ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ, ಫಿಂಚ್‌, ಫಿಲಿಪ್ ಅಬ್ಬರದಾಟ-ಬಿಬಿಎಲ್‌ನಲ್ಲಿ 'ಆರ್‌ಸಿಬಿ' ಡೇ: ವೀಡಿಯೋ

ಈ ಸಲ ಕಪ್ ನಮ್ದೆ ಅನ್ನೋದನ್ನ ಖಚಿತ ಪಡಿಸಿದ RCB ಆಟಗಾರರು | Oneindia Kannada
AB de Villiers proves why he is ‘one of the best Big Bash has ever seen’

ಬೆಂಗಳೂರು, ಜನವರಿ 25: ಶನಿವಾರ (ಜನವರಿ 25) ದಿನ ರಾಯಲ್ ಚಾಲೆಂಜರ್ ಬೆಂಗಳೂರು ಅಭಿಮಾನಿಗಳ ಪಾಲಿಗೆ ಅಕ್ಷರಶಃ 'ಆರ್‌ಸಿಬಿ ಡೇ' ಅನ್ನಿಸಿದೆ. ಯಾಕೆಂದರೆ ಇದೇ ದಿನ ಬಿಗ್‌ ಬ್ಯಾಷ್‌ನಲ್ಲಿ ಆಡಿದ್ದ ಆರ್‌ಸಿಬಿ ಆಟಗಾರರು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಎಬಿ ಡಿ ವಿಲಿಯರ್ಸ್, ಆ್ಯರನ್ ಫಿಂಚ್ ಮತ್ತು ಫಿಲಿಪ್ ಜೋಶುವಾ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ಬಿಡಿಸಿದೆ.

ಹೊಸ ಜವಾಬ್ದಾರಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ರಾಹುಲ್ಹೊಸ ಜವಾಬ್ದಾರಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ರಾಹುಲ್

ಬಿಗ್‌ ಬ್ಯಾಷ್‌ ಲೀಗ್‌ನ ಶನಿವಾರದ ಮೊದಲ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ಮತ್ತು ಮೆಲ್ಬರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಪ್ರತಿನಿಧಿಸಿದ್ದ ಆ್ಯರನ್ ಫಿಂಚ್ 68 ಎಸೆತಗಳಿಗೆ 109 ರನ್ ಬಾರಿಸಿದರು.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ಹೊಸ ದಾಖಲೆ, ಭಾರತಕ್ಕೂ ಸ್ಥಾನ!ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ ಹೊಸ ದಾಖಲೆ, ಭಾರತಕ್ಕೂ ಸ್ಥಾನ!

ಫಿಂಚ್ ಬ್ಯಾಟಿಂಗ್ ನೆರವಿನಿಂದ ಮೆಲ್ಬರ್ನ್ 20 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 175 ರನ್ ಮಾಡಿತು.

ಫಿಲಿಪ್ ಅಬ್ಬರದಾಟ

ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಜೋಶ್ ಫಿಲಿಪ್ 42 ಎಸತಗಳಿಗೆ 61 ರನ್, ಸ್ಟೀವನ್ ಸ್ಮಿತ್ 66 (40 ಎಸೆತ) ರನ್ ಸೇರಿಸಿದ್ದರಿಂದ ತಂಡ 18.4ನೇ ಓವರ್‌ಗೆ 3 ವಿಕೆಟ್ ಕಳೆದು 176 ರನ್‌ ಪೇರಿಸಿ ಗೆಲುವನ್ನಾಚರಿಸಿತು.

ಸಿಡಿದ ಡಿ ವಿಲಿಯರ್ಸ್

ಬಿಬಿಎಲ್‌ ಎರಡನೇ ಪಂದ್ಯದಲ್ಲಿ ಮೆಲ್ಬರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್‌ ಪ್ರತಿನಿಧಿಸಿದ್ದ ಎಬಿ ಡಿ ವಿಲಿಯರ್ಸ್, 37 ಎಸೆತಗಳಿಗೆ 71 ರನ್‌ ಸಿಡಿಸಿದ್ದರು. ಬ್ರಿಸ್ಬೇನ್ 186 ರನ್ ಕಲೆ ಹಾಕಿತ್ತು. ಮೆಲ್ಬರ್ನ್ 115 ರನ್ ಬಾರಿಸಿ ಪಂದ್ಯ ಸೋತಿತು.

ಮೂವರೂ ಆರ್‌ಸಿಬಿ

ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಶನಿವಾರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಮತ್ತು ಫಿಲಿಪ್ ಜೋಶುವಾ (ಆಸ್ಟ್ರೇಲಿಯಾ) ಈ ಮೂವರೂ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಲಿರುವ ಬಿರುಗೈ ದಾಂಡಿಗರು.

ಎಬಿಡಿಗೆ ಅತ್ಯಧಿಕ ಬೆಲೆ

2020ರ ಐಪಿಎಲ್ ಸೀಸನ್‌ಗಾಗಿ ಆರ್‌ಸಿಬಿಯಲ್ಲಿರುವ ಇರುವ ಆಟಗಾರರ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ (17 ಕೋ.ರೂ.) ಬಳಿಕ ಎಬಿ ಡಿ ವಿಲಿಯರ್ಸ್‌ಗೆ (11 ಕೋ.ರೂ.) ಎರಡನೇ ಅತ್ಯಧಿಕ ಬೆಲೆಯಿದೆ. ಇನ್ನು ಹರಾಜಿನಲ್ಲಿ ಆ್ಯರನ್ ಫಿಂಚ್‌ ಅವರನ್ನು 4.40 ಕೋ.ರೂ., ಫಿಲಿಪ್ ಜೋಶುವಾ ಅವರನ್ನು ಮೂಲಬೆಲೆ 20 ಲ.ರೂ.ಗಾಗಿ ಆರ್‌ಸಿಬಿ ಈ ಬಾರಿ ಖರೀದಿಸಿತ್ತು. ಅಂತೂ ಈ ಸಲನಾದ್ರೂ 'ಕಪ್ ನಮ್ದೇ' ಆಗುವ ಲಕ್ಷಣ ಕಾಣಿಸುತ್ತಿದೆ ಬಿಡಿ.

Story first published: Saturday, January 25, 2020, 22:31 [IST]
Other articles published on Jan 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X