ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೈಫಲ್ಯ ಸಮರ್ಥಿಸಿಕೊಂಡ ಎಂಎಸ್ ಧೋನಿ, ನಾನ್ಸೆನ್ಸ್ ಎಂದ ಪೀಟರ್ಸನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈ ನಾಯಕ ಎಂಎಸ್ ಧೋನಿ ನಡೆದುಕೊಂಡ ರೀತಿ ಬಗ್ಗೆ ಇನ್ನೂ ಚರ್ಚೆ ಮುಂದುವರೆದಿದೆ. ಮಾಜಿ ನಾಯಕ, ಹಾಲಿ ಸಂಸದ ಗೌತಮ್ ಗಂಭೀರ್ ನಂತರ ವೀರೇಂದ್ರ ಸೆಹ್ವಾಗ್, ಕೆವಿನ್ ಪೀಟರ್ಸನ್ ಕೂಡಾ ಧೋನಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಡುಪ್ಲೆಸಿಸ್ ಜೊತೆಗೆ ನಿಂತು ಚೆನ್ನೈಗೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯವಿದ್ದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ ಧೋನಿ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೆಲ್ಲಬಹುದಾಗಿದ್ದ ಪಂದ್ಯವನ್ನು ಹೀಗೂ ಕೈ ಚೆಲ್ಲಬಹುದು ಎಂದು ಧೋನಿ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

ನಂ.7 ಕ್ರಮಾಂಕದಲ್ಲಿ ಬಂದು ಧೋನಿ ಕಿಸಿದಿದ್ದೇನು?: ಗಂಭೀರ್ ಕಿಡಿ ನಂ.7 ಕ್ರಮಾಂಕದಲ್ಲಿ ಬಂದು ಧೋನಿ ಕಿಸಿದಿದ್ದೇನು?: ಗಂಭೀರ್ ಕಿಡಿ

ಪಂದ್ಯ ಗೆಲ್ಲುವ ಇರಾದೆ ಇರುವವರು ಯಾರಾದರೂ 7ನೇ ಕ್ರಮಾಂಕದಲ್ಲಿ ಆಡಲು ಬರುತ್ತಾರಾ? ಕೊನೆಯಲ್ಲಿ 3 ಸಿಕ್ಸರ್ ಸಿಡಿಸಿದ್ದು ವೈಯಕ್ತಿಕ ತೃಪ್ತಿ, ದಾಖಲೆಗಾಗಿ ಮಾತ್ರ. ಪಂದ್ಯ ಗೆಲ್ಲುವ ಉದ್ದೇಶ ಇದ್ದಿದ್ದರೆ ಒಂದೆರಡು ಓವರ್ ಮೊದಲೇ ಬ್ಯಾಟ್ ಬೀಸಬಹುದಾಗಿತ್ತು ಎಂದು ನೇರವಾಗಿ ಧೋನಿಗೆ ತಾಗುವಂತೆ ಗಂಭೀರ್ ಕುಟುಕಿದ್ದರು. ಈಗ ಕೆವಿನ್ ಸರದಿ.

ಬ್ಯಾಟಿಂಗ್ ಕ್ರಮಾಂಕ ಸಮರ್ಥನೆ

ಬ್ಯಾಟಿಂಗ್ ಕ್ರಮಾಂಕ ಸಮರ್ಥನೆ

ಪಂದ್ಯದ ನಂತರ ಮಾತನಾಡಿದ ಧೋನಿ, ಕ್ವಾರಂಟೈನ್ ಅವಧಿ ಸರಿ ಹೋಗಲಿಲ್ಲ, ನಾನು ಕೂಡಾ ಬಹುದಿನಗಳ ನಂತರ ಬ್ಯಾಟ್ ಮಾಡುತ್ತಿದ್ದೆ ಹೀಗಾಗಿ ಯುವಕರಿಗೆ ಮೇಲ್ಪಂಕ್ತಿಯಲ್ಲಿ ಆಡಲು ಅವಕಾಶ ನೀಡಿದೆ. ಅವರು ನನಗಿಂತ ಹೆಚ್ಚು ಲಯದಲ್ಲಿದ್ದರು ಎಂದು ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯನ್ನು ಧೋನಿ ಸಮರ್ಥಿಸಿಕೊಂಡಿದ್ದರು. ಆದರೆ, ಧೋನಿ ನೀಡಿದ ಸಮರ್ಥನೆಯನ್ನು ನಾನ್ಸೆನ್ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಚೆನ್ನೈ ನಾಯಕ ಧೋನಿ ಬೆನ್ನಿಗೆ ನಿಂತ ಕೋಚ್ ಸ್ಟೀಫನ್ ಫ್ಲೆಮಿಂಗ್

