ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ : ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ

Afghanistan beat Ireland to notch up maiden Test victory

ಡೆಹ್ರಾಡೂನ್, ಮಾರ್ಚ್ 18: ಐರ್ಲೆಂಡ್ ತಂಡದ ವಿರುದ್ಧ 7 ವಿಕೆಟ್ ಗಳ ಅಂತರದ ಜಯ ದಾಖಲಿಸುವ ಮೂಲಕ ಅಫ್ಘಾನಿಸ್ತಾನ ತಂಡವು, ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸಿದೆ.

--

ಟೆಸ್ಟ್ ಪಂದ್ಯ ಗೆಲ್ಲಲು 147ರನ್ ಗುರಿ ಪಡೆದ ಅಫ್ಘಾನಿಸ್ತಾನ ತಂಡಕ್ಕೆ ರಹಮತ್ ಶಾ 76 ರನ್ ಹಾಗೂ ಚೊಚ್ಚಲ ಪಂದ್ಯವಾಡಿದ ಇಹ್ಸಾನುಲ್ಲಾ ಜನತ್ ಅಜೇಯ 65ರನ್ ಗಳಿಸಿ ಜಯ ತಂದಿತ್ತರು. ಇವರಿಬ್ಬರು ಎರಡನೇ ವಿಕೆಟ್ ಗೆ 139ರನ್ ಜೊತೆಯಾಟ ಸಾಧಿಸಿ, ತಂಡಕ್ಕೆ ಐತಿಹಾಸಿಕ ಜಯ ತಂದು ಕೊಟ್ಟರು.

ಐಪಿಎಲ್ ಅಭ್ಯಾಸ : ಸನ್ ರೈಸರ್ಸ್ ಪರ ವಾರ್ನರ್ ಭರ್ಜರಿ ಬ್ಯಾಟಿಂಗ್ ಐಪಿಎಲ್ ಅಭ್ಯಾಸ : ಸನ್ ರೈಸರ್ಸ್ ಪರ ವಾರ್ನರ್ ಭರ್ಜರಿ ಬ್ಯಾಟಿಂಗ್

ಮೊದಲ ಇನ್ನಿಂಗ್ಸ್ ನಲ್ಲಿ ಆಫ್ಘಾನಿಸ್ತಾನ 314ರನ್ ಗಳಿಸಿತ್ತು. ಜನತ್ ಅವರು 98ರನ್ ಗಳಿಸಿದ್ದರು. ಐರ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 172ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 288ರನ್ ಗಳಿಸಿ, 147ರನ್ ಗುರಿ ನೀಡಿತ್ತು. ಅಫ್ಘನ್ ತಂಡ 149/3 ಸ್ಕೋರ್ ಮಾಡಿ ಜಯ ದಾಖಲಿಸಿತು.

1
45453

ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ಪರ ಸ್ಪಿನ್ನರ್ ರಶೀದ್ ಖಾನ್ ಅವರು ಪಂದ್ಯದ ಮೂರನೇ ದಿನದಾಟದಂದು ಐರ್ಲೆಂಡ್ 82ರನ್ನಿತ್ತು 5 ವಿಕೆಟ್ ಗಳಿಸಿದರು. ಐರ್ಲೆಂಡ್ ಪರ ಬಲ್ಬಿರ್ನೆ 82 ಹಾಗೂ ಓ ಬ್ರಿಯಾನ್ 56ರನ್ ಗಳಿಸಿದರು. 10ನೇ ವಿಕೆಟ್ ಗೆ ಜೇಮ್ಸ್ ಕೆಮರೂನ್ ಡೌ ಹಾಗೂ ಟಿಮ್ ಮುರ್ತಗ್ 58ರನ್ ಜೊತೆಯಾಟ ಸಾಧಿಸಿದ್ದು ವಿಶೇಷವಾಗಿತ್ತು. ಟೆಸ್ಟ್ ಸರಣಿಗೂ ಮುನ್ನ ಟಿ20 ಸರಣಿಯನ್ನು 2-0ರಲ್ಲಿ ಗೆದ್ದಿರುವ ಅಫ್ಘಾನಿಸ್ತಾನ, ಏಕದಿನ ಸರಣಿಯಲ್ಲಿ 2-2ರ ಸಮಬಲಾ ಸಾಧಿಸಿತ್ತು.

Story first published: Monday, March 18, 2019, 17:11 [IST]
Other articles published on Mar 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X