ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರ

ಲಾಹೋರ್: ಪಾಕಿಸ್ತಾನ ವಿರುದ್ಧದ ಅಫ್ಘಾನಿಸ್ತಾನ್‌ನ ಮೂರು ಪಂದ್ಯಗಳ ಏಕದಿನ ಸರಣಿ ಶ್ರೀಲಂಕಾದ ಹಂಬನ್‌ತೋಟದಲ್ಲಿ ನಡೆಯುವುದರಲ್ಲಿತ್ತು. ಆದರೆ ಈ ಏಕದಿನ ಸರಣಿ ಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರವಾಗಿದೆ. ಅಫ್ಘಾನಿಸ್ತಾನ ತಂಡ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುವುದು ಪ್ರಯಾಣ ದೃಷ್ಟಿಯಲ್ಲಿ ಸವಾಲಿನದ್ದಾಗಿರುವುದರಿಂದ ಏಕದಿನ ಸರಣಿ ಸ್ಥಳಾಂತರವಾಗಿದೆ ಎಂದು ತಿಳಿದು ಬಂದಿದೆ.

ಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರುಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರು

ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ಎಸಿಬಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಮೀದ್ ಶಿನ್ವಾರಿ ಅವರು ಪಾಕಿಸ್ತಾನ-ಅಫ್ಘಾನಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರವಾಗಿರುವುದನ್ನು ಖಾತರಿಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದರೂ ಕಾಬೂಲ್‌ನಲ್ಲಿ ಟೇಕ್ ಆಫ್ ಆಗಲಿವೆ. ಆದರೆ ಶ್ರೀಲಂಕಾದಲ್ಲಿ 10 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ.

ಶುಕ್ರವಾರ (ಆಗಸ್ಟ್ 20) ಶ್ರೀಲಂಕಾದಲ್ಲಿ 3,793 ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಒಂದೇ ದಿನದಲ್ಲಿ ಲಂಕಾದಲ್ಲಿ ದಾಖಲಾದ ದೊಡ್ಡ ಸಂಖ್ಯೆಯ ಕೋವಿಡ್ ಪ್ರಕರಣಗಳಿವು. ಅಲ್ಲದೆ ಒಂದೇ ದಿನ 187 ಜನ ಸಾವನ್ನಪ್ಪಿದ್ದರು. ಪಾಕಿಸ್ತಾನ - ಅಫ್ಘಾನಿಸ್ತಾನ ಏರಡೂ ತಂಡಗಳ ಮೂರು ಏಕದಿನ ಸರಣಿ ಹಂಬನ್‌ತೋಟಾದಲ್ಲಿ ನಡೆಯುವುದರಲ್ಲಿತ್ತು. ಆದರೆ ಇನ್ನು ಅಫ್ಘಾನ್‌ ತಂಡ ಪಾಕ್‌ಗೆ ಪ್ರಯಾಣಿಸಲಿದೆ.

ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತು ಪಂತ್ ನಿರ್ಮಿಸಲಿರುವ ದಾಖಲೆಗಳುಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಕೊಹ್ಲಿ ಮತ್ತು ಪಂತ್ ನಿರ್ಮಿಸಲಿರುವ ದಾಖಲೆಗಳು

ಮೂರನೇ ಟೆಸ್ಟ್ ಫಿಟ್ ಆಗಿರೋ ಶಾರ್ಧೂಲ್ ತಾಕೂರ್ | Oneindia Kannada

ಸಪ್ಟೆಂಬರ್‌ 3ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡ ಇನ್ನೂ ತಾಣಗಳನ್ನು ಘೋಷಿಸಿಲ್ಲ. ಭಾನುವಾರ (ಆಗಸ್ಟ್ 22) ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಅಝೀಝುಲ್ಲ ಫಝಿಲ್ ನೂತನ ಅಧ್ಯಕ್ಷರಾಗಿ ಮರು ಆಯ್ಕೆ ಆಗಿದ್ದಾರೆ. ಹೀಗಾಗಿ ತಾಣಗಳು ಶೀಘ್ರ ಘೋಷಣೆಯಾಗುವ ನಿರೀಕ್ಷೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 24, 2021, 8:46 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X