ನಾಯಕನಿಗೆ ಪಂದ್ಯ ಗೆಲ್ಲುವತ್ತ ದೃಷ್ಟಿ ಇರಬೇಕು

ನಾಯಕನಿಗೆ ಪಂದ್ಯ ಗೆಲ್ಲುವತ್ತ ದೃಷ್ಟಿ ಇರಬೇಕು

ನಾಯಕನಿಗೆ ಪಂದ್ಯ ಗೆಲ್ಲುವತ್ತ ದೃಷ್ಟಿ ಇರಬೇಕು, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ಗವಾಸ್ಕರ್ ಕೂಡಾ ಎಚ್ಚರಿಸಿದರು. ಡು ಪ್ಲೆಸಿಸ್ ಚೆನ್ನಾಗಿ ಆಡುತ್ತಿದ್ದರು, ಆದರೆ ಧೋನಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪಂದ್ಯ ಕೈ ಮೀರಿತ್ತು, 16 ರನ್ ಗಳಿಂದ ಪಂದ್ಯ ಸೋಲಬೇಕಾಯಿತು. ಗೆಲ್ಲುವ ಯತ್ನವನ್ನು ಸರಿಯಾಗಿ ಮಾಡದೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು ಎಷ್ಟು ಸರಿ ಎಂದು ಪೀಟರ್ಸನ್ ಅವರು ಸ್ಟಾರ್ ಸ್ಫೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದರು.

ಐಪಿಎಲ್ 2020: ಅಂಕ ಪಟ್ಟಿ, ಆರೆಂಜ್, ಪರ್ಪಲ್ ಟೋಪಿ ರೇಸ್ ಯಾರು ಮುಂದೆ?

ಕೊನೆ 4-5 ಓವರ್ ಒತ್ತಡವೇಕೆ?

ಕೊನೆ 4-5 ಓವರ್ ಒತ್ತಡವೇಕೆ?

ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಯುವ ಆಟಗಾರರಿಗೆ ಅವಕಾಶವನ್ನು ಒಪ್ಪಿಕೊಳ್ಳೋಣ ಆದರೆ, ಟಿ20ಯಲ್ಲಿ ಎಲ್ಲವೂ ತ್ವರಿತವಾಗಿ ಆಗಬೇಕಾಗುತ್ತದೆ. ಕೊನೆ ಓವರ್ ನಲ್ಲಿ 20ರನ್ ಗಳಿಕೆ ದೊಡ್ಡ ವಿಷಯವೇನಲ್ಲ, ಆದರೆ, ಕೊನೆ ತನಕ ರನ್ ಉಳಿಸಿಕೊಂಡು ಕೊನೆಯಲ್ಲಿ ಸಿಕ್ಸ್ ಎತ್ತಿ ಪಂದ್ಯ ಗೆಲ್ಲಿಸುವ ಮಾದರಿ ಯುವ ಆಟಗಾರರಿಗೆ ಸುಲಭ ವಿಧಾನವಂತೂ ಅಲ್ಲ, ಇದೇ ರೀತಿ ಸಣ್ಣ ಪುಟ್ಟ ತಪ್ಪುಗಳನ್ನು ನೋಡುತ್ತಿದ್ದಂತೆ ಐದಾರು ಪಂದ್ಯ ಕಳೆದುಕೊಂಡ ಚಾಂಪಿಯನ್ ತಂಡಗಳನ್ನು ನೋಡಿದ್ದೇನೆ, ಪ್ರಜ್ಞೆ ಇರೋರು ಯಾರು ತಂಡವನ್ನು ಸಂಕಷ್ಟಕ್ಕೆ ದೂಡಲ್ಲ ಎಂದು ಕೆವಿನ್ ಹೇಳಿದರು.

ಧೋನಿ ನಾಯಕತ್ವಕ್ಕೆ 4/10 ಕೊಟ್ಟ ಸೆಹ್ವಾಗ್

ಧೋನಿ ನಾಯಕತ್ವಕ್ಕೆ 4/10 ಕೊಟ್ಟ ಸೆಹ್ವಾಗ್

ಎಂಎಸ್ ಧೋನಿ ಅವರು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ತೋರಿದ ನಾಯಕತ್ವಕ್ಕೆ 4/10 ಅಂಕ ಕೊಡುತ್ತಿರುವುದಾಗಿ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಧೋನಿ ಆಡಿದ ಡಾಟ್ ಬಾಲ್ ಎಣಿಸಿದರೆ ಅವರು ಪಂದ್ಯ ಗೆಲ್ಲಲು ಯತ್ನಿಸಲೇ ಇಲ್ಲ ಎನ್ನಬಹುದು. ಗೆಲ್ಲುವ ಪ್ರಯತ್ನ ಎಂಬಂತೆ ಸಿಡಿಸಿದ ಮೂರು ಸಿಕ್ಸರ್ ಗಳಿಂದ ತಂಡಕ್ಕೆ ಯಾವುದೇ ಉಪಯೋಗವಾಗಲಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

Story first published: Tuesday, October 6, 2020, 15:48 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X