ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಕೋಚ್ ಬಗ್ಗೆ ಸ್ಪೋಟಕ ಸುದ್ದಿ ಹೊರಹಾಕಿದ ಅನಿಲ್ ಕುಂಬ್ಳೆ

ಕೆಲವೊಂದು ಕಠೋರ ಸತ್ಯಗಳು ಹೊರಬರಲು ಎಷ್ಟು ವರ್ಷಗಳು ಬೇಕಾಗುತ್ತದೆ ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆಯಿದು. ವಿಶ್ವ ಕ್ರಿಕೆಟ್ ಕಂಡ ಅಪ್ರತಿಮ ಲೆಗ್ ಸ್ಪಿನ್ನರ್/ಗೂಗ್ಲಿ ಸ್ಪೆಷಲಿಸ್ಟ್ ಅನಿಲ್ ಕುಂಬ್ಳೆ ಅವರ ವೃತ್ತಿಜೀವನದ ಕಥೆಯಿದು.

ಹದಿನೆಂಟು ವರ್ಷಗಳ ಹಿಂದಿನ ಘಟನೆಯೊಂದು, ಕಾಮೆಂಟೇಟರ್ ಕೇಳಿದ ಪ್ರಶ್ನೆಗೆ ಅನಿಲ್ ಕುಂಬ್ಳೆ ಉತ್ತರಿಸುವಾಗ, ಅಂದು ನಡೆದ ಘಟನೆಯ ಅಸಲಿಯತ್ತು ಹೊರಬಂದಿದೆ. ವೀಕ್ಷಕ ವಿವರಣೆಕಾರರು ಆ ಪ್ರಶ್ನೆಯನ್ನು ಕೇಳದಿದ್ದರೆ, ಆ ಸತ್ಯ ಹಾಗೇ ಉಳಿದುಕೊಳ್ಳುತ್ತಿತ್ತೋ ಏನೋ?

ವಿರಾಟ್ ಮತ್ತು ಧೋನಿಗೆ ವೀರೇಂದ್ರ ಸೆಹ್ವಾಗ್ ಖಡಕ್ ಕ್ಲಾಸ್ವಿರಾಟ್ ಮತ್ತು ಧೋನಿಗೆ ವೀರೇಂದ್ರ ಸೆಹ್ವಾಗ್ ಖಡಕ್ ಕ್ಲಾಸ್

ಕೆಲವು ತಿಂಗಳ ಹಿಂದೆ ವಿವಿಎಸ್ ಲಕ್ಷಣ್ ಜೊತೆಗಿನ ಸಂದರ್ಶನದಲ್ಲಿ, ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಹತ್ತಕ್ಕೆ ಹತ್ತು ವಿಕೆಟ್ ಅನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕುಂಬ್ಳೆ ಪಡೆದುಕೊಂಡಿದ್ದಾಗ ನಡೆದ ಘಟನೆಯನ್ನು ಕುಂಬ್ಳೆ ವಿವರಿಸಿದ್ದರು.

ಕಿವೀಸ್ ಗೆ ಸೂಪರ್ ಓವರ್ ನಲ್ಲಿ ಮತ್ತೆ ಸೋಲು: ಕೊಹ್ಲಿಗೆ ಕನಿಕರ ಅನ್ನೋದೇ ಇಲ್ಲ!ಕಿವೀಸ್ ಗೆ ಸೂಪರ್ ಓವರ್ ನಲ್ಲಿ ಮತ್ತೆ ಸೋಲು: ಕೊಹ್ಲಿಗೆ ಕನಿಕರ ಅನ್ನೋದೇ ಇಲ್ಲ!

ಇತ್ತೀಚೆಗೆ ನಡೆದ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡಾ ಅನಿಲ್ ಕುಂಬ್ಳೆಯ ಬದ್ದತೆಯನ್ನು ಹಾಡಿ ಹೊಗಳಿದ್ದರು. ಬ್ಯಾಂಡೇಜ್ ಹಾಕಿಕೊಂಡು ಬೌಲಿಂಗ್ ಮಾಡಿದ್ದನ್ನು, ಪ್ರಧಾನಿ, ಆ ಕಾರ್ಯಕ್ರಮದಲ್ಲಿ ಸ್ಮರಿಸಿಕೊಂಡಿದ್ದರು. ಕುಂಬ್ಳೆ, ಅಂದಿನ ಟೀಂ ಕೋಚ್ ಬಗ್ಗೆ ಹೇಳಿದ್ದೇನು, ಇಂಟರೆಸ್ಟಿಂಗ್ ಸುದ್ದಿ, ಮುಂದೆ ಓದಿ..

