ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೀಟೂ ಅಭಿಯಾನ: ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಲಸಿತ್ ಮಾಲಿಂಗ್ ವಿರುದ್ದ ಕೇಳಿ ಬಂತು ಲೈಂಗಿಕ ದೌರ್ಜನ್ಯ ಆರೋಪ | Oneindia Kannada
After Arjuna Ranatunga, Sri Lankas Malinga accused of sexual assault

ಕೊಲಂಬೋ, ಅಕ್ಟೋಬರ್ 11: ಶ್ರೀಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಭಾರತದ ಗಗನ ಸಖಿಯೊಬ್ಬರು ಆರೋಪಿಸಿದ್ದ ನಂತರ ಈಗ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಅವರ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಕ್ಕೆ ಕೊಹ್ಲಿ ನಾಯಕ, ಪಂತ್ ಇನ್ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಕ್ಕೆ ಕೊಹ್ಲಿ ನಾಯಕ, ಪಂತ್ ಇನ್

ಶ್ರೀಲಂಕಾ ತಂಡದ ಏಕದಿನ ಕ್ರಿಕೆಟ್ ಮತ್ತು ಟಿ20ಯ ಮಾಜಿ ನಾಯಕ, ವೇಗಿ ಲಸಿತ್ ಮಾಲಿಂಗ ಅವರು ಮಹಿಳೆಯೊಬ್ಬರ ಮೇಲೆ ಮುಂಬೈಯ ಹೋಟೆಲ್ ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಆರೋಪಿಸಿದ್ದಾರೆ. #ಮೀಟೂ ಅಭಿಯಾನ ತೀವ್ರಗೊಳ್ಳುತ್ತಲೇ ಮಾಲಿಂಗ ಅವರಿಗೂ ಆರೋಪದ ಬಿಸಿ ತಾಗಿದೆ.

ಪೃಥ್ವಿ ಶಾ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ: ನಾಯಕ ವಿರಾಟ್ ಕೊಹ್ಲಿಪೃಥ್ವಿ ಶಾ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ: ನಾಯಕ ವಿರಾಟ್ ಕೊಹ್ಲಿ

ಆರೋಪ ಮಾಡುತ್ತಿರುವ ಚಿನ್ಮಯಿ ಹೇಳುವ ಪ್ರಕಾರ, ಲಸಿಂತ್ ಮಾಲಿಂಗ ಅವರು ಐಪಿಎಲ್ ಸೀಸನ್ ವೇಳೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಐಪಿಎಲ್ ನ ಎಲ್ಲಾ 10 ಸೀಸನ್ ಗಳಲ್ಲೂ ಮುಂಬೈ ಇಂಡಿಯನ್ಸ್ ಪರ ಆಡಿರುವ ಲಸಿತ್, ಒಟ್ಟು 110 ಪಂದ್ಯಗಳಲ್ಲಿ 154 ವಿಕೆಟ್ ಸಾಧನೆ ಹೊಂದಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದರು

'ಕೆಲ ವರ್ಷಗಳ ಹಿಂದೆ ಮುಂಬೈ ಹೋಟೆಲ್ ನಲ್ಲಿ ತಂಗಿದ್ದ ನಾನು ಗೆಳತಿಗಾಗಿ ಕಾಯುತ್ತಿದ್ದಾಗ ಬಂದ ಮಾಲಿಂಗ ನಿನ್ನ ಫ್ರೆಂಡ್ ನನ್ನ ರೂಮಿನಲ್ಲಿದ್ದಾರೆ ಅಂತ ಎಳೆದುಕೊಂಡು ಹೋದರು. ನಾನು ಹೋಗಿ ನೋಡಿದಾಗ ಅಲ್ಲಿ ನನ್ನ ಸ್ನೇಹಿತೆ ಇರಲಿಲ್ಲ. ಆವೇಳೆ ಮಾಲಿಂಗ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಆಗ ಹೋಟೆಲ್ ರೂಮ್ ಬಾಯ್ ಬಾಗಿಲು ತಟ್ಟಿದ ಕಾರಣ ನಾನು ಮಾಲಿಂಗ ಕೈಯಿಂದ ತಪ್ಪಿಸಿಕೊಂಡೆ' ಎಂದು ಘಟನೆಯನ್ನು ವಿವರಿಸಿದ್ದ ಅನಾಮಧೇಯೆಯೊಬ್ಬಳ ಬರಹವನ್ನು ಚಿನ್ಮಯಿ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಯಾರು ಮಹಿಳೆಯೋ ಗೊತ್ತಿಲ್ಲ

