ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20: ಬಿಗ್‌ ಬ್ಯಾಷ್‌ ಲೀಗ್‌ಗೆ ಗುಡ್‌ಬೈ ಎಂದ ಎಬಿ ಡಿ'ವಿಲಿಯರ್ಸ್‌

IPL ನಂತರ ಪ್ರತಿಷ್ಠಿತ T20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ AB ಡಿವಿಲಿಯರ್ಸ್..!
AB de Villiers pulls out from Big Bash League

ಮೆಲ್ಬೋರ್ನ್‌, ಮೇ 12: ಆಸ್ಟ್ರೇಲಿಯಾದ ಜನಪ್ರಿಯ ಟಿ20 ಕ್ರಿಕೆಟ್‌ ಟೂರ್ನಿ ಬಿಗ್‌ ಬ್ಯಾಷ್‌ ಲೀಗ್‌(ಬಿಬಿಎಲ್‌)ನಲ್ಲಿ ಆಡಲು ಈ ಮೊದಲು ಆಸಕ್ತಿ ತೋರಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಇದೀಗ ಗುಡ್‌ ಬೈ ಹೇಳಿದ್ದಾರೆ.

35 ವರ್ಷದ ಅನುಭವಿ ಆಟಗಾರ 2019-20ರ ಆವೃತ್ತಿಯ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡುವ ಇಂಗಿತ ವ್ಯಕ್ತ ಪಡಿಸಿರುವುದಾಗಿ ಕಳೆದ ತಿಂಗಳು ವರದಿಯಾಗಿತ್ತು. ಆದರೀಗ ಇತ್ತೀಚಿನ ವರದಿ ಪ್ರಕಾರ ಹರಿಣ ಪಡೆಯ ಮಾಜಿ ನಾಯಕ ಬಿಗ್‌ ಬ್ಯಾಷ್‌ ಲೀಗ್‌ನಿಂದ ಹಿಂದೆ ಸರಿದಿರುವುದು ಖಾತ್ರಿಯಾಗಿದೆ.

 IPL: ಧೋನಿ ಸಾಧಬೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌ IPL: ಧೋನಿ ಸಾಧಬೆ ಬಗ್ಗೆ ಹಾಡಿ ಹೊಗಳಿದ ಮ್ಯಾಥ್ಯೂ ಹೇಡನ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಕ್ಲಬ್‌ ಮಟ್ಟದ ಟಿ20 ಕ್ರಿಕೆಟ್‌ ಟೂರ್ನಿಗಳಲ್ಲಿ ಸಕ್ರಿಯರಾಗಿರುವ ಡಿ'ವಿಲಿಯರ್ಸ್‌, 2019ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 13 ಪಂದ್ಯಗಳನ್ನಾಡಿ 442 ರನ್‌ಗಳನ್ನು ಚಚ್ಚಿದ್ದಾರೆ. ಆದರೂ ರಾಯಲ್‌ ಚಾಲೆಂಜರ್ಸ್‌ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.

ಐಪಿಎಲ್ ಫೈನಲ್ 2019: ವಿಜೇತ ತಂಡಕ್ಕೆ ಭರ್ಜರಿ ನಗದು ಬಹುಮಾನ

ಇತ್ತೀಚೆಗಷ್ಟೇ ಕ್ರಿಕೆಟ್‌ ಆಸ್ಟ್ರೇಲಿಯಾ ಬಿಗ್‌ ಬ್ಯಾಷ್‌ ಲೀಗ್‌ನ ಫ್ರಾಂಚೈಸಿ ತಂಡಗಳು ಮುಂಬರುವ ಟೂರ್ನಿಯಲ್ಲಿ 4ರ ಬದಲಾಗಿ 6 ವಿದೇಶಿ ಆಟಗಾರರನ್ನು ಹೊಂದಲು ಅನುಮತಿ ನೀಡಿತ್ತು. ಇನ್ನು ತಂಡದ 18 ಆಟಗಾರರ ಸದಸ್ಯತ್ವದಲ್ಲಿ 2 ವಿದೇಶಿ ಆಟಗಾರರನ್ನು ಹೊಂದಬಹುದು. ಇದಕ್ಕೆ ಹೆಚ್ಚುವರಿಯಾಗಿ 4 ಮಂದಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶವಿದೆ.

ಈ ನಿಟ್ಟಿನಲ್ಲಿ ಡಿವಿಲಿಯರ್ಸ್‌ ಬಿಬಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತ ಪಡಿಸಿದ್ದರು. ಆದರೆ, ಇದೀಗ ಹಠಾತ್ತನೆ ಹಿಂದೆ ಸರಿದಿರುವುದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

 ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು! ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

"ಕ್ಲಬ್ ತಂಡಗಳಿಗೆ ಗರಿಷ್ಠ 2 ವಿದೇಶಿ ಆಟಗಾರರನ್ನು ಹೊಂದಲು ಅನುಮತಿಸಲಾಗಿದೆ. ಹಾಗೆಯೇ ವಿದೇಶಿ ಆಟಗಾರರಲ್ಲಿ ಬದಲಾವಣೆ ತಂದುಕೊಳ್ಳಲು ಹೆಚ್ಚುವರಿಯಾಗಿ 4 ಆಟಗಾರರೊಡನೆ ಒಪ್ಪಂದ ಹೊಂದ ಬಹುದಾಗಿದೆ. ಇದು ಟೂರ್ನಿಯ ಮೇಲೆ ಉತ್ತಮ ಪ್ರಭಾವ ಬೀರಲಿದೆ. ವಿದೇಶಿ ಆಟಗಾರರಿಗೆ ಅಲ್ಪಾವಧಿಗೆ ಇಲ್ಲಿ ಬಂದು ಆಡುವ ಅವಕಾಶ ಲಭ್ಯವಾಗಲಿದೆ,'' ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿತ್ತು.

Story first published: Sunday, May 12, 2019, 18:25 [IST]
Other articles published on May 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X