ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KPL 2022: ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಕಪ್ ಅನಾವರಣಗೊಳಿಸಿದ ಕಿಚ್ಚ ಸುದೀಪ; ವೇಳಾಪಟ್ಟಿ ಇಲ್ಲಿದೆ

Actor Kichcha Sudeepa Unveils Maharaja Trophy T20 Cricket Cup In Mysuru; Here Is The Full Schedule

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಕಪ್ ಅನ್ನು ಗುರುವಾರ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.

ಇದೇ ವೇಳೆ ಮಹಾರಾಜ ಪ್ರಶಸ್ತಿಗಾಗಿ ಹೋರಾಡುವ ಆರು ತಂಡಗಳ ನಾಯಕರ ಹೆಸರನ್ನು ಪ್ರಕಟಿಸಲಾಯಿತು. ಆಗಸ್ಟ್ 7ರಿಂದ ಆಗಸ್ಟ್ 26ರವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ.

ಮಹಾರಾಜ ಟ್ರೋಫಿ: ಹೊಸ ಕೆಪಿಎಲ್‌ನ ಎಲ್ಲಾ 6 ತಂಡಗಳ ನಾಯಕರ ಘೋಷಣೆ; ಬೆಂಗಳೂರಿಗೆ ಮಯಾಂಕ್ ನಾಯಕ!ಮಹಾರಾಜ ಟ್ರೋಫಿ: ಹೊಸ ಕೆಪಿಎಲ್‌ನ ಎಲ್ಲಾ 6 ತಂಡಗಳ ನಾಯಕರ ಘೋಷಣೆ; ಬೆಂಗಳೂರಿಗೆ ಮಯಾಂಕ್ ನಾಯಕ!

ಕೋವಿಡ್-19 ಕಾರಣದಿಂದ ಎರಡು ವರ್ಷ ಈ ಟೂರ್ನಿ ನಡೆದಿರಲಿಲ್ಲ. ನಟ ಕಿಚ್ಚ ಸುದೀಪ್ ಟೂರ್ನಿ ರಾಯಭಾರಿಯಾಗಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಹಾಗೂ ಮಂಗಳೂರು ಫ್ರಾಂಚೈಸ್ ಹೆಸರಿನಲ್ಲಿ 6 ತಂಡಗಳು ಸ್ಪರ್ಧಿಸುತ್ತಿವೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೈನಲ್ ಸೇರಿದಂತೆ 16 ಪಂದ್ಯ

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೈನಲ್ ಸೇರಿದಂತೆ 16 ಪಂದ್ಯ

ಆಗಸ್ಟ್ 7ರಂದು ಮೈಸೂರಿನ ಗ್ಲೇಡ್ಸ್ ಮೈದಾನದಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ಒಟ್ಟು 18 ಪಂದ್ಯಗಳು ಮೊದಲ ಚರಣದಲ್ಲಿ ನಡೆಯಲಿವೆ. ಬಳಿಕ ಫೈನಲ್ ಸೇರಿದಂತೆ 16 ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ.

ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ಫ್ರಾಂಚೈಸಿಗಳ ಬದಲಿಗೆ ಪ್ರಾಯೋಜಕತ್ವದಡಿ ಟೂರ್ನಿ ಆಯೋಜಿಸಲಾಗುತ್ತಿದೆ. ಸ್ವತಃ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಸುದೀಪ್ ಅವರನ್ನು ಟೂರ್ನಿಯ ಬ್ರಾಂಡ್ ರಾಯಭಾರಿ ಎಂದು ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

IPL 2023: ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್; ದಿಗ್ಗಜರಿಂದ ಬ್ಯಾಟಿಂಗ್ ಮಾಸ್ಟರ್‌ಕ್ಲಾಸ್‌

