ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬುಧಾಬಿ ಟಿ10 ಲೀಗ್ 2021: ವೇಳಾಪಟ್ಟಿ, ತಂಡಗಳು, ಸ್ಟಾರ್‌ ಪ್ಲೇಯರ್ಸ್

Abu Dhabi T10 League 2021

ಟಿ20 ವಿಶ್ವಕಪ್ ಬಳಿಕ ಕ್ರಿಕೆಟ್ ಪ್ರೇಮಿಗಳನ್ನ ರಂಜಿಸಲು ಅಬುಧಾಬಿಯಲ್ಲಿ ಟಿ10 ಲೀಗ್ ನಾಳೆಯಿಂದ (ನವೆಂಬರ್ 19) ಶುರುವಾಗಲಿದೆ. ವಿಶ್ವದ ಪ್ರಮುಖ ಸ್ಟಾರ್ ಆಟಗಾರರು ಒಳಗೊಂಡಿರುವ ಈ ಚುಟುಕು ಟಿ10 ಲೀಗ್‌ ಡಿಸೆಂಬರ್ 4ರವರೆಗೆ ನಡೆಯಲಿದೆ

ಐದನೇ ಆವೃತ್ತಿಯ ಟಿ10 ಲೀಗ್‌ನ ಎಲ್ಲಾ ಪಂದ್ಯಗಳನ್ನ ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಕ್ರಿಕೆಟ್‌ ಪ್ರೇಮಿಗಳು ಟಿ10 ಟೂರ್ನಿಯ ಅಬ್ಬರದ ಬೌಂಡರಿ ಸಿಕ್ಸರ್‌ಗಳ ಆಟವನ್ನ ಕಣ್ತುಂಬಿಕೊಳ್ಳಲು ರೆಡಿಯಾಗಿದ್ದಾರೆ.

ಹಿಂದಿನ ಎಲ್ಲಾ ಟಿ10 ಟೂರ್ನಿಯಲ್ಲೂ ಬ್ಯಾಟ್ & ಬಾಲ್‌ ರೋಚಕ ಕಾದಾಟಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಗಿತ್ತು. ಜಗತ್ತಿನ ವಿವಿಧ ಮೂಲೆಯಿಂದ ದಿಗ್ಗಜ ಆಟಗಾರರು ಭಾಗಿಯಾಗಿದ್ದರ ಪರಿಣಾಮವೇ ಈ ಫಾರ್ಮೆಟ್ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ.

ಆರು ತಂಡಗಳು, 30 ಪಂದ್ಯಗಳು

ಆರು ತಂಡಗಳು, 30 ಪಂದ್ಯಗಳು

2017ರಲ್ಲಿ ಮೊದಲ ಬಾರಿಗೆ ಅಬುಧಾಬಿ ಟಿ10 ಲೀಗ್ ಪ್ರಾರಂಭಗೊಂಡಿತು. ಉದ್ಘಾಟನಾ ಸೀಸನ್‌ನ ಯಶಸ್ಸಿನ ಬಳಿಕ ನಂತರ ಮೂರು ಸೀಸನ್‌ಗಳು ಯಶಸ್ವಿಯಾಗಿ ನಡೆಯಿತು. ಈ ಲೀಗ್‌ನಲ್ಲಿ ನಾರ್ತನ್ ವಾರಿಯರ್ಸ್ ಬಾಂಗ್ಲಾ ಟೈಗರ್ಸ್‌, ಟೀಮ್ ಅಬುಧಾಬಿ, ಚೆನ್ನೈ ಬ್ರೇವ್ಸ್‌, ಡೆಕ್ಕನ್ ಗ್ಲಾಡಿಯೇಟರ್ಸ್, ಡೆಲ್ಲಿ ಬುಲ್ಸ್‌ 30 ಗ್ರೂಪ್ ಹಂತದ ಪಂದ್ಯಗಳನ್ನ ಆಡಲಿವೆ.

