ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs KKR: ಇದು ವಿರಾಟ್ ಕೊಹ್ಲಿಗಿರುವ ನಿಯತ್ತನ್ನು ತೋರಿಸುತ್ತದೆ ಎಂದ ಹೆಡ್ ಕೋಚ್

AB de Villiers, Mohammed Siraj and others congratulate Virat Kohli ahead of his 200th match for RCB

ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 29 ಪಂದ್ಯಗಳು ಮುಗಿದ ಬಳಿಕ ವಿವಿಧ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಎಚ್ಚೆತ್ತುಕೊಂಡ ಬಿಸಿಸಿಐ ಟೂರ್ನಿಯನ್ನು ಕೂಡಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಿತ್ತು.

ಹೀಗೆ ಭಾರತದಲ್ಲಿ ಆರಂಭವಾಗಿ ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಇದೀಗ ಯುಎಇಯಲ್ಲಿ ಮುಂದುವರಿಸಲಾಗುತ್ತಿದ್ದು ಸೆಪ್ಟೆಂಬರ್ 19ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ದ್ವಿತೀಯ ಭಾಗ ಆರಂಭವಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 20 ರನ್‌ಗಳ ಜಯವನ್ನು ಸಾಧಿಸಿದ್ದು ಸದ್ಯ ಐಪಿಎಲ್ ವೀಕ್ಷಕರ ಕಣ್ಣು ಸೆಪ್ಟೆಂಬರ್ 20ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮೇಲಿದೆ.

ಇನ್ನು ಈ ಪಂದ್ಯ ಆರಂಭಕ್ಕೂ ಮುನ್ನ ಸಾಕಷ್ಟು ರೋಚಕತೆ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲನೇ ಹಂತದಲ್ಲಿ ಈ ಎರಡೂ ತಂಡಗಳು ಸೆಣಸಾಡಿದ್ದಾಗ ಬೆಂಗಳೂರು ತಂಡ ಬೃಹತ್ ಮೊತ್ತವನ್ನು ದಾಖಲಿಸುವುದರ ಮೂಲಕ ಕೋಲ್ಕತ್ತಾ ವಿರುದ್ಧ 38 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿರುವ ಈ ಎರಡೂ ತಂಡಗಳ ನಡುವೆ ದೊಡ್ಡ ಮಟ್ಟದ ಪೈಪೋಟಿ ನಡೆಯುವುದು ಖಚಿತ.

ಇನ್ನು ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯುವುದರ ಜೊತೆಗೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಯಾವ ಆಟಗಾರನೂ ಮಾಡಿರದ ದಾಖಲೆಯೊಂದನ್ನು ಮಾಡಲಿದ್ದಾರೆ. ಹೌದು, ಸೆಪ್ಟೆಂಬರ್ 20ರ ಸೋಮವಾರದಂದು ಅಬುಧಾಬಿಯಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೆಂಗಳೂರು ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ 200ನೇ ಐಪಿಎಲ್ ಪಂದ್ಯವನ್ನು ಆಡಲಿದ್ದು, ಈ ಎಲ್ಲಾ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ ಇದುವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮಾತ್ರ ಆಟವಾಡಿರುವ ವಿರಾಟ್ ಕೊಹ್ಲಿ ಒಂದೇ ಫ್ರಾಂಚೈಸಿಯ ಪರ 200 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ಇನ್ನುಳಿದಂತೆ ಕೆಲ ಆಟಗಾರರು 200ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ್ದರೂ ಸಹ ಒಂದೇ ಫ್ರಾಂಚೈಸಿ ಪರ ಯಾರೂ ಸಹ 200 ಪಂದ್ಯಗಳನ್ನಾಡಿಲ್ಲ

ಹೀಗೆ ಐಪಿಎಲ್ ಇತಿಹಾಸದಲ್ಲಿ ಯಾರು ಮಾಡಿರದ ಸಾಧನೆಯನ್ನು ಮಾಡಲಿರುವ ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷವಾದ ವಿಡಿಯೋವೊಂದನ್ನು ಟ್ವೀಟ್ ಮಾಡುವ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದೆ. ಈ ವಿಡಿಯೋದಲ್ಲಿ ತರಬೇತುದಾರರ ವರ್ಗ, ಸಿಬ್ಬಂದಿ ವರ್ಗ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ವಿರಾಟ್ ಕೊಹ್ಲಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು ಶುಭ ಕೋರಿದ್ದಾರೆ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 200 ಪಂದ್ಯಗಳನ್ನು ಪೂರೈಸಿ ದಾಖಲೆ ಬರೆಯುತ್ತಿರುವ ಸಲುವಾಗಿ ಟ್ವೀಟ್ ಮಾಡಲಾಗಿರುವ ವಿಶೇಷ ವಿಡಿಯೋ ಈ ಕೆಳಕಂಡಂತಿದೆ ನೋಡಿ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 200 ಪಂದ್ಯಗಳನ್ನು ಪೂರೈಸಿ ವಿರಾಟ್ ಕೊಹ್ಲಿ ಮಾಡಲಿರುವ ಸಾಧನೆ ಮಹತ್ತರವಾದದ್ದು, ಇಂತಹ ಆಟಗಾರ ನಮ್ಮ ತಂಡದಲ್ಲಿರುವುದು ಹೆಮ್ಮೆ ಅನಿಸುತ್ತದೆ, ವಿರಾಟ್ ಕೊಹ್ಲಿ ಓರ್ವ ದಂತಕತೆ ಎಂದು ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ.

ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ಆಯ್ಕೆಯಾಗಿರುವ ಮೈಕ್ ಹೆಸನ್ ಕೂಡ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 200 ಪಂದ್ಯಗಳನ್ನು ಆಡುತ್ತಿರುವುದರ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದು, ಇದು ವಿರಾಟ್ ಕೊಹ್ಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಇರುವ ಅಭಿಮಾನ ಮತ್ತು ನಿಯತ್ತನ್ನು ತೋರಿಸುತ್ತದೆ, ವಿರಾಟ್ ನಿಜವಾಗಲೂ ನಿಸ್ವಾರ್ಥಿ ಎಂದು ಮೈಕ್ ಹೆಸ್ಸನ್ ಕೊಂಡಾಡಿದ್ದಾರೆ.

ನನ್ನಂತಹ ಹಲವಾರು ಯುವ ಕ್ರಿಕೆಟಿಗರಿಗೆ ನೀವು ಸ್ಫೂರ್ತಿ, ಯುವ ಕ್ರಿಕೆಟಿಗರಿಗೆ ಬೆಂಬಲವನ್ನು ನೀಡಿ ಬೆನ್ನು ತಟ್ಟುವ ನಿಮ್ಮ ಕೆಲಸ ಇದೇ ರೀತಿ ಮುಂದುವರಿಯಲಿ ಎಂದು ಮೊಹಮ್ಮದ್ ಸಿರಾಜ್ ಕೂಡ ವಿರಾಟ್ ಕೊಹ್ಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Monday, September 20, 2021, 18:53 [IST]
Other articles published on Sep 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X