ಕ್ರಿಕೆಟಿಗ ಲಸಿತ್ ಮಾಲಿಂಗ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಆಕೆ ಯಾರೋ ಗೊತ್ತಿಲ್ಲ. ಆಕೆ ನ್ಯಾಯ ದೊರಕಬೇಕಿದೆ. ಆದರೆ ಈ ಆರೋಪದ ಬಗ್ಗೆ ಕಾಲವೇ ಉತ್ತರಿಸಬೇಕಿದೆ ಎಂದು ಫರುಯಾಜಿ ರಿಪ್ಲೈ ಟ್ವೀಟ್ ಮಾಡಿದ್ದಾರೆ.

ಇನ್ಯಾರು ಬಾಕಿ ?

ಈ ಮೊದಲು ಗೀತೆ ರಚನೆಕಾರ ವೈರಮುತ್ತು ಅವರನ್ನು ದೂರಿದ್ದಾಯ್ತು, ಈಗ ಮಾಲಿಂಗ, ಮುಂದೆ ಇನ್ಯಾರನ್ನು ಆರೋಪಿಸುತ್ತೀರಿ ಚಿನ್ಮಯಿ? ಎಂದು ಟ್ವೀಟಿಗರೊಬ್ಬರು ಪ್ರಶ್ನಿಸಿದ್ದಾರೆ. ಚಿನ್ಮಯಿ ಅವರ ಟ್ವಿಟರ್ ಖಾತೆಯಲ್ಲಂತೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅನೇಕ ಪೋಸ್ಟ್ ಗಳು ಕಾಣಿಸುತ್ತಿವೆ.

ಮೀಟೂ ಬಲೆಗೆ ಬಿದ್ದರಾ?

ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಅವರೂ #ಮೀಟೂ ಬಲೆಗೆ ಸಿಕ್ಕಿಹಾಕಿಕೊಂಡು ಬಿಟ್ಟರಾ? ಎಂದು ಕಾರ್ತಿಕ್ ರಾಜ್ ಟ್ವೀಟ್ ಮಾಡಿದ್ದಾರೆ. ಈ ವಾರದಿಂದೀಚೆಗೆ ಲೈಂಗಿಕ ಕಿರುಕುಳ ವಿರೋಧಿ #Metoo ಅಭಿಯಾನ ಜೋರಾಗಿದ್ದು, ಕ್ರೀಡಾರಂಗದಲ್ಲೂ ಆರೋಪ ಕೇಳಿ ಬರತೊಡಗಿದೆ.

ಏನಿದು ಮಾಲಿಂಗಾ?

ಐಪಿಎಲ್ ವೇಳೆ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಅವರು ಲೈಂಗಿಕ ದೌರ್ಜನ್ಯ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಏನಿದು ಮಾಲಿಂಗಾ? ಎಂದು ಮನೀಶ್ ಝಾ ಪ್ರಶ್ನಿಸಿದ್ದಾರೆ.

ಕ್ರಿಕೆಟ್ ಗೂ ತಟ್ಟಿದ ಬಿಸಿ

ಮೀಟೂ ಅಭಿಯಾನ ಜೋರಾಗಿದ್ದರಿಂದ ಚಿತ್ರರಂಗ, ರಾಜಕೀಯದ ವ್ಯಕ್ತಿಗಳ ಮೇಲೆ ಹಲವು ಆರೋಪ ಕೇಳಿ ಬಂದಿತ್ತು. ಇದೀಗ ಕ್ರಿಕೆಟ್ ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಹೇಜ್ಜಾಗಿ ಕೇಳಿ ಬರ ತೊಡಗಿದೆ. ಇದನ್ನೆ ಟ್ವೀಟಿಗರೊಬ್ಬರ ಟ್ವೀಟ್ ಹೇಳಿದೆ.

Story first published: Thursday, October 11, 2018, 19:15 [IST]
Other articles published on Oct 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X