ಎರಡು ದಶಕಗಳ ಹಿಂದಿನ ಕ್ರಿಕೆಟ್ ಕಥೆ

ಎರಡು ದಶಕಗಳ ಹಿಂದಿನ ಕ್ರಿಕೆಟ್ ಕಥೆ

ಇಂದಿಗೆ ಎರಡು ದಶಕಗಳ ಹಿಂದಿನ ಕ್ರಿಕೆಟ್ ಕಥೆ. ಫೆಬ್ರವರಿ 7, 1999ರಲ್ಲಿ ದೆಹಲಿಯ ಕೋಟ್ಲಾ ಮೈದಾನದಲ್ಲಿ ಭಾರತ - ಪಾಕಿಸ್ತಾನದ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ವಾಸಿಂ ಅಕ್ರಂ, ಸಯೀದ್ ಅನ್ವರ್, ಇಜಾಜ್ ಅಹಮದ್, ಇಂಜಮಾಮ್, ಯೂಸುಫ್ ಯೂಹಾನ ಮುಂತಾದ ಘಟಾನುಗಟಿಗಳಿದ್ದ ಟೀಂ ಅದು. ಆ ಪಂದ್ಯದಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಅನ್ನು ಕುಂಬ್ಳೆ ಪಡೆದು ದಾಖಲೆ ನಿರ್ಮಿಸಿದ್ದರು. ಈ ಅಪರೂಪದ ದಾಖಲೆಯನ್ನು ತಪ್ಪಿಸಲು ಸಡಗೋಪನ್ ರಮೇಶ್ ಪ್ರಯತ್ನಿಸಿದ್ದರು ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು.

ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರ

ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರ

ಇತ್ತೀಚೆಗಿನ ಎಲ್ಲಾ ಕ್ರಿಕೆಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರದ ವೀಕ್ಷಕವಿವರಣೆಯನ್ನು ನೀಡುತ್ತಿರುವುದು ಗೊತ್ತಿರುವ ವಿಚಾರ. ವಿಜಯ್ ಭಾರದ್ವಾಜ್ ಸೇರಿದಂತೆ, ಕರ್ನಾಟಕದ ಹಲವು ಮಾಜೀ ಕ್ರಿಕೆಟಿಗರು ಕಾಮೆಂಟ್ರಿ ನೀಡುತ್ತಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ನಾಲ್ಕನೇ ಟಿ20 ಪಂದ್ಯದ ವೇಳೆ, ಕುಂಬ್ಳೆ ಕಾಮೆಂಟ್ರಿ ಬಾಕ್ಸಿಗೆ ಆಗಮಿಸಿದ್ದರು.

ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್

ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್

ಆ ವೇಳೆ, ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್ ಮಾಡಿದ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಅದು, 2002ರಲ್ಲಿ ಆಂಟಿಗುವಾದಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವಿನ ಪಂದ್ಯ. ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್ ಮಾಡಿದ್ದರು. ಅಂದು ತಮ್ಮ ದವಡೆ ಒಡೆತಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಕುಂಬ್ಳೆ, ಮೊನ್ನೆಯ ಕಾರ್ಯಕ್ರಮದಲ್ಲಿ ವಿವರಿಸಿದ್ದರು.

