ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು 'ಕಸ'ಕ್ಕೆ ಹೋಲಿಸಿ ಕೆಂಡಕಾರಿದ ಇಂಗ್ಲೆಂಡ್ ಮಾಜಿ ನಾಯಕ

Absolute Garbage Michael Vaughan Statement On Icc Test Ranking

ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಐಸಿಸಿ ವಿರುದ್ಧ ಕೆಂಡ ಕಾರಿದ್ದಾರೆ. ಟೆಸ್ಟ್ ತಂಡಗಳ ಶ್ರೇಯಾಂಕದ ಮಾನದಂಡದ ಬಗ್ಗೆಯೇ ಮೈಕಲ್ ವಾನ್ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.ಐಸಿಸಿ ನೀಡುತ್ತಿರುವ ಶ್ರೇಯಾಂಕವನ್ನು ಮೈಕಲ್ ವಾನ್ 'ಕಸ'ಕ್ಕೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಕಲ್ ವಾನ್ ಈ ರೀತಿ ಆಕ್ರೋಶವನ್ನು ವ್ಯಕ್ತಪಡಿಸೋದಿಕ್ಕೆ ಕಾರಣವೂ ಇದೆ. ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದೆ (ಇಂಗ್ಲೆಂಡ್ ಸದ್ಯ ನಾಲ್ಕನೇ ಸ್ಥಾನದಲ್ಲಿದೆ). ಆದರೆ ಕಳೆದೆರಡು ವರ್ಷಗಳಲ್ಲಿ ನ್ಯೂಜಿಲ್ಯಾಂಡ್ ಪ್ರದರ್ಶನ ಅಷ್ಟೆನೂ ಚೆನ್ನಾಗಿಲ್ಲ ಹಾಗಿದ್ದರೂ ಈ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವುದು ವಾನ್ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದೆರಡು ವರ್ಷಗಳ ಅವಧಿಯನ್ನು ಗಮನಿಸಿದರೆ ನ್ಯೂಜಿಲ್ಯಾಂಡ್ ತಂಡ ಸಾಕಷ್ಟ ಸರಣಿಗಳನ್ನು ಗೆದ್ದಿದೆ ಎಂದು ನನಗನಿಸುತ್ತಿಲ್ಲ. ಅವರು ಎರಡನೇ ಸ್ಥಾನದಲ್ಲಿರಲು ಸಾಧ್ಯವೇ ಇಲ್ಲ ಎಂದು ಮೈಕಲ್ ವಾನ್ ಹೇಳಿದ್ದಾರೆ. ಶ್ರೇಯಾಂಕ ಪಟ್ಟಿ ಗೊಂದಲವನ್ನುಂಟುಮಾಡಿದೆ ಎಂದಿದ್ದಾರೆ ಇಂಗ್ಲೆಂಡ್ ಮಾಜಿ ನಾಯಕ.

ICC ODI ranking: ಅಗ್ರಸ್ಥಾನದಲ್ಲಿ 2019 ವರ್ಷ ಮುಗಿಸಿದ ಕೊಹ್ಲಿ, ರೋಹಿತ್ICC ODI ranking: ಅಗ್ರಸ್ಥಾನದಲ್ಲಿ 2019 ವರ್ಷ ಮುಗಿಸಿದ ಕೊಹ್ಲಿ, ರೋಹಿತ್

ಇನ್ನೂ ಮುಂದುವರೆದು ಮಾತನಾಡಿದ ವಾನ್, ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನದಲ್ಲಿರಬೇಕಾದ ತಂಡ ಎಂದು ಅನಿಸುತ್ತಿಲ್ಲ. ಆಸ್ಟ್ರೇಲಿಯಾ ತಂಡ ಉತ್ಕೃಷ್ಠ ಮಟ್ಟದ ಆಟವನ್ನು ಪ್ರದರ್ಶಿಸುತ್ತಿದ್ದು ಆ ಸ್ಥಾನ ಆಸಿಸ್ ಪಾಲಾಗಬೇಕಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಮೈಕಲ್ ವಾನ್.

ಈ ತಿಂಗಳಾರಂಭದಲ್ಲಿ ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಬಂದಿಳಿದಿತ್ತು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲ್ಯಂಡ್ ತಂಡವನ್ನು 296 ರನ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತ್ತು. ಇಂದಿನಿಂದ ಬಾಕ್ಸಿಂಗ್ ಡೇ ಪಂದ್ಯ ಆರಂಭವಾಗಿದ್ದು ಈ ಪಂದ್ಯವನ್ನು ನ್ಯೂಜಿಲ್ಯಾಂಡ್ ತಂಡ ಗೆಲ್ಲಲೇ ಬೇಕಿದೆ.

'ಸೂಪರ್ ಸೀರೀಸ್' ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!'ಸೂಪರ್ ಸೀರೀಸ್' ಗುಟ್ಟು ಬಿಚ್ಚಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ!

ಐಸಿಸಿ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡ ಐದನೇ ಸ್ಥಾನದಲ್ಲಿದೆ. ಆದರೆ ಕಳೆದ ಹತ್ತು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಇಂಗ್ಲೆಡ್‌ ನೆಲದಲ್ಲೇ ಗೆದ್ದುಕೊಂಡಿದೆ.

Story first published: Thursday, December 26, 2019, 12:10 [IST]
Other articles published on Dec 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X