ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿಯ ನಿಜವಾದ ವಯಸ್ಸು ಬಹಿರಂಗ

 Afridi finally reveals his real age

ಬೆಂಗಳೂರು, ಮೇ 02: ಪಾಕಿಸ್ತಾನದ ಮಾಜಿ ನಾಯಕ ಶಹೀದ್ ಅಫ್ರಿದಿಗೆ ವಯಸ್ಸೇ ಆಗುವುದಿಲ್ಲ. ಬಹುಶಃ ಫೆಬ್ರವರಿ 29ರಂದು ಜನಿಸಿರಬೇಕು. ಹೀಗಾಗಿ, ನಾಲ್ಕು ವರ್ಷಗಳಿಗೊಮ್ಮೆ ಬರ್ಥ್ ಡೇ ಆಚರಿಸುತ್ತಾರೆ ಎಂಬ ಮಾತುಗಳು ಹಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕೇಳಿ ಬಂದಿರುತ್ತದೆ.

ಅಫ್ರಿದಿ ಅವರು 1980ರ ಮಾರ್ಚ್ 01 ರಂದು ಜನಿಸಿದ್ದು ಎಂದು ವಿಕಿಪೀಡಿಯಾ ಕೂಡಾ ಹೇಳುತ್ತಿದೆ. ಆದರೆ, ನಿಜವಾಗಿ ಅಫ್ರಿದಿ ಹುಟ್ಟಿದ್ದು, 1980ರಲ್ಲಿಲ್ಲ, 1975ರಲ್ಲಿ ಎಂದು ಸ್ವತಃ ಅಫ್ರಿದಿ ಅವರೆ ತಮ್ಮ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಸಿಕ್ಸರ್ ಕಿಂಗ್ ಅಫ್ರಿದಿಗೆ ಬೂಮ್ ಬೂಮ್ ಹೆಸರು ಕೊಟ್ಟಿದ್ದು ಯಾರು? ಸಿಕ್ಸರ್ ಕಿಂಗ್ ಅಫ್ರಿದಿಗೆ ಬೂಮ್ ಬೂಮ್ ಹೆಸರು ಕೊಟ್ಟಿದ್ದು ಯಾರು?

ಹೀಗಾಗಿ, 1996ರಲ್ಲಿ 37 ಎಸೆತಗಳಲ್ಲಿ ಶ್ರೀಲಂಕಾದ ವಿರುದ್ಧ ನೈರೋಬಿಯಲ್ಲಿ 100ರನ್ ಸಿಡಿಸಿದಾಗ ಅಫ್ರಿದಿಗೆ 16 ವರ್ಷ ವಯಸ್ಸು.

'ನನಗೆ ಆಗ 19 ವರ್ಷ ವಯಸ್ಸಾಗಿತ್ತು. 16 ಎಂದು ಎಲ್ಲೆಡೆ ಬರೆಯಲಾಗಿತ್ತು. 1975ರಲ್ಲಿ ನಾನು ಜನಿಸಿದ್ದು, ಮಂಡಳಿಯಿಂದ ಆದ ತಪ್ಪಿನಿಂದ ವಯಸ್ಸು ಕಡಿಮೆಯಾಯಿತು ಎಂದು ತಮ್ಮ ಜೀವನ ಚರಿತ್ರೆ ಪುಸ್ತಕ 'ಗೇಮ್ ಚೇಂಜರ್' ನಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಅಫ್ರಿದಿ ಬರೆದುಕೊಂಡಿರುವುದು ತಪ್ಪಾಗಲಿದೆ. 1975ರಲ್ಲಿ ಹುಟ್ಟಿದ್ದು ನಿಜವಾದರೆ. 1996ರಲ್ಲಿ ಅವರ ವಯಸ್ಸು 21 ಆಗಿರಬೇಕಾಗುತ್ತದೆ. ಈ ಬಗ್ಗೆ ಯಾರು ಸ್ಪಷ್ಟನೆ ನೀಡುತ್ತಾರೋ ಗೊತ್ತಿಲ್ಲ. 27 ಟೆಸ್ಟ್ ಹಾಗೂ 398 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 99 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಬೂಮ್ ಬೂಮ್ ಆಫ್ರಿದಿಗೆ ಬೂಮರಾಂಗಾದ 'ಕಾಶ್ಮೀರ' ಟ್ವೀಟ್ ಬೂಮ್ ಬೂಮ್ ಆಫ್ರಿದಿಗೆ ಬೂಮರಾಂಗಾದ 'ಕಾಶ್ಮೀರ' ಟ್ವೀಟ್

2016ರ ವಿಶ್ವಟಿ20 ನಂತರ ಮಾಜಿ ನಾಯಕ ಅಫ್ರಿದಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು.

ಅಫ್ರಿದಿ ತಮ್ಮ ಪುಸ್ತಕದಲ್ಲಿ ಮಾಜಿ ವೇಗಿ ವಖಾರ್ ಯೂನಿಸ್ ರನ್ನು ಟೀಕಿಸಿದ್ದಾರೆ. 2016ರ ವಿಶ್ವಟಿ20 ಸಂದರ್ಭದಲ್ಲಿ ವಖಾರ್ ಕೋಚ್ ಆಗಿದ್ದರು.

ನನಗೂ ವಖಾರ್ ಗೂ ಎಂದಿಗೂ ಸಂಬಂಧ ಸರಿಹೊಂದಲೇ ಇಲ್ಲ, ನಾಯಕತ್ವ ವಿಷಯ, ಕೋಚ್ ಜತೆ ವೈಮನಸ್ಯ ತಂಡದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ.(ಪಿಟಿಐ)

Story first published: Thursday, May 2, 2019, 21:44 [IST]
Other articles published on May 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X