ಆಗ ಕೋಚ್ ಆಗಿದ್ದವರು ಜಾನ್ ರೈಟ್

ಆಗ ಕೋಚ್ ಆಗಿದ್ದವರು ಜಾನ್ ರೈಟ್

ಆಗ ಕೋಚ್ ಆಗಿದ್ದವರು ಜಾನ್ ರೈಟ್. ವೆಸ್ಟ್ ಇಂಡೀಸ್ 2ನೇ ಹೊಸ ಬಾಲ್ ತೆಗೆದುಕೊಂಡಿತ್ತು. ಭಾರತದ ಆರನೇ ವಿಕೆಟ್ ಪತನದ ನಂತರ ಆಗ ವಿಕೆಟ್ ಕೀಪರ್ ಆಗಿದ್ದ ಅಜಯ್ ರಾತ್ರಾ ಬ್ಯಾಟ್ ಮಾಡಲು ಹೋಗಬೇಕಾಗಿತ್ತು. ಆದರೆ ಹೊಸ ಬಾಲ್‍ಗೆ ರಾತ್ರಾ ಅಷ್ಟು ಚೆನ್ನಾಗಿ ಆಡುವುದಿಲ್ಲ. ನೀನು ಚೆನ್ನಾಗಿ ಆಡ್ತೀಯಾ, ಹೋಗು ಬ್ಯಾಟಿಂಗ್ ಮಾಡೆಂದು ಕೋಚ್ ಜಾನ್ ರೈಟ್ ನನ್ನನ್ನು ಕಳುಹಿಸಿದರು.

ಹೊಸ ಬಾಲ್ ನನ್ನ ದವಡೆಗೆ ಬಿತ್ತು

ಹೊಸ ಬಾಲ್ ನನ್ನ ದವಡೆಗೆ ಬಿತ್ತು

ಆಗ ಬ್ಯಾಟಿಂಗ್ ಮಾಡುವ ವೇಳೆ, ಹೊಸ ಬಾಲ್ ನನ್ನ ದವಡೆಗೆ ಬಿತ್ತು, ಗಾಯವಾಯಿತು. ಅಂದಿನ ಪಂದ್ಯ ಮುಗಿದ ನಂತರ ವೈದರನ್ನು ಸಂಪರ್ಕಿಸಿದೆ. ನಂತಿಂಗ್ ಟು ವರಿ ಎಂದ್ರು. ಆದರೂ, ನನಗೆ ನೋವು ಕಾಡುತ್ತಿತ್ತು. ಆ ಪಂದ್ಯದಲ್ಲಿ ನಾವು ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ನಾನು ಗಾಯಗೊಂಡಿದ್ದರಿಂದ ತೆಂಡೂಲ್ಕರ್ ಒಬ್ಬರೇ ಸ್ಪಿನ್ ಮಾಡಬೇಕಿತ್ತು.

ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ

ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ

ಟೀಂಗೆ ಸ್ಪಿನ್ನರ್ ಅವಶ್ಯಕತೆ ನನಗೆ ಗೊತ್ತಾಯಿತು. ಕೂಡಲೇ, ಫಿಸಿಯೋಥೆರಪಿಯವರ ಬಳಿ ಬೌಲಿಂಗ್ ಮಾಡುತ್ತೇನೆ ಎಂದು ಕೇಳಿದೆ. ಆಗ ಅವರು ತಮಾಷೆ ಮಾಡಬೇಡಿ ಎಂದರು. ಆದರೂ. ಬೌಲಿಂಗ್ ಮಾಡ್ತೀನಿ ಎಂದು ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದೆ.

16 ಓವರ್ ಬ್ರಿಯಾನ್ ಲಾರಾಗೆ ಬೌಲ್ ಮಾಡಿ ಅವರನ್ನು ಔಟ್ ಮಾಡಿದ್ದೆ

16 ಓವರ್ ಬ್ರಿಯಾನ್ ಲಾರಾಗೆ ಬೌಲ್ ಮಾಡಿ ಅವರನ್ನು ಔಟ್ ಮಾಡಿದ್ದೆ

ಸತತವಾಗಿ ಹದಿನಾರು ಓವರ್ ಬ್ರಿಯಾನ್ ಲಾರಾಗೆ ಬೌಲ್ ಮಾಡಿ ಅವರನ್ನು ಔಟ್ ಮಾಡಿದ್ದೆ. ಅಂದು, ರಾತ್ರಾ ಮೊದಲು ಬ್ಯಾಟ್ ಮಾಡಲು ಕೋಚ್ ರೈಟ್ ನಿರ್ದೇಶನ ನೀಡಿದ್ದರಿಂದ ನಾನು ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಬೇಕಾಯಿತು ಎಂದು ಅನಿಲ್ ಕುಂಬ್ಳೆ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

Story first published: Sunday, February 2, 2020, 10:15 [IST]
Other articles published on Feb 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X