ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಬದಲು ಬಾಬರ್ ಅಝಾಮ್ ಆರಿಸಿದ ಆದಿಲ್ ರಶೀದ್

Adil Rashid picked Babar Azam over Virat Kohli based on current form

ಲಂಡನ್, ಮೇ 15: ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಾಮ್ ಇವರಲ್ಲಿ ಯಾರನ್ನು ಆರಿಸುತ್ತೀರಿ? ಎಂಬ ಪ್ರಶ್ನೆಗೆ ಇಂಗ್ಲೆಂಡ್‌ ಸ್ಪಿನ್ನರ್ ಆದಿಲ್ ರಶೀದ್ ಅವರು ಬಾಬರ್ ಅಝಾಮ್ ಅವರನ್ನು ಆರಿಸಿದ್ದಾರೆ. ತಾನು ಈಗಿನ ಫಾರ್ಮ್ ಗಮನಿಸಿ ಬಾಬರ್ ಆರಿಸಿರುವುದಾಗಿ ರಶೀದ್ ಹೇಳಿದ್ದಾರೆ.

ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿ

31ರ ಹರೆಯದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡವರು. 25ರ ಹರೆಯದ ಬಾಬರ್ ಅಝಾಮ್ ಕೂಡ ಉತ್ತಮ ಬ್ಯಾಟಿಂಗ್ ಸಾಧನೆ ತೋರಿಸುತ್ತಿದ್ದು, ನಾಳೆ ದೊಡ್ಡ ಬ್ಯಾಟ್ಸ್‌ಮನ್ ಆಗುತ್ತಾರೆ ಎಂದು ಕ್ರಿಕೆಟ್‌ ಲೋಕ, ಪರಿಣಿತರು ಮಾತಾಡುತ್ತಿದ್ದಾರೆ.

ಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿ

'ಓಹೋ.. ಇದು ತುಂಬಾ ಕಷ್ಟಕರವಾದ ಪ್ರಶ್ನೆ. ಇದು ನಿಜಕ್ಕೂ ಕಷ್ಟದ ಪ್ರಶ್ನೆಯಾದರೂ ಸದ್ಯದ ಫಾರ್ಮ್ ಅವಲಂಭಿಸಿ ನಾನು ನನ್ನ ಆಯ್ಕೆ ಹೇಳಬಹುದು. ಈಗಿನ ಫಾರ್ಮ್ ಗಮನಿಸಿ ನಾನು ಬಾಬರ್ ಅಝಾಮ್ ಅವರನ್ನು ಆರಿಸುತ್ತೇನೆ,' ಎಂದು ಕ್ರೀಸ್‌ ಟಿವಿ ಸಂದರ್ಶನದಲ್ಲಿ ಮಾತನಾಡುತ್ತ ರಶೀದ್ ನುಡಿದರು.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

ಮಾತು ಮುಂದುವರೆಸಿದ ಆದಿಲ್, 'ನಾನಿಲ್ಲಿ ಬರೀ ಫಾರ್ಮ್‌ ಬಗ್ಗೆ ಮಾತನಾಡುತ್ತಿದ್ದೇನೆ. ಬಾಬರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ನಾನು ಅವರನ್ನು ಆರಿಸಿದ್ದೇನೆ. ಆದರೆ ಇಬ್ಬರೂ ವರ್ಲ್ಡ್ ಕ್ಲಾಸ್ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಎರಡು ಮಾತಿಲ್ಲ,' ಎಂದು 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಲೆಗ್ ಸ್ಪಿನ್ನರ್ ರಶೀದ್ ವಿವರಿಸಿದ್ದಾರೆ.

ನನ್ನ ಹೃದಯ ಸಚಿನ್ ಔಟಾಗುವುದನ್ನು ಬಯಸುತ್ತಿರಲಿಲ್ಲ: ಪಾಕ್ ಮಾಜಿ ನಾಯಕ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿನನ್ನ ಹೃದಯ ಸಚಿನ್ ಔಟಾಗುವುದನ್ನು ಬಯಸುತ್ತಿರಲಿಲ್ಲ: ಪಾಕ್ ಮಾಜಿ ನಾಯಕ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

ಕೊರೊನಾವೈರಸ್‌ಗೂ ಮುನ್ನ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ ತೋರಿಕೊಂಡಿದ್ದರು. ನ್ಯೂಜಿಲೆಂಡ್‌ಗೆ ಭಾರತ ಪ್ರವಾಸ ಕೈಗೊಂಡಿದ್ದಾಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಒಟ್ಟು 11 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕಲೆ ಹಾಕಿದ್ದು ಕೇವಲ 218 ರನ್ ಮಾತ್ರ. ಇದೇ ಕಾರಣಕ್ಕೆ ಆದಿಲ್ ತಾನು ಬಾಬರ್ ಅವರನ್ನು ಪಿಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

Story first published: Friday, May 15, 2020, 16:54 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X