ಪ್ರತಿ ತಂಡಕ್ಕೆ 10 ಲೀಗ್ ಪಂದ್ಯಗಳು

ಪ್ರತಿ ತಂಡಕ್ಕೆ 10 ಲೀಗ್ ಪಂದ್ಯಗಳು

ಪ್ರತಿ ತಂಡವು 10 ಪಂದ್ಯಗಳನ್ನು ಆಡುಲಿದೆ. ಇದರರ್ಥ ಪ್ರತಿ ತಂಡವು ಗ್ರೂಪ್ ಸ್ಟೇಜ್‌ನಲ್ಲಿ ತಲಾ ಎರಡು ಬಾರಿ ಪ್ರತಿ ತಂಡವನ್ನ ಎದುರಿಸುತ್ತವೆ. ತರುವಾಯ, ಕಡಿಮೆ ಪಾಯಿಂಟ್ಸ್‌ಗಳಿಸಿದ ಕೆಳಗಿನ ಎರಡು ತಂಡಗಳನ್ನು ತೆಗೆದುಹಾಕಲಾಗುತ್ತದೆ. ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದೆ.

ಕ್ವಾಲಿಫೈಯರ್ ಒಂದರಲ್ಲಿ ಗೆದ್ದ ತಂಡವು ಸೀದಾ ಫೈನಲ್ ಹೋಗಲಿದೆ. ಮೂರು ಮತ್ತು ನಾಲ್ಕನೇ ತಂಡವು ಎಲಿಮಿನೇಟರ್ ಪಂದ್ಯವನ್ನಾಡಲಿದ್ದು, ಗೆದ್ದ ತಂಡವು, ಮೊದಲ ಕ್ವಾಲಿಫೈಯರ್‌ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡವು ಫೈನಲ್ ಹಂತಕ್ಕೆ ಏರಲಿದೆ.

ಇದರ ಜೊತೆಗೆ ಎಲಿಮಿನೇಟರ್‌ನಲ್ಲಿ ಸೋತವರು ಮತ್ತು ಮೂರನೇ ಸ್ಥಾನಕ್ಕಾಗಿ ಕ್ವಾಲಿಫೈಯರ್‌ನಲ್ಲಿ ಸೋತವರ ನಡುವೆ ಆಟವೂ ಇರುತ್ತದೆ.

ಭಾರತ ಮೂಲದ ರಚಿನ್ ರವೀಂದ್ರ: ರಾಹುಲ್ ದ್ರಾವಿಡ್, ಸಚಿನ್ ಹೆಸರನ್ನೇಕೆ ಬಳಸಿಕೊಂಡ್ರು?

ಸ್ಫೋಟಕ ಬ್ಯಾಟ್ಸ್‌ಮನ್ಸ್, ಸ್ಟಾರ್‌ ಬೌಲರ್ಸ್‌ ಮುಖಾಮುಖಿ

ಸ್ಫೋಟಕ ಬ್ಯಾಟ್ಸ್‌ಮನ್ಸ್, ಸ್ಟಾರ್‌ ಬೌಲರ್ಸ್‌ ಮುಖಾಮುಖಿ

ಕ್ರಿಸ್ ಗೇಲ್, ಲಿಯಾಮ್ ಲಿವಿಂಗ್‌ಸ್ಟೋನ್, ಯೂಸುಫ್ ಪಠಾಣ್ ಮತ್ತು ಆಂಡ್ರೆ ರಸೆಲ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ಹಿಡಿದು ಆದಿಲ್ ರಶೀದ್, ಇಸುರು ಉದಾನಾ, ಆದಿಲ್ ರಶೀದ್ ಮತ್ತು ಇಮ್ರಾನ್ ತಾಹಿರ್ ಅವರಂತಹ ಪ್ರಭಾವಿ ಬೌಲರ್‌ಗಳು ಅಬುಧಾಬಿಯ ಜಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

IPLನಲ್ಲಿ ಕಡಿಮೆ ಬೆಲೆಗೆ ಹರಾಜಾಗಿ, ಭರ್ಜರಿ ಪರ್ಫಾಮೆನ್ಸ್ ನೀಡಿದ 6 ಆಟಗಾರರು

90 ನಿಮಿಷಗಳಲ್ಲಿ ಭರ್ಜರಿ ಮನರಂಜನೆ

90 ನಿಮಿಷಗಳಲ್ಲಿ ಭರ್ಜರಿ ಮನರಂಜನೆ

90 ನಿಮಿಷ ನಡೆಯುವ ಟಿ10 ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳಿಗಂತೂ ಮನೋರಂಜನೆಯ ಮಹಾಪೂರವೇ ಸಿಗಲಿದೆ. ಆರು ಫ್ರಾಂಚೈಸಿಗಳು ಅಬುಧಾಬಿ T10 ಟ್ರೋಫಿಗಾಗಿ ಸೆಣಸಾಡಲಿವೆ.

ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನಾರ್ದರ್ನ್ ವಾರಿಯರ್ಸ್ ತಂಡವು ಡೆಲ್ಲಿ ಬುಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಇನ್ನು ಅಬುಧಾಬಿ ಟೀಮ್ ಐದನೇ ಸೀಸನ್‌ನ 1 ನೇ ದಿನದಂದು ಎರಡನೇ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ವಿರುದ್ಧ ಸೆಣಸಲಿದೆ.

ಡೆಲ್ಲಿ ಬುಲ್ಸ್‌ ಮುನ್ನೆಡೆಸಲಿರುವ ಇಯಾನ್ ಮಾರ್ಗನ್

ಡೆಲ್ಲಿ ಬುಲ್ಸ್‌ ಮುನ್ನೆಡೆಸಲಿರುವ ಇಯಾನ್ ಮಾರ್ಗನ್

2019ರ ಐಸಿಸಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನ ಚಾಂಪಿಯನ್ ಹಂತಕ್ಕೆ ಕೊಂಡೊಯ್ದ ಇಂಗ್ಲೆಂಡ್ ಇಯಾನ್ ಮಾರ್ಗನ್ ಡೆಲ್ಲಿ ಬುಲ್ಸ್ ತಂಡವನ್ನ ಮುನ್ನೆಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಬಾಂಗ್ಲಾ ಟೈಗರ್ಸ್‌ ತಂಡದ ಜವಾಬ್ದಾರಿ ಹೊತ್ತಿದ್ದು, ಟಿ20 ಸೂಪರ್‌ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಡೆಲ್ಲಿ ಬುಲ್ಸ್‌ಗಾಗಿ ಆಕ್ಷನ್‌ನಲ್ಲಿದ್ದರೆ, ವೇಗಿ ವಹಾಬ್ ರಿಯಾಜ್ ಡೆಕ್ಕನ್ ಗ್ಲಾಡಿಯೇಟರ್ಸ್‌ಗಾಗಿ ವಿಕೆಟ್‌ಗಳನ್ನು ಪಡೆಯುವ ಅವಕಾಶಗಳನ್ನು ಬಿಡುವುದಿಲ್ಲ.

ಯಾವ ದೇಶದಲ್ಲಿ, ಯಾವ ಚಾನೆಲ್‌ಗಳಲ್ಲಿ ಪಂದ್ಯ ವೀಕ್ಷಿಸಬಹುದು

ಯಾವ ದೇಶದಲ್ಲಿ, ಯಾವ ಚಾನೆಲ್‌ಗಳಲ್ಲಿ ಪಂದ್ಯ ವೀಕ್ಷಿಸಬಹುದು

ಭಾರತ , ಪಾಕಿಸ್ತಾನ, ಬಾಂಗ್ಲಾದೇಶ ಶ್ರೀಲಂಕಾ ಸೇರಿದಂತೆ ಏಷ್ಯಾ ರಾಷ್ಟ್ರಗಳ ಜೊತೆಗೆ ಇತರೆ ಯಾವೆಲ್ಲಾ ರಾಷ್ಟ್ರಗಳಲ್ಲಿ ನೇರಪ್ರಸಾರ ಈ ಕೆಳಗಿನ ಚಾನೆಲ್‌ಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಭಾರತ: ಕಲರ್ಸ್ ಸಿನಿಪ್ಲೆಕ್ಸ್, ರಿಷ್ತೆ ಸಿನಿಪ್ಲೆಕ್ಸ್‌, ವೂಟ್, ಜಿಯೋ ಟಿವಿ

