ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್

Abhimanyu Mithun announces retirement to first class cricket

ಬೆಂಗಳೂರು: ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ರಾಜ್ಯದ ಪರ ಆಡುತ್ತಿದ್ದ ಮಿಥುನ್, ಗುರುವಾರ (ಅಕ್ಟೋಬರ್‌ 7) ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮತ್ತು ವಿಜಯ್ ಹಜಾರೆ 50 ಓವರ್‌ಗಳ ಟೂರ್ನಿಯಿಂದಲೂ ಮಿಥುನ್ ದೂರ ಉಳಿಯಲಿದ್ದಾರೆ.

ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!

"ಕ್ರಿಕೆಟ್ ಒಂದು ಸಾರ್ವತ್ರಿಕ ಗೇಮ್. ಉತ್ತಮ ಸ್ಥಿತಿಯಲ್ಲಿ ನಾನು ಆಟ ಮುಗಿಸಿದ್ದೇನೆ ಎಂದು ನಾನು ನಂಬುತ್ತೇನೆ. ಹೀಗಾಗಿ ನಾನು ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಹೆಚ್ಚಿನ ಅವಕಾಶ ನೀಡಲು ನಾನೀ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ಕರ್ನಾಟಕವು ಹೇರಳವಾದ ವೇಗದ ಬೌಲಿಂಗ್ ಪ್ರತಿಭೆಗಳನ್ನು ಹೊಂದಿದೆ. ನನ್ನ ವೃತ್ತಿಜೀವನವನ್ನು ನಾನು ವಿಸ್ತರಿಸಿದರೆ ಬೇರೆ ಪ್ರತಿಭಾವಂತ ಆಟಗಾರರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ," ಎಂದು ನಿವೃತ್ತಿ ಘೋಷಿಸುವಾಗ ಅಭಿಮನ್ಯು ಮಿಥುನ್ ಹೇಳಿದ್ದಾರೆ.

ಮುಂಬರಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮತ್ತು ವಿಜಯ್ ಹಜಾರೆ 50 ಓವರ್‌ಗಳ ಟೂರ್ನಿಗಾಗಿ ಕರ್ನಾಟಕದ ಸಂಭಾವ್ಯ ಆಟಗಾರರ ಪಟ್ಟಿಯಿಂದ ಮಿಥುನ್ ಹೊರಗಿಡಲಾಗುವುದಾಗಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ತಿಳಿಸಿದೆ. ಐಪಿಎಲ್‌ನಲ್ಲಿ ಮಿಥುನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ.

ಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋ

Rajasthan Royals ಅವರು ಪಂದ್ಯದ ನಡುವೆ ಹೀಗೆ ಎಡವಟ್ಟು ಮಾಡಿದ್ದೇಕೆ | Oneindia Kannada

31ರ ಹರೆಯದ ಮಿಥುನ್, ಕರ್ನಾಟಕ ತಂಡದ ಪರ 13 ವರ್ಷಗಳ ಕಾಲ ದೇಸಿ ಆಡಿದ್ದಾರೆ. 103 ಪ್ರಥಮದರ್ಜೆ ಪಂದ್ಯಗಳಲ್ಲಿ 338 ವಿಕೆಟ್ ಪಡೆದಿದ್ದಾರೆ. ಒಟ್ಟು 12 ಸಾರಿ ಐದು ವಿಕೆಟ್‌ಗಳ ದಾಖಲೆ ಮಿಥುನ್ ಹೆಸರಿನಲ್ಲಿದೆ. 2 ಪಂದ್ಯಗಳಲ್ಲಿ 10 ವಿಕೆಟ್‌ಗಳ ದಾಖಲೆ ಹೊಂದಿದ್ದಾರೆ. 96 ಲಿಸ್ಟ್‌ ಎ ಪಂದ್ಯಗಳಲ್ಲಿ ಮಿಥುನ್ 136 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Friday, October 8, 2021, 9:57 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X