 ರನ್ ನಿಂದ ಸೋಲಿಸಿತ್ತು.

ಕಾಯಲು ಸಾಧ್ಯವಿಲ್ಲ

ಕಾಯಲು ಸಾಧ್ಯವಿಲ್ಲ

ಲೀಗ್ ಕುರಿತು ಎಬಿಡಿ ವೆಬ್‌ಸೈಟ್‌ ಒಂದರಲ್ಲಿ ಮಾತನಾಡುತ್ತ, 'ಮಝನ್ಸಿ ಸೂಪರ್ ಲೀಗ್ ಪ್ರಾರಂಭವಾಗುವವರೆಗೂ ಕಾಯಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಈಗಾಗಲೇ ಜಿಮ್ ನಲ್ಲಿ ಶ್ರಮಿಸುತ್ತಿದ್ದೇನೆ. ನೆಟ್‌ ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಮೈದಾನಕ್ಕಿಳಿಯುವ ಮೊದಲೇ ಫಿಟ್‌ ಆಗಿರಲು ಮಾಡಿಕೊಂಡ ವ್ಯವಸ್ಥೆಯಿದು' ಎಂದು ಕ್ರಿಕೆಟ್‌ಯೆಡೆಗಿನ ತನ್ನ ತುಡಿತವನ್ನು ತೋರಿಕೊಂಡಿದ್ದರು.

ಬೆಂಗಳೂರಿನ ನೆಚ್ಚಿನ ಆಟಗಾರ

ಬೆಂಗಳೂರಿನ ನೆಚ್ಚಿನ ಆಟಗಾರ

ಆಕರ್ಷಣೀಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದ ಮೆಚ್ಚಿನ ಆಟಗಾರ ಎಬಿಡಿ. ಕೊಹ್ಲಿಗೂ ಅಷ್ಟೇ ಆತ್ಮೀಯ ಗೆಳೆಯ. ಬೆಂಗಳೂರು ತಂಡ ಕಳೆದ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ನೀಡಿತ್ತಾದರೂ ಮೈದಾನಕ್ಕಿಳಿಯುವಾಗ ಪ್ರತೀಸಾರಿಯೂ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ಪ್ರಮುಖಾಕರ್ಷಣೆಯಾಗಿರುತ್ತಿದ್ದರು.

ಕೇಪ್ ಟೌನ್ ಬ್ಲಿಟ್ಜ್ ತಂಡ

ಕೇಪ್ ಟೌನ್ ಬ್ಲಿಟ್ಜ್ ತಂಡ

ಎಂಎಸ್‌ಎಲ್‌ ಆರಂಭಿಕ ಪಂದ್ಯಕ್ಕಾಗಿ ಕೇಪ್ ಟೌನ್ ಬ್ಲಿಟ್ಜ್ ತಂಡ: ಡೇಲ್ ಸ್ಟೇಯ್ನ್, ಸ್ಯಾಮ್ಯುಯೆಲ್ ಬದ್ರಿ, ದಾಯಿದ್ ಮಲಾನ್, ಫಾರನ್ ಬೆಹಾರ್ಡಿಯನ್ (ಸಿ), ಕ್ವಿಂಟನ್ ಡಿ ಕೊಕ್ (ವಿ), ಡೇನ್ ಪೀಡ್ಟ್, ಆಸಿಫ್ ಅಲಿ, ಜಾಸನ್ ಸ್ಮಿತ್, ಅಂಡೈಲ್ ಫೆಹಲ್ಕ್ವೇವೊ, ಮಾಲುಸಿ ಸಿಬೋಟೊ, ಸಿಬೋನೆಲೋ ಮಖನ್ಯಾ, ಜಾರ್ಜ್ ಲಿಂಡೆ, ಫೆರಿಸ್ಕೋ ಆಡಮ್ಸ್, ಕೈಲ್ ವೆರ್ರೆನ್ನೆ, ಆರಿಚ್ ನಾರ್ಟ್ಜೆ, ಜನ್ಮನ್ ಮಲಾನ್.

ತ್ವಾನೆ ಸ್ಪಾರ್ಟನ್ಸ್ ತಂಡ

ತ್ವಾನೆ ಸ್ಪಾರ್ಟನ್ಸ್ ತಂಡ

ಎಬಿ ಡಿ ವಿಲಿಯರ್ಸ್ (ಸಿ), ಸೀನ್ ವಿಲಿಯಮ್ಸ್, ಇಯಾನ್ ಮೋರ್ಗಾನ್, ರೋರಿ ಕ್ಲೆನ್ವೆಲ್ದ್ಟ್, ಡೀನ್ ಎಲ್ಗರ್, ಜೀವನ್ ಮೆಂಡಿಸ್, ರಾಬಿ ಫ್ರಿಲಿನ್ಕ್, ಆಂಡ್ರ್ಯೂ ಬಿರ್ಚ್, ಗಿಹಾಹ್ನ್ ಕ್ಲಾಯೆಟೆ (ವಿಕೆ), ಥುನಿಸ್ ಡೆ ಬ್ರುಯಿನ್, ಸಿಕಂದರ್ ರಾಝಾ, ಲುಂಗಿ ಎನ್ಗಿ, ಶಾನ್ ವಾನ್ ಬರ್ಗ್, ಎಲ್ಡ್ರೆಡ್ ಹಾಕೆನ್, ಟೋನಿ ಡಿ ಜೋರ್ಜಿ, ಲುಥೊ ಸಿಪಮ್ಲಾ.

Story first published: Thursday, November 15, 2018, 16:45 [IST]
Other articles published on Nov 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X