ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!

Accuracy, not yorker, makes Bumrah lethal: Lasith Malinga

ಲಂಡನ್‌, ಜುಲೈ 04: ಸದ್ಯ ಜಾಗತಿಕ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ ವೇಗಿ ಜಸ್‌ಪ್ರೀತ್‌ ಬುಮ್ರಾ ನಂ.1 ಬೌಲರ್‌ ಆಗಿ ಮಿಂಚುತ್ತಿದ್ದಾರೆ. ಇದೇ ವೇಳೆ ಶ್ರೀಲಂಕಾದ ಅನುಭವಿ ವೇಗಿ ಹಾಗೂ ಯಾರ್ಕರ್‌ ಸ್ಪೆಷಲಿಸ್ಟ್ ಲಸಿತ್‌ ಮಾಲಿಂಗ ಕೂಡ ಬುಮ್ರಾ ಬೆಸ್ಟ್‌ ಬೌಲರ್‌ ಎಂದು ಬೆನ್ನು ತಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

2013ರ ಐಪಿಎಲ್‌ ಟೂರ್ನಿ ವೇಳೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ತಂಡದ ಸಹ ಆಟಗಾರ ಲಸಿತ್‌ ಮಾಲಿಂಗ, ಅವರ ಪ್ರಗತಿಯನ್ನು ಬಹಳ ಹತ್ತಿರದಿಂದ ಕಂಡಿದ್ದಾರೆ. ಹೀಗಾಗಿ ಬುಮ್ರಾ ತಮ್ಮ ಭರ್ಜರಿ ಬೌಲಿಂಗ್‌ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ನಿದ್ರೆ ಕೆಡಿಸುತ್ತಿರುವುದು ಹೇಗೆ ಎಂಬುದನ್ನು ಸ್ಲಿಂಗಾ ಖ್ಯಾತಿಯ ಮಾಲಿಂಗ ವಿವರಿಸಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!

"ಒತ್ತಡ ಅಂದರೇನು? ನಿಮ್ಮಲ್ಲಿ ಸಾಮರ್ಥ್ಯ ಇಲ್ಲದೇ ಇರುವ ಸಂದರ್ಭದಲ್ಲಿ ಮಾತ್ರ ಒತ್ತಡ ಆವರಿಸುತ್ತದೆ. ನಿಮ್ಮಲ್ಲಿ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯವಿದ್ದರೆ ಒತ್ತಡಕ್ಕೆ ಅವಕಾಶವೇ ಇರುವುದಿಲ್ಲ. ನಿಖರತೆ ಮತ್ತು ಕೌಶಲ್ಯತೆಯೇ ಇಲ್ಲಿ ಮುಖ್ಯ. ನಿಮ್ಮಲ್ಲಿ ನಿಖರತೆ ಇದ್ದರೆ ಗುರಿಯತ್ತ ಕಣ್ಣಿಡುವುದು ಸುಲಭವಾಗುತ್ತದೆ. ಬುಮ್ರಾ ಅವರಲ್ಲಿ ಈ ಕಲೆ ಇದೆ. ಒಂದರ ನಂತರ ಒಂದರಂತೆ ಅವರು ನಿಖರವಾಗಿ ಅದೇ ರೀತಿಯ ಚೆಂಡನ್ನು ಎಸೆಯಬಲ್ಲರು," ಎಂದು ಸಾರ್ವ ಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಮಾಲಿಂಗ ಟೀಮ್‌ ಇಂಡಿಯಾದ ಸ್ಟಾರ್‌ ವೇಗಿಯ ಕುರಿತಾಗಿ ಮಾತನಾಡಿದ್ದಾರೆ.

ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!

"ವಿಷಯವೇನೆಂದರೆ ಎಲ್ಲರೂ ಯಾರ್ಕರ್‌, ಸ್ಲೋ ಬಾಲ್‌ ಮತ್ತು ಉತ್ತಮ ಲೆನ್ತ್‌ ಎಸೆತಗಳನ್ನು ಎಸೆಯಬಲ್ಲರು. ಆದರೆ, ನಿಖರತೆಯೊಂದೇ ಇಲ್ಲಿ ವ್ಯತ್ಯಾಸ ತರಬಲ್ಲದು. ಒಂದೇ ಸ್ಥಳದಲ್ಲಿ ನೀವು ಎಷ್ಟು ಬಾರಿ ಚೆಂಡನ್ನು ಎಸೆಯಬಲ್ಲಿರಿ? ಎಂಬುದು ಮುಖ್ಯ. ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಕೂಡ. ಬಳಿಕ ನಮ್ಮ ಕಾರ್ಯತಂತ್ರಗಳನ್ನು ಬಳಕೆಗೆ ತರಬೇಕು," ಎಂದಿದ್ದಾರೆ.

"ಬುಮ್ರಾ ಅವರನ್ನು 2013ರಿಂದ ನೋಡುತ್ತಿದ್ದೇನೆ. ಅವರೊಟ್ಟಿಗೆ ಕಾಲ ಕಳೆದಿದ್ದೇನೆ. ಅವರಲ್ಲಿ ಕಲಿಯಬೇಕೆಂಬ ಅಪಾರ ಹಂಬಲವಿತ್ತು. ಅಂತೆಯೇ ಬಹು ಬೇಗನೆ ಕಲಿತುಕೊಂಡರು. ಕಲಿಯುವ ಆಸಕ್ತಿ ಮುಖ್ಯ. ಅತ್ಯಂತ ಕಡಿಮೆ ಅವಧಿಯಲ್ಲಿ ಜಸ್‌ಪ್ರೀತ್‌ ಇಂಥದ್ದೊಂದು ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ,'' ಎಂದು ಬುಮ್ರಾ ಕುರಿತಾಗಿ ಮಾಲಿಂಗ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನಂತರ ವಿಲಿಯಮ್ಸನ್‌ ಹೇಳಿದ್ದಿದು

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇದೇ ಶನಿವಾರ ಲೀಡ್ಸ್‌ನ ಹೆಡಿಂಗ್ಲೇ ಓವಲ್‌ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರುವ ಉತ್ತಮ ಅವಕಾಶವನ್ನು ಹೊಂದಿದೆ.

Story first published: Friday, July 5, 2019, 0:02 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X