ಪಾಕಿಸ್ತಾನ: ಎ ಸ್ಪೋರ್ಟ್ಸ್‌

ಮಧ್ಯಪ್ರಾಚ್ಯ/ಉತ್ತರ ಆಫ್ರಿಕಾ (MENA): ಕ್ರಿಕ್‌ಲೈಫ್ 2

ಬಾಂಗ್ಲಾದೇಶ: ಟಿ ಸ್ಪೋರ್ಟ್ಸ್

ಶ್ರೀಲಂಕಾ: ವಸಂತಂ ಟಿವಿ

ದಕ್ಷಿಣ ಆಫ್ರಿಕಾ: ಸೂಪರ್‌ಸ್ಫೋರ್ಟ್‌

ಯುಕೆ: ಫ್ರೀ ಸ್ಪೋರ್ಟ್ಸ್‌

ಕೆರಿಬಿಯನ್: ಸ್ಪೋರ್ಟ್ಸ್ ಮ್ಯಾಕ್ಸ್‌

ಯುಎಸ್‌ಎ: ವಿಲ್ಲೋ ಟಿವಿ

SMAT 2021: ರೋಚಕ ಪಂದ್ಯ ಟೈ, ಸೂಪರ್ ಓವರ್‌ನಲ್ಲಿ ಬಂಗಾಳ ವಿರುದ್ಧ ಗೆದ್ದ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ

ಸಚಿನ್ ಹಾಗು ದ್ರಾವಿಡ್ ಹೆಸರಿನಿಟ್ಟುಕೊಂಡ ನ್ಯೂಜಿಲ್ಯಾಂಡ್ ಆಟಗಾರ ರಚಿನ್ | Oneindia Kannada
ಅಬುಧಾಬಿ ಟಿ10 ಲೀಗ್ ಚಾಂಪಿಯನ್ಸ್‌

ಅಬುಧಾಬಿ ಟಿ10 ಲೀಗ್ ಚಾಂಪಿಯನ್ಸ್‌

2017ರಲ್ಲಿ ಚೊಚ್ಚಲ ಆವೃತ್ತಿಯ ಮೂಲಕ ತನ್ನ ಹೆಜ್ಜೆಯನ್ನು ಇಡಲು ಆರಂಭಿಸಿದ ಈ ಚುಟುಕು ಲೀಗ್ ಈಗಾಗಲೇ ನಾಲ್ಕು ವರ್ಷಗಳನ್ನ ಪೂರೈಸಿ ಐದನೇ ಆವೃತ್ತಿಗೆ ಕಾಲಿಟ್ಟಿದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ ಯಾವೆಲ್ಲಾ ತಂಡಗಳು ಚಾಂಪಿಯನ್‌ ಆಗಿವೆ ಮತ್ತು ರನ್ನರ್ಸ್ ಅಪ್‌ ಆಗಿವೆ ಎಂಬ ಮಾಹಿತಿ ಈ ಕೆಳಗಿದೆ.

2017: ಕೇರಳ ಕಿಂಗ್ಸ್‌ (ವಿನ್ನರ್), ಪಂಜಾಬಿ ಲೆಜೆಂಡ್ಸ್‌ (ರನ್ನರ್ ಅಪ್)

2018: ನಾರ್ತನ್ ವಾರಿಯರ್ಸ್ (ವಿನ್ನರ್), ಪಖ್ಟೂನ್ಸ್ (ರನ್ನರ್ ಅಪ್)

2019: ಮರಾಠ ಅರೇಬಿಯನ್ಸ್‌ (ವಿನ್ನರ್), ಡೆಕ್ಕನ್ ಗ್ಲಾಡಿಯೇಟರ್ಸ್ (ರನ್ನರ್ ಅಪ್)

2021: ನಾರ್ತನ್ ವಾರಿಯರ್ಸ್ (ವಿನ್ನರ್), ಡೆಲ್ಲಿ ಬುಲ್ಸ್ (ರನ್ನರ್ ಅಪ್)

Story first published: Friday, November 19, 2021, 10:21 [IST]
Other articles published on Nov 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X