ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

500ನೇ ಏಕದಿನ ಗೆಲುವಿನ ಬಳಿಕ ಮತ್ತೊಂದು ದಾಖಲೆಗೆ ಕೊಹ್ಲಿ ಬಳಗ ಸಜ್ಜು!

After 500th ODI win, Virat Kohli and Co on the cusp of another big milestone

ರಾಂಚಿ, ಮಾರ್ಚ್ 7: ಒಂದು ವರ್ಷದಿಂದೀಚೆಗೆ ಕೊಂಚ ಆಟದ ಪ್ರಖರತೆ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಕ್ರಿಕೆಟ್ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಏಕದಿನ ಕ್ರಿಕೆಟ್‌ಗೆ ಬಂದರಂತೂ ಕಾಂಗರೂ ಪಡೆಯ ವಿರುದ್ಧ ಆಡಿದ ಅರ್ಧದಷ್ಟೂ ಪಂದ್ಯಗಳನ್ನು ಗೆದ್ದ ತಂಡಗಳ ದಾಖಲೆಯಿಲ್ಲ.

ಡ್ರೈವರ್ ಆಗಿ ಜೊತೆ ಆಟಗಾರರನ್ನು ಹಮ್ಮರ್ ರೈಡ್‌ಗೆ ಕರೆದೊಯ್ದ ಧೋನಿ!ಡ್ರೈವರ್ ಆಗಿ ಜೊತೆ ಆಟಗಾರರನ್ನು ಹಮ್ಮರ್ ರೈಡ್‌ಗೆ ಕರೆದೊಯ್ದ ಧೋನಿ!

ಏಕದಿನ ಕ್ರಿಕೆಟ್‌ ದಾಖಲೆಗಳ ಪ್ರಕಾರ ಆಸ್ಟ್ರೇಲಿಯಾ ವಿರುದ್ಧ ಭಾರತ ಕೂಡ ಸಣ್ಣದೆ. ಆದರೆ ರಾಂಚಿಯಲ್ಲಿ ನಡೆಯಲಿರುವ ಇತ್ತಂಡಗಳ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದರೆ, ವಿಶ್ವ ಮಟ್ಟದ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗೆ ಕಾರಣವಾಗಲಿದೆ.

ಭಾರತ vs ಆಸೀಸ್: 3ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ XI ತಂಡಭಾರತ vs ಆಸೀಸ್: 3ನೇ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ XI ತಂಡ

ನಾಗ್ಪುರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ವಿಜಯ್ ಶಂಕರ್ ಅದ್ಭುತ ಆಟದಿಂದ ಭಾರತ 8 ರನ್ ರೋಚಕ ಜಯ ಗಳಿಸಿತ್ತು. ಈಗಾಗಲೇ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿರುವ ಭಾರತ, ಆ್ಯರನ್ ಫಿಂಚ್ ಬಳಗವನ್ನು ರಾಂಚಿಯಲ್ಲೂ ಸೋಲಿಸಿದರೆ ವಿಶ್ವದ ಗಮನ ಸೆಳೆಯಲಿದೆ.

ಮತ್ತೊಂದು ಮೈಲಿಗಲ್ಲು

ಮತ್ತೊಂದು ಮೈಲಿಗಲ್ಲು

ಆಸ್ಟ್ರೇಲಿಯಾ ವಿರುದ್ಧ 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಗೆದ್ದಿರುವ ವಿಶ್ವದ ತಂಡಗಳಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಏಕದಿನ ಪಂದ್ಯ ಗೆದ್ದರೆ ಭಾರತ ಮೂರನೇ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದೆ.

ಭಾರತಕ್ಕೆ ಮೂರನೇ ಸ್ಥಾನ

ಭಾರತಕ್ಕೆ ಮೂರನೇ ಸ್ಥಾನ

ಆಸೀಸ್ ವಿರುದ್ಧ ಏಕದಿನ ಪಂದ್ಯಗಳ ಗೆಲುವಿನ ಆಧಾರದಲ್ಲಿ ಭಾರತ ಈಗಾಗಲೇ ಮೂರನೇ ಸ್ಥಾನದಲ್ಲಿದೆ. ಆದರೆ ಇನ್ನೊಂದು ಪಂದ್ಯ ಗೆದ್ದರೆ ಆಸೀಸ್ ಎದುರು ಭಾರತ ಭರ್ತಿ 50 ಪಂದ್ಯಗಳನ್ನು ಗೆದ್ದಂತಾಗುತ್ತದೆ. ಈಗ ಭಾರತ ಆಸೀಸ್ ವಿರುದ್ಧ ಆಡಿರುವ 133 ಏಕದಿನ ಪಂದ್ಯಗಳಲ್ಲಿ 49ರಲ್ಲಿ ಗೆದ್ದು 74 ಪಂದ್ಯಗಳನ್ನು ಸೋತಿದೆ.

ಇಂಗ್ಲೆಂಡ್ ಮೊದಲಿಗ

ಇಂಗ್ಲೆಂಡ್ ಮೊದಲಿಗ

ಇದೇ ಯಾದಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಆಡಿರುವ 147 ಪಂದ್ಯಗಳಲ್ಲಿ 61ರಲ್ಲಿ ಜಯ ಕಂಡಿದ್ದರೆ, 81 ಪಂದ್ಯಗಳಲ್ಲಿ ಕಾಂಗರೂ ಪಡೆಗೆ ಶರಣಾಗಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ 139 ಪಂದ್ಯಗಳಲ್ಲಿ 60 ಗೆಲುವು, 73 ಸೋಲುಗಳನ್ನು ಕಂಡಿದೆ.

ವಿನ್ ರೇಟ್‌ನಲ್ಲಿ ಆಫ್ರಿಕಾ ಮುಂದು

ವಿನ್ ರೇಟ್‌ನಲ್ಲಿ ಆಫ್ರಿಕಾ ಮುಂದು

ಆಸ್ಟ್ರೇಲಿಯಾ ವಿರುದ್ಧ ಆಡಿದ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ಹೆಗ್ಗಳಿಕೆ ದಕ್ಷಿಣ ಆಫ್ರಿಕಾ ತಂಡದ್ದು. ಆಫ್ರಿಕಾ ತಂಡ ಆಸೀಸ್ ವಿರುದ್ಧ ಆಡಿದ 99 ಪಂದ್ಯಗಳಲ್ಲಿ 47 ಗೆಲುವು ಮತ್ತು 48 ಸೋಲುಗಳನ್ನು ಕಂಡಿದೆ. ಹೀಗಾಗಿ 47.47 ವಿನ್ ರೇಟ್‌ ಹೊಂದಿರುವ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರು ಕೊಂಚ ಬಲಿಷ್ಠ ತಂಡ ಅನ್ನೋದನ್ನು ಅಂಕಿ ಅಂಶಗಳು ಹೇಳುತ್ತವೆ!

Story first published: Thursday, March 7, 2019, 17:03 [IST]
Other articles published on Mar 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X