ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್‌ 19 ವಿಶ್ವಕಪ್: ಲಂಕಾವನ್ನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅಫ್ಘಾನಿಸ್ತಾನ

Afghanistan under-19

ತಾಲಿಬಾನ್‌ನಿಂದ ನಲುಗಿರುವ ಅಫ್ಘಾನಿಸ್ತಾನ ತನ್ನ ಕ್ರಿಕೆಟ್‌ನ ಇತಿಹಾಸದಲ್ಲೇ ಹೊಸ ಮೈಲುಗಲ್ಲನ್ನ ತಲುಪಿದೆ. ಅಫ್ಘಾನಿಸ್ತಾನ ಅಂಡರ್ -19 ತಂಡವು ವಿಶ್ವಕಪ್‌ನ ಸೆಮಿಫೈನಲ್ ತಲುಪುವ ಮೂಲಕ ದಾಖಲೆ ಬರೆದಿದೆ.

ಯಾವುದೇ ವಯಸ್ಸಿನ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್ ಹಂತದಲ್ಲಿ ಸೆಮಿಫೈನಲ್ ತಲುಪಿರುವುದು ಇದೇ ಮೊದಲ ಬಾರಿ. ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನ 4 ರನ್‌ಗಳಿಂದ ಮಣಿಸಿದ ಅಫ್ಘಾನಿಸ್ತಾನ ಸೆಮೀಸ್‌ ಪ್ರವೇಶಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಅಫ್ಘಾನಿಸ್ತಾನ ಅಂಡರ್ -19 ತಂಡ 47.1 ಓವರ್‌ಗಳಲ್ಲಿ ಕೇವಲ 134 ರನ್‌ಗಳಿಗೆ ಸರ್ವಪತನಗೊಂಡಿತು. ಆರಂಭಿಕರಿಬ್ಬರನ್ನ ಬಹುಬೇಗ ಕಳೆದುಕೊಂಡ ಅಫ್ಘಾನಿಸ್ತಾಕ್ಕೆ ಅಲ್ಲಾ ನೂರ್ 25, ಅಬ್ದುಲ್ ಹದಿ 37, ನೂರ್ ಅಹ್ಮದ್ 30 ರನ್‌ಗಳ ಕೊಡುಗೆಯಿಂದ ತಂಡದ ಸ್ಕೋರ್ ನೂರರ ಗಡಿ ದಾಟಿದ ಅಂತಿಮವಾಗಿ 134ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಶ್ರೀಲಂಕಾ ಅಂಡರ್-19 ತಂಡವು ಅಫ್ಘಾನ್ ದಾಳಿಗೆ ನಲುಗಿತು. ಕೆಳಕ್ರಮಾಂಕದಲ್ಲಿ ನಾಯಕ ದುನಿತ್ ವೆಲ್ಲಂಗೆ 34, ರವೀನ್ ಡಿ ಸಿಲ್ವ 21 ರನ್‌ಗಳಿಸಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ತಂಡಕ್ಕೆ ಆಧಾರವಾಗಲಿಲ್ಲ. ಪರಿಣಾಮ ಶ್ರೀಲಂಕಾ 46 ಓವರ್‌ಗಳಲ್ಲಿಯೇ 130 ರನ್‌ಗಳಿಗೆ ಆಲೌಟ್‌ ಆಗಿದೆ. 4 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ.

ಈ ಬೃಹತ್ ಗೆಲುವಿನ ಬಳಿಕ ಅಫ್ಘಾನಿಸ್ತಾನ ಯುವ ತಂಡವು ಕುಣಿದು ಕುಪ್ಪಳಿಸಿತು. ಅಫ್ಘಾನಿಸ್ತಾನ ಸಾಂಪ್ರದಾಯಿಕ ನೃತ್ಯ 'ಅಟ್ಟನ್' ಅನ್ನು ಪ್ರದರ್ಶಿಸಿದವು. ಅಟ್ಟನ್ ಅಫ್ಘಾನಿಸ್ತಾನದ ಅತ್ಯಂತ ಹಳೆಯ ಸಾಂಪ್ರದಾಯಿಕ ನೃತ್ಯವಾಗಿದೆ ಮತ್ತು ಅಫ್ಘಾನಿಸ್ತಾನ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

ಅಫ್ಘಾನಿಸ್ತಾನವು ಡಿ ಗುಂಪಿನಿಂದ ಪಾಕಿಸ್ತಾನದ ನಂತರ 2 ನೇ ಸ್ಥಾನ ಗಳಿಸಿತು . ಈಗ ಫೆಬ್ರವರಿ 1 ರಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಇಂಗ್ಲೆಂಡ್ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

Story first published: Friday, January 28, 2022, 22:55 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X