ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ RCBಯ ಪ್ರೀತಿಯ ಎಬಿಡಿ: 10 ವಿಶೇಷ ದಾಖಲೆಗಳು ಇಲ್ಲಿವೆ

ಅಬ್ರಹಾಂ ಡಿ ವಿಲಿಯರ್ಸ್.. ಇದಕ್ಕಿಂತ ಬೆಸ್ಟ್‌ ಅಂದ್ರೆ ಎಬಿಡಿ ವಿಲಿಯರ್ಸ್‌ ಅಂತ ಹೇಳಿದ್ರೆ ಸಾಕು, ಎಲ್ಲರಿಗೂ ಎಲ್ಲವೂ ಗೊತ್ತಾಗುತ್ತೆ. ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಮೈದಾನದ ಯಾವ ಮೂಲೆಗೆ ಬೇಕಾದ್ರೂ ಚೆಂಡನ್ನು ಅಟ್ಟಬಲ್ಲರು. ಕ್ರಿಕೆಟ್‌ ಪುಸ್ತಕದ ಎಲ್ಲಾ ಶಾಟ್‌ಗಳು ಎಬಿಡಿಗೆ ಗೊತ್ತು. ಅದನ್ನು ಹೊರತಾಗಿ 360 ಡಿಗ್ರಿಯಲ್ಲಿ ಬ್ಯಾಟ್‌ ಬೀಸೋದಿಕ್ಕೆ ಎಬಿಡಿ ಫೇಮಸ್‌. ಐಪಿಎಲ್‌ನಿಂದಾಗಿ ಮನೆಮಾತಾಗಿರುವ ಎಬಿಡಿಯನ್ನ ಇನ್ಮುಂದೆ ಕ್ರಿಕೆಟ್ ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ.

ಟೆಸ್ಟ್‌ ಕ್ರಿಕೆಟ್‌ನ ಪ್ರೊಫೆಶನಲ್ ಬ್ಯಾಟ್ಸ್‌ಮನ್, ಏಕದಿನ ಕ್ರಿಕೆಟ್‌ನಲ್ಲಿ ಸ್ಫೋಟಕ ಆಟಕ್ಕೂ ಸೈ, ಟಿ20 ಕ್ರಿಕೆಟ್‌ನಲ್ಲಿ ಈತನ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ, ಏಕೆಂದರೆ ಈತ ಕ್ರೀಸ್‌ನಲ್ಲಿದ್ದಷ್ಟು ಕಾಲ ಎದುರಾಳಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ತನ್ನ ನೆಚ್ಚಿನ ಕ್ರಿಕೆಟ್‌ ಆಡುತ್ತಿದ್ದ ಎಬಿಡಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. 37 ವರ್ಷದ ಎಬಿಡಿ ಕಣ್ಮುಚ್ಚಿಕೊಂಡು ಬೇಕಾದ್ರು ಬ್ಯಾಟಿಂಗ್ ಮಾಡುವಷ್ಟು ಸಮರ್ಥವುಳ್ಳವರಾಗಿದ್ರು. ಅಷ್ಟರ ಮಟ್ಟಿಗೆ ಕ್ರಿಕೆಟ್‌ನ ಪಾಠ ಇವರಲ್ಲಿ ಬೆರೆತು ಹೋಗಿತ್ತು.