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಭಾಗಿ

ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಭಾಗಿ

ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, "ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ. ಈ ಋತು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಟೈಟಲ್ ಪ್ರಾಯೋಜಕತ್ವ ವಹಿಸಲಿದೆ. ಮೂರು ವಾರಗಳ ಕಾಲ ನಡೆಯುವ ಟಿ20 ಕ್ರಿಕೆಟ್ ಹಬ್ಬದ ಪ್ರಾಯೋಜಕತ್ವವನ್ನು ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗಲಿದೆ. ಹೆಚ್ಚಿನ ಪ್ರಮಾಣದ ಬಳಕೆಗಾಗಿ ಫ್ಯಾನ್‌ಕೋಡ್ ಆಪ್‌ನಲ್ಲಿಯೂ ವೀಕ್ಷಿಸಬಹುದು," ಎಂದರು.

ಕರ್ನಾಟಕ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಜಗದೀಶ್ ಸುಚಿತ್, ದೇವದತ್ ಪಡಿಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆಸಿ ಕಾರಿಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಾರಾಜ ಟಿ20 ಲೀಗ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಲಿರುವ ನಾಯಕರ ಪಟ್ಟಿ

ಮಹಾರಾಜ ಟಿ20 ಲೀಗ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಲಿರುವ ನಾಯಕರ ಪಟ್ಟಿ

ಬೆಂಗಳೂರು ಬ್ಲಾಸ್ಟರ್ಸ್ - ಮಯಾಂಕ್ ಅಗರ್ವಾಲ್

ಗುಲ್ಬರ್ಗಾ ಮಿಸ್ಟಿಕ್ಸ್ - ಮನೀಷ್ ಪಾಂಡೆ

ಮೈಸೂರು ವಾರಿಯರ್ಸ್ - ಕರುಣ್ ನಾಯರ್

ಶಿವಮೊಗ್ಗ ಸ್ಟ್ರೈಕರ್ಸ್ - ಕೃಷ್ಣಪ್ಪ ಗೌತಮ್

ಮಂಗಳೂರು ಯುನೈಟೆಡ್ - ಸಮರ್ಥ್. ಆರ್

ಹುಬ್ಬಳ್ಳಿ ಟೈಗರ್ಸ್ - ಅಭಿಮನ್ಯು ಮಿಥುನ್

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ವೇಳಾಪಟ್ಟಿ

ಆಗಸ್ಟ್ 7: ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್
ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 8: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 9: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್

ಆಗಸ್ಟ್ 10: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್
ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಯುನೈಟೆಡ್
ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್

ಆಗಸ್ಟ್ 12: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 13: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್

ಆಗಸ್ಟ್ 14: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 15: ಮಂಗಳೂರು ಯುನೈಟೆಡ್ vs ಬೆಂಗಳೂರು ಬ್ಲಾಸ್ಟರ್ಸ್
ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್

ಆಗಸ್ಟ್ 16: ವಿಶ್ರಾಂತಿ ದಿನ

ಆಗಸ್ಟ್ 17: ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್

ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್

ಆಗಸ್ಟ್ 19: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಮಂಗಳೂರು ಯುನೈಟೆಡ್ vs ಗುಲ್ಬರ್ಗಾ ಮಿಸ್ಟಿಕ್ಸ್

ಆಗಸ್ಟ್ 20: ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್
ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್

ಆಗಸ್ಟ್ 21: ಮೈಸೂರು ವಾರಿಯರ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್

ಆಗಸ್ಟ್ 22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್

ಆಗಸ್ಟ್ 23: ಎಲಿಮಿನೇಟರ್ & ಕ್ವಾಲಿಫೈಯರ್ 1

ಆಗಸ್ಟ್ 24: ವಿಶ್ರಾಂತಿಯ ದಿನ

ಆಗಸ್ಟ್ 25: ಎರಡನೇ ಕ್ವಾಲಿಫೈಯರ್ ಪಂದ್ಯ

ಆಗಸ್ಟ್ 26: ಫೈನಲ್ ಪಂದ್ಯ

Story first published: Thursday, August 4, 2022, 18:48 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X