ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

7 ಎಸೆತಗಳಿಗೆ ಸತತ 7 ಸಿಕ್ಸ್‌ ಚಚ್ಚಿದ ನಬಿ, ಝದ್ರನ್: ವೈರಲ್ ವಿಡಿಯೋ

Afghanistan’s Nabi, Zadran shatter records, tear Zimbabwe apart

ಧಾಕಾ, ಸೆಪ್ಟೆಂಬರ್ 15: ಧಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 14) ನಡೆದ ಜಿಂಬಾಬ್ವೆ-ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಣ ತ್ರಿಕೋನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೊಹಮ್ಮದ್ ನಬಿ ಮತ್ತು ನಜೀಬುಲ್ಲ ಝದ್ರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಬಾಂಗ್ಲಾದೇಶ ಮಣಿಸಿ ಏಳನೇ ಬಾರಿಗೆ 'ಯು-19 ಏಷ್ಯಾ ಕಪ್' ಎತ್ತಿದ ಭಾರತಬಾಂಗ್ಲಾದೇಶ ಮಣಿಸಿ ಏಳನೇ ಬಾರಿಗೆ 'ಯು-19 ಏಷ್ಯಾ ಕಪ್' ಎತ್ತಿದ ಭಾರತ

ಅಫ್ಘಾನಿಸ್ತಾನ ಇನ್ನಿಂಗ್ಸ್‌ನಲ್ಲಿ ನಬಿ ಮತ್ತು ಝದ್ರನ್ 17 ಮತ್ತು 18ನೇ ಓವರ್‌ ನಡುವೆ 7 ಎಸೆತಗಳಿಗೆ 7 ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಇಬ್ಬರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ ತಂಡ ಈ ಪಂದ್ಯವನ್ನು 28 ರನ್‌ಗಳಿಂದ ಗೆದ್ದುಕೊಂಡಿತು.

ನಿವೃತ್ತಿ ಯೂ ಟರ್ನ್ ಬಳಿಕ, ಹೈದರಾಬಾದ್ ತಂಡಕ್ಕೆ ರಾಯುಡು ನಾಯಕನಿವೃತ್ತಿ ಯೂ ಟರ್ನ್ ಬಳಿಕ, ಹೈದರಾಬಾದ್ ತಂಡಕ್ಕೆ ರಾಯುಡು ನಾಯಕ

ಈ ತ್ರಿಕೋನ ಸರಣಿಯ 7 ಪಂದ್ಯಗಳಲ್ಲಿ 1ರಲ್ಲಿ ಬಾಂಗ್ಲಾದೇಶ, 1ರಲ್ಲಿ ಅಫ್ಘಾನಿಸ್ತಾನ ತಂಡ ಜಯ ಸಾಧಿಸಿವೆ.

17.3ನೇ ಓವರ್‌ನಿಂದ ಸಿಕ್ಸ್ ಶುರು

17.3ನೇ ಓವರ್‌ನಿಂದ ಸಿಕ್ಸ್ ಶುರು

ತೆಂದೈ ಚತಾರಾ ಅವರ 18ನೇ ಓವರ್‌ನ ಮೊದಲೆರಡು ಎಸೆತಗಳಿಗೆ ಸಿಂಗಲ್ ರನ್ ಗಳಿಸಿದ ನಬಿ, ಝದ್ರನ್ ಜೋಡಿ, ಅನಂತರ 17.3ನೇ ಓವರ್‌ನಿಂದ ಸಿಕ್ಸ್ ಬಾರಿಸಲು ಶುರು ಮಾಡಿತು. ಸೆವೆನ್ ಸಿಕ್ಸ್‌ಗೆ ಚಾಲನೆ ಲಭಿಸಿದ್ದು ನಭಿ ಅವರಿಂದ. 17.6 ಓವರ್‌ನಲ್ಲಿ ನಬಿ ಔಟಾಗುವಾಗ ಸತತ 3 ಸಿಕ್ಸ್‌ಗಳು ಸಿಡಿದಿದ್ದವು.

ಝದ್ರನ್ ಬ್ಯಾಟಿಂಗ್

ಝದ್ರನ್ ಬ್ಯಾಟಿಂಗ್

ಅನಂತರ ಸ್ಟ್ರೈಕ್‌ಗೆ ಬಂದ ಝದ್ರನ್ 19ನೇ ಓವರ್‌ನಲ್ಲಿ ಅಂದರೆ 18.1, 18.2, 18.3, 18.4ನೇ ಓವರ್‌ನಲ್ಲಿ ಸಿಕ್ಸ್ ಬಾರಿಸಿದರು. ಹೀಗಾಗಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ 20 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 197 ಉತ್ತಮ ರನ್ ಮಾಡಿತು. ಇದರಲ್ಲಿ ಆರಂಭಿಕ ಬ್ಯಾಟ್ಸ್ಮನ್ ರಹಮನುಲ್ಲ ಗುರ್ಬಾನ್ ಅವರ 43 ರನ್‌ ಕೂಡ ಗಣನೀಯವಾಗಿತ್ತು.

69 ರನ್‌ ಕೊಡುಗೆ

ಒಟ್ಟಿನಲ್ಲಿ ಈ ಪಂದ್ಯದಲ್ಲಿ ಆಲ್ ರೌಂಡರ್ ಮೊಹಮ್ಮದ್ ನಬಿ 4 ಸಿಕ್ಸ್ ಸಹಿತ 18 ಎಸೆತಗಳಿಗೆ 38 ರನ್ ಕೊಡುಗೆಯಿತ್ತರೆ, ನಜೀಬುಲ್ಲ ಝದ್ರನ್ 5 ಬೌಂಡರಿ, 6 ಸಿಕ್ಸ್ ಸಹಿತ 30 ಎಸೆತಗಳಿಗೆ 69 ರನ್‌ಗಳ ಕೊಡುಗೆಯಿತ್ತರು.

ನಜೀಬುಲ್ಲ ಪಂದ್ಯಶ್ರೇಷ್ಠ

ನಜೀಬುಲ್ಲ ಪಂದ್ಯಶ್ರೇಷ್ಠ

ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ ರಗಿಸ್ ಚಕಬ್ವ 42, ಬ್ರೆಂಡನ್ ಟೇಲರ್ 27, ರ್ಯಾನ್ ಬುರ್ಲ್ 25 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 169 ರನ್ ಮಾಡಿತು. ಅಫ್ಘಾನ್‌ನ ನಜೀಬುಲ್ಲ ಝದ್ರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Sunday, September 15, 2019, 15:58 [IST]
Other articles published on Sep 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X