ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶ್ಲೀಲ ಪದ ಪ್ರಯೋಗಿಸಿ ಒಂದು ಪಂದ್ಯ ನಿಷೇಧಕ್ಕೆ ಒಳಗಾದ ಆ್ಯಡಂ ಜಂಪಾ

Adam Zampa banned for a game for uttering audible obscenity

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ಖಾಯಂ ಸದಸ್ಯ ಸ್ಪಿನ್ನರ್ ಆಡಂ ಜಂಪಾ ಆಸ್ಟ್ರೇಲಿಯಾ ಕ್ರಿಕೆಟ್ ಲೀಗ್ ಬಿಗ್‌ಬ್ಯಾಷ್ ಟೂರ್ನಿಯಲ್ಲಿ ಒಂದು ಪಂದ್ಯ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಅಶ್ಲೀಲ ಪದ ಪ್ರಯೋಗಿಸಿದ ಆರೋಪದ ಹಿನ್ನೆಲೆಯಲ್ಲಿ ಜಂಪಾ ಒಂದು ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಆಸ್ಟ್ರೇಲಿಯಾಯಾದ ಲೆಗ್ ಸ್ಪಿನ್ನರ್ ಜಂಪಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ತಮ್ಮ ತಪ್ಪನ್ನು ಜಂಪಾ ಒಪ್ಪಿಕೊಂಡಿದ್ದಾರೆ. ಬಿಬಿಎಲ್‌ನ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಕಣಕ್ಕಿಳಿಯುವ ಜಂಪಾ ಸಿಡ್ನಿ ಥಂಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅಶ್ಲೀಲ ಪದ ಪ್ರಯೋಗ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು.

ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್

ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಪ್ರಕಾರ ಆ್ಯಡಂ ಜಂಪಾ ಒಂದು ಪಂದ್ಯದ ನಿಷೇಧದ ಜೊತೆಗೆ 2500 ಡಾಲರ್ ದಂಡವನ್ನು ಕೂಡ ಪಾವತಿಸಬೇಕಿದೆ. ಒಂದು ನಿಷೇಧದ ಅಂಕವನ್ನು ಕೂಡ ಅವರು ಕಳೆದುಕೊಂಡಿದ್ದಾರೆ.

ಸಿಡ್ನಿ ಥಂಡರ್ಸ್ ವಿರುದ್ಧದ ಪಂದ್ಯದ 16ನೇ ಓವರ್‌ನಲ್ಲಿ ಆಡಂ ಜಂಪಾ ಎಸೆದ ಅಗಲವಾದ ಎಸೆತವನ್ನು ಕಲಮ್ ಫರ್ಗ್ಯುಸನ್ ಬಾರಿಸಿ ವಿಕೆಟ್‌ಗಳ ಮಧ್ಯೆ ಓಟಕ್ಕಿತ್ತರು. ಈ ಸಂದರ್ಭದಲ್ಲಿ ಜಂಪಾ ವಿಕೆಟ್‌ನ ಹಿಂಭಾಗಕ್ಕೆ ಬಂದು ಅಶ್ಲೀಲವಾದ ಪದವನ್ನು ಪ್ರಯೋಗಿಸಿದ್ದಾರೆ. ಇದು ವಿಕೆಟ್ ಹಿಂದಿನ ಮೈಕ್‌ನಲ್ಲಿ ದಾಖಲಾಗಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ವೇಗಿ ಉಮೇಶ್ ಯಾದವ್ ಹೊರಕ್ಕೆಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ವೇಗಿ ಉಮೇಶ್ ಯಾದವ್ ಹೊರಕ್ಕೆ

ಬಿಬಿಎಲ್‌ನ ಈ ವರ್ಷದ ಆವೃತ್ತಿಯಲ್ಲಿ 28ರ ಹರೆಯದ ಸ್ಪಿನ್ ಬೌಲರ್ ಈವರೆಗೆ 7 ವಿಕೆಟ್ ಪಡೆದು ಮಿಂಚಿದ್ದಾರೆ. ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೂ ಮುನ್ನ ನಡೆದ ಭಾರತ ಆಸ್ಟ್ರೇಲಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಂಪಾ ಪ್ರತೀ ಪಂದ್ಯದಲ್ಲೂ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಮೂರು ಪಂದ್ಯಗಳಲ್ಲಿ ಜಂಪಾ 7 ವಿಕೆಟ್ ಪಡೆದು ಮಿಂಚಿದ್ದಾರೆ.

Story first published: Thursday, December 31, 2020, 17:56 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X