ಚುಟುಕು ಕ್ರಿಕೆಟ್‌ನಲ್ಲಿ ಟಿ20ಯ ಪಕ್ಕಾ ಬ್ಯಾಟ್ಸ್‌ಮನ್‌

ಚುಟುಕು ಕ್ರಿಕೆಟ್‌ನಲ್ಲಿ ಟಿ20ಯ ಪಕ್ಕಾ ಬ್ಯಾಟ್ಸ್‌ಮನ್‌

ಆಟದ ಸ್ವರೂಪ ಯಾವುದೇ ಇರಲಿ ಅದಕ್ಕೆ ತಕ್ಕಂತೆ ತನ್ನ ಬ್ಯಾಟ್‌ ಬೀಸುತ್ತಿದ್ದ ಎಬಿಡಿ ಕಂಡ್ರೆ ವಿಶ್ವದ ಶ್ರೇಷ್ಟ ಬೌಲರ್‌ಗಳೇ ಬೆವರಿಳಿಸುತ್ತಿದ್ರು. ಅದ್ರಲ್ಲೂ ಟಿ20 ಕ್ರಿಕೆಟ್‌ ಅಂದ್ರೆ ಕೇಳಬೇಕಾ, ಸಿಕ್ಸರ್‌ಗಳಿಗೇನು ಕಮ್ಮಿ ಇಲ್ಲ. ಮೈದಾನದ ಯಾವ ಮೂಲೆಗೆ ಚೆಂಡಿನ ದರ್ಶನ ಮಾಡಿಸುವ ಕಲೆ ಇವರದ್ದಾಗಿತ್ತು.

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ

2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಹೆಜ್ಜೆಯಿಟ್ಟ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರನಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಟೆಸ್ಟ್ ಪಂದ್ಯಗಳಿರಲಿ, ಅಥವಾ ವೈಟ್‌ ಬಾಲ್ ಕ್ರಿಕೆಟ್‌ ಆಗಿರಲಿ ಎದುರಾಳಿ ಬೌಲರ್‌ಗಳನ್ನ ಪೀಡಿಸುವಲ್ಲಿ ನಿಸ್ಸೀಮನಾಗಿದ್ದರು. ಅದ್ರಲ್ಲೂ ಹರಿಣಗಳ ಅನೇಕ ಪಂದ್ಯಗಳ ಗೆಲುವಿನಲ್ಲಿ ಎಬಿಡಿ ಪಾತ್ರ ಬಹಳ ದೊಡ್ಡದು.

ಎಬಿಡಿ ನಿವೃತ್ತಿ: ಕೊನೆಗೂ ಆರ್‌ಸಿಬಿ ಅಭಿಮಾನಿಗಳಿಗೆ ಕೊಟ್ಟ ಆ ಒಂದು ಮಾತನ್ನು ಉಳಿಸಿಕೊಂಡೇಬಿಟ್ಟರಲ್ಲ ಎಬಿಡಿ

ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಹಲವು ಲೀಗ್‌ನಲ್ಲಿ ಭಾಗಿ

ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಹಲವು ಲೀಗ್‌ನಲ್ಲಿ ಭಾಗಿ

ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ, ಡಿವಿಲಿಯರ್ಸ್ ಹಲವಾರು ಟಿ20 ಲೀಗ್‌ಗಳಲ್ಲಿ, ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಮನಾರ್ಹ ಛಾಪು ಮೂಡಿಸಿದರು. 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಎಬಿಡಿ ಮೂರು ವರ್ಷಗಳ ನಂತರ ಎಲ್ಲಾ ರೀತಿಯ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ ಆರ್‌ಸಿಬಿ ಆಪದ್ಬಾಂಧವ ಎಬಿ ಡಿವಿಲಿಯರ್ಸ್

ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್

ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್

ಎಬಿ ಡಿವಿಲಿಯನ್ಸ್ 22 ಯಾರ್ಡ್ ಒಳಗಷ್ಟೇ ಓರ್ವ ಅದ್ಭುತ ಕ್ರಿಕೆಟಿಗನಾಗಿರಲಿಲ್ಲ. ಮೈದಾನದ ಹೊರಗೂ ಅವರ ಆಕರ್ಷಕ ವ್ಯಕ್ತಿತ್ವ, ಸೌಜನ್ಯತೆ, ವಿಶ್ವಾಸವು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಒಂದರರ್ಥದಲ್ಲಿ ಈತ ಜಂಟಲ್‌ಮನ್ ಗೇಮ್‌ನ ರಿಯಲ್ ಜಂಟಲ್‌ಮನ್ ಅಂದ್ರೆ ತಪ್ಪಾಗಲಾರದು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್

ಎಬಿಡಿಯ ರೆಕಾರ್ಡ್‌ಗಳ ಕುರಿತು ಮಾತನಾಡುವುದಾದರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಬಿಡಿ 47 ಶತಕಗಳು, 109 ಅರ್ಧಶತಕಗಳನ್ನ ಒಳಗೊಂಡಂತೆ 20,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆ ಟಿ 20, ಲಿಸ್ಟ್-ಎ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಕೂಡ ದಿಗ್ಭ್ರಮೆಗೊಳಿಸುವಂತಿದೆ.

