ಶ್ರೀಲಂಕಾ vs ಭಾರತ ಫೈನಲ್ ಮ್ಯಾಚ್ ಫಿಕ್ಸ್: ಲಂಕಾ ಕ್ರೀಡಾ ಸಚಿವನ ಹೇಳಿಕೆಯಲ್ಲಿ ಬದಲಾವಣೆ!

2011ರ ಏಕದಿನ ವಿಶ್ವಕಪ್‌ಅನ್ನು ಭಾರತಕ್ಕೆ ಶ್ರೀಲಂಕಾ ಮಾರಾಟ ಮಾಡಿತ್ತು ಎಂದು ಹೇಳಿ ಲಂಕಾ ಕ್ರಿಕೆಟ್ ತಂಡದ ವಿರುದ್ಧ ಅಂದಿನ ಕ್ರೀಡಾ ಸಚಿವರೇ ಗಂಭೀರ ಆರೋಪವನ್ನು ಮಾಡಿದ್ದರು. ಈ ವಿಚಾರವಾಗಿ ಶ್ರೀಲಂಕಾ ಸರ್ಕಾರ ತನಿಖೆಯನ್ನು ನಡೆಸಲು ಆದೇಶಿಸಿದೆ. ಆದರೆ ಈ ಮಧ್ಯೆ ತನ್ನ ಹೇಳಿಕೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ.

ಇತ್ತೀಚೆಗೆ ಶ್ರೀಲಂಕಾದ ಖಾಸಗೀ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನೇರವಾಗಿ ಶ್ರೀಲಂಕಾ ತಂಡ ಈ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಂದಾನಂದ ಅಲುತ್‌ಗಮಗೆ ಹೇಳಿದ್ದರು. ಆದರೆ ಈಗ 'ಅಂದಿನ ಪಂದ್ಯದಲ್ಲಿ ಫಿಕ್ಸಿಂಗ್ಸ್ ನಡೆದಿರಬಹುದು ಎಂಬ ಅನುಮಾನ ತನ್ನನ್ನು ಕಾಡುತ್ತಿದೆ' ಎಂದು ಮಾತನ್ನು ಬದಲಿಸಿಕೊಂಡಿದ್ದಾರೆ.

ಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ

ಶ್ರೀಲಂಕಾ ಸರ್ಕಾರ ಈ ಪ್ರಕರಣದ ಕುರಿತಾಗಿ ತನಿಖೆಯನ್ನು ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಆ ತಂಡ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಹಿಂದಾನಂದ ಫಿಕ್ಸಿಂಗ್ ನಡೆದಿದೆ ಎಂಬ ಅನುಮಾನವಿದೆ ಎಂದಿದ್ದಾರೆ.

ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಂದಾನಂದ ಅಲುತ್‌ಗಮಗೆ ಫಿಕ್ಸಿಂಗ್ ನಡೆದಿರಬಹುದಾದ ನನ್ನ ಅನುಮಾನದ ಕುರಿತಾಗಿ ತನಿಖೆಯನ್ನು ನಾನು ಬಯಸಿದ್ದೇನೆ. ಈ ಬಗ್ಗೆ 2011ರಲ್ಲಿ ಐಸಿಸಿಗೆ ನೀಡಿದ್ದ ದೂರಿನ ಪ್ರತಿಯನ್ನು ಕೂಡ ತನಿಖಾಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ.

ಭಾರತ ಮೊದಲ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರೋಚಕ ಹಾದಿ!

ಮಹಿಂದಾನಂದ ಮಾಡಿದ್ದ ಈ ಆರೋಪಕ್ಕೆ ಶ್ರೀಲಂಕಾದ ಅಂದಿನ ವಿಶ್ವಕಪ್ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಹಿರಿಯ ಆಟಗಾರ ಮಹೇಲ ಜಯವರ್ಧನೆ ಪ್ರತಿಕ್ರಿಯಿಸಿದ್ದರು. ಮಾಜಿ ಕ್ರೀಡಾ ಸಚಿವರ ಬಳಿ ಈ ಆರೋಪಕ್ಕೆ ಸಂಬಂಧಪಟ್ಟಂತೆ ಇರುವ ದಾಖಲೆಯನ್ನು ತೋರಿಸಲು ಮತ್ತು ಅದಕ್ಕೆ ಪೂರಕವಾದ ತನಿಖೆ ನಡೆಯಲಿ ಎಂದು ಅವರು ಆಗ್ರಹಿಸಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, June 25, 2020, 15:52 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X