ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಫ್ಘನ್‌ ತಂಡದ ಯಡವಟ್ಟುಗಳನ್ನು ಬಿಚ್ಚಿಡ್ತಾರಂತೆ ಕೋಚ್‌ ಸಿಮೋನ್ಸ್‌!

Afghan coach Simmons to spill beans on Ahmadzai after WC

ಲಂಡನ್‌, ಜೂನ್‌ 19: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಐದು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಅಫಘಾನಿಸ್ತಾನ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂಬುದು ಇದೀಗ ಸ್ಪಷ್ಟವಾಗುತ್ತಿದ್ದು, ತಂಡದ ಕೋಚ್‌ ಫಿಲ್‌ ಸಿಮೋನ್ಸ್‌ ವಿಶ್ವಕಪ್‌ ಮುಗಿದ ಬಳಿಕ ಎಲ್ಲಾ ಯಡವಟ್ಟುಗಳನ್ನು ಬಹಿರಂಗ ಪಡಿಸುವುದಾಗಿ ತಮ್ಮ ಟ್ವೀಟ್‌ನಲ್ಲಿ ಸುಳಿವು ನೀಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಸಿಮೋನ್ಸ್‌, ತಮ್ಮ ಟ್ವೀಟ್‌ನಲ್ಲಿ ತಂಡದ ಮಾಜಿ ನಾಯಕ ಅಸ್ಗರ್‌ ಅಫ್ಘಾನ್‌ ಅವರನ್ನು ನಾಯಕತ್ವದಿಂದ ಕೆಳೆಗಿಳಿಯುವಂತೆ ಮಾಡಲು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ದವಲತ್‌ ಅಹ್ಮದ್ಝಾಯ್‌ ವಹಿಸಿರುವ ಪಾತ್ರವನ್ನು ಎಳೆ ಎಳೆಯಾಗಿ ಬಿಚ್ಚಿಡುವುದಾಗಿ ಹೇಳಿದ್ದಾರೆ.

"ವಿಶ್ವಕಪ್‌ ಟೂರ್ನಿಯ ಮಧ್ಯದಲ್ಲಿದ್ದೇನೆ. ನಮ್ಮ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇನೆ. ಆದರೆ, ನಮ್ಮ ತಂಡದ ಪೂರ್ವ ಸಿದ್ದತೆಯಲ್ಲಿ ಮಿಸ್ಟರ್‌ ಡವಲತ್‌ ಅಹ್ಮದ್ಝಾಯ್‌ ವಹಿಸಿರುವ ಪಾತ್ರವವನ್ನು ವಿಶ್ವಕಪ್‌ ಮುಗಿದ ಬಳಿಕ ಅಫಘಾನಿಸ್ತಾನದ ಜನತೆಗೆ ತಿಳಿಸಲಿದ್ದೇನೆ. ಹಾಗೂ ಅಸ್ಗರ್‌ ಅಫ್ಘಾನ್‌ ಅವರನ್ನು ನಾಯಕತ್ವದಿಂದ ಕೆಳೆಗಿಳಿಸಲು ಅವರು ಮಾಡಿದ ಕುತಂತ್ರವನ್ನು ವಿವರಿಸಲಿದ್ದೇನೆ,'' ಎಂದು ಟ್ವೀಟ್‌ ಮಾಡಿದ್ದಾರೆ.

ಬ್ರೇಕಿಂಗ್‌: ವಿಶ್ವಕಪ್‌ನಿಂದ ಧವನ್‌ ಔಟ್‌, ಬಿಸಿಸಿಐ ಅಧಿಕೃತ ಹೇಳಿಕೆ!ಬ್ರೇಕಿಂಗ್‌: ವಿಶ್ವಕಪ್‌ನಿಂದ ಧವನ್‌ ಔಟ್‌, ಬಿಸಿಸಿಐ ಅಧಿಕೃತ ಹೇಳಿಕೆ!

ವಿಶ್ವಕಪ್‌ನಲ್ಲಿ ಅಫಘಾನಿಸ್ತಾನದ ತಂಡ ಕಳಾಹೀನ ಪ್ರದರ್ಶನಕ್ಕೆ ಕೋಚ್‌ ಸಿಮೋನ್ಸ್‌ ಮತ್ತು ತಂಡವೇ ಕಾರಣ ಎಂದು ಅಹ್ಮದ್ಝಾಯ್‌ ಹೇಳಿಕೆ ನೀಡಿರುವುದನ್ನು ಅಫಘಾನಿಸ್ತಾನದ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿರುವುದಕ್ಕೆ ಮರು ಟ್ವೀಟ್‌ ಮಾಡುವ ಮೂಲಕ ಸಿಮೋನ್ಸ್‌ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ವಿಶ್ವಕಪ್‌ಗೆ ಅಫಘಾನಿಸ್ತಾನದ ತಂಡ ಪೂರ್ವ ಸಿದ್ಧತೆಯಲ್ಲಿ ಹಲವು ಬದಲಾವಣೆಗಳಾಗಿದ್ದವು. ಪ್ರಮುಖವಾಗಿ ದೀರ್ಘಕಾಲದ ನಾಯಕ ಅಸ್ಗರ್‌ ಅಘ್ಫಾನ್‌ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಸಂದರ್ಭದಲ್ಲಿ ತಂಡದ ಸ್ಟಾರ್‌ ಆಟಗಾರರಾದ ರಶೀದ್‌ ಖಾನ್‌ ಮತ್ತು ಮೊಹಮ್ಮದ್‌ ನಬಿ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು.

ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!

ವಿಶ್ವಕಪ್‌ ಟೂರ್ನಿ ಆರಂಭಗೊಂಡ ಬಳಿಕ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಶಹಝಾದ್‌ ಅವರನ್ನು ಗಾಯದ ಸಮಸ್ಯೆಯ ನೆಪ ಹೇಳಿ ತಂಡದಿಂದ ಹೊರಗಿಟ್ಟು ಅಫಘಾನಿಸ್ತಾನ ಕ್ರಿಕೆಟ್‌ ಸಂಸ್ಥೆ ಭಾರಿ ಸುದ್ದಿಯಾಗಿತ್ತು. ಖುದ್ದಾಗಿ ಮೊಹಮ್ಮದ್‌ ಶಹಝಾದ್‌ ತಮ್ಮ ಗಾಯದ ಸಮಸ್ಯೆ ಗಂಭೀರ ಸ್ವರೂಪದಲ್ಲ ಆದರೂ ಈ ರೀತಿಯ ಮೋಸ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಶೇರ್‌ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುವುದಾಗಿಯೂ ಶಹಝಾದ್‌ ಬೆದರಿಕೆಯೊಡ್ಡಿದ್ದರು.

Story first published: Wednesday, June 19, 2019, 20:01 [IST]
Other articles published on Jun 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X