ಎಬಿ ಡಿವಿಲಿಯರ್ಸ್‌ನ ವಿಶೇಷ ದಾಖಲೆಗಳು

ಎಬಿ ಡಿವಿಲಿಯರ್ಸ್‌ನ ವಿಶೇಷ ದಾಖಲೆಗಳು

1. ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 50, 100 ಮತ್ತು 150 ರನ್‌ಗಳನ್ನು ಕ್ರಮವಾಗಿ 16, 31 ಮತ್ತು 64 ಎಸೆತಗಳಲ್ಲಿ ತಲುಪುವ ಸಾಧನೆ ಮಾಡಿದ್ದಾರೆ.

2. 50 ಓವರ್‌ಗಳ ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್ ಬ್ಯಾಟಿಂಗ್ ಸರಾಸರಿ 63.52 ರಷ್ಟಿದ್ದು, ಕನಿಷ್ಠ 20 ಪಂದ್ಯಗಳನ್ನು ಆಡಿದ ಬ್ಯಾಟರ್‌ಗಳಲ್ಲಿ ಇವರದ್ದೇ ಹೆಚ್ಚು.

3. ಡಿವಿಲಿಯರ್ಸ್ ಅವರ 20,014 ರ ಅಂತರರಾಷ್ಟ್ರೀಯ ರನ್‌ಗಳು ಯಾವುದೇ ದಕ್ಷಿಣ ಆಫ್ರಿಕಾದ ಆಟಗಾರನ ಎರಡನೇ ಅತಿ ಹೆಚ್ಚು ರನ್ ಆಗಿದೆ. ಜಾಕ್ವೆಸ್ ಕಾಲಿಸ್ 25,534 ರನ್ ಗಳಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

4. ಸತತ ಮೂರು ಏಕದಿನ ಶತಕಗಳನ್ನು ಸಿಡಿಸಿದ ಒಂಬತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಮಾಜಿ ದಕ್ಷಿಣ ಆಫ್ರಿಕ ನಾಯಕ ಕೂಡ ಒಬ್ಬರು.

5. ಡಿವಿಲಿಯರ್ಸ್ ಟೆಸ್ಟ್ ಪಂದ್ಯವೊಂದರಲ್ಲಿ ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂಬದಿ 11 ಔಟ್‌ ಮಾಡಿದ್ದಾರೆ. ಇದು ರಿಷಭ್ ಪಂತ್, ಜಾಕ್ ರಸೆಲ್ ಜಂಟಿಯಾದ ದಾಖಲೆಯನ್ನು ಹಂಚಿಕೊಂಡಿದ್ದರೆ.

6. ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಡಕ್ ಆಗುವ ಮೊದಲು ಹೆಚ್ಚಿನ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

7. ಎಬಿಡಿ ಸತತ 12 ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಜೋ ರೂಟ್ ಮಾತ್ರ ಟೆಸ್ಟ್‌ನಲ್ಲಿ ಇನ್ನೂ ಹೆಚ್ಚಿನ ಅರ್ಧಶತಕಗಳನ್ನು ದಾಖಲಿಸಿದ್ದಾರೆ.

8. ಎಬಿ ಡಿವಿಲಿಯರ್ಸ್‌ ಏಕದಿನ ಇನ್ನಿಂಗ್ಸ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್‌ಗಳನ್ನು (16) ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಈ ಸಾಧನೆಯನ್ನು ಹಂಚಿಕೊಂಡಿದ್ದಾರೆ.

9. ಡಿವಿಲಿಯರ್ಸ್ ಐಪಿಎಲ್‌ನಲ್ಲಿ 251 ಸಿಕ್ಸರ್‌ಗಳನ್ನ ಸಿಡಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್‌ನಿಂದ ಎರಡನೇ ಅತಿ ಹೆಚ್ಚು ಸಿಕ್ಸರ್ ಆಗಿದೆ.

10. ಎಬಿ ಡಿವಿಲಿಯರ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 25 ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಐಪಿಎಲ್‌ನಲ್ಲಿ ಅತಿ ಹೆಚ್ಚಿನ ದಾಖಲೆಯಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, November 19, 2021, 16:40 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X