'735 ನಾಟೌಟ್' : ವಾರ್ನರ್ ಭೇಟಿ ಬಳಿಕ ಲಾರಾ ಹೀಗಂದಿದ್ದೇಕೆ?

ಕಳೆದ ವಾರವಷ್ಟೇ ಪಾಕಿಸ್ತಾನದ ವಿರುದ್ಧ ಭರ್ಜರಿ ತ್ರಿಶತಕ ದಾಖಲಿಸಿದ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಇನ್ನಿಂಗ್ಸ್‌ ಅಂತರದಿಂದ ಗೆಲ್ಲಲು ಕಾರಣರಾಗಿದ್ದರು. ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನು ಈ ಮೂಲಕ ವಾರ್ನರ್ ಮೆಟ್ಟಿ ನಿಂತರು. ಆದರೆ ಈ ಸಂದರ್ಭದಲ್ಲಿ ವಾರ್ನರ್‌ ಮುಂದಿದ್ದ ವಿಶ್ವದಾಖಲೆಯೊಂದನ್ನು ನಿರ್ಮಾಣ ಮಾಡುವ ಅವಕಾಶವನ್ನು ಕಳೆದುಕೊಂಡರು.

ಟೆಸ್ಟ್‌ನ ಇತಿಹಾಸದಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಲಾರಾ ಹೆಸರಿನಲ್ಲಿದೆ. ಲಾರಾ ಔಟಾಗದೆ 400 ರನ್‌ಗಳಿಸಿ ವಿಶ್ವದಾಖಲೆಯನ್ನು ಮಾಡಿದ್ದಾರೆ. ಈ ರನ್ನನ್ನು ಡೇವಿಡ್ ವಾರ್ನರ್ ಮೀರಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅಷ್ಟರಲ್ಲಿ ಆಸಿಸ್ ನಾಯಕ ಟಿಮ್ ಪೈನ್ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿದರು. ಇದು ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿತು.

ಇದಾದ ಬಳಿಕ ಈಗ ಡೇವಿಡ್ ವಾರ್ನರ್ ಅವರು ವೆಸ್ಟ್‌ಇಂಡೀಸ್‌ನ ಲೆಜೆಂಡ್ ಬ್ರ್ಯಾನ್ ಲಾರಾ ಅವರನ್ನು ಭೇಟಿಯಾಗಿದ್ದಾರೆ. ಸಾಕಷ್ಟು ಚರ್ಚೆಯನ್ನು ನಡೆಸಿದ್ದಾರೆ. ಮಾತ್ರವಲ್ಲ ಇನ್ನೊಂದು ಅವಕಾಶದಲ್ಲಿ ಲಾರಾ ದಾಖಲೆಯನ್ನು ಮುರಿಯುವುದಾಗಿ ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಾರಾ ಜೊತೆಗಿನ ಫೋಟೋ ಜೊತೆಗೆ ಹೀಗೆ ವಾರ್ನರ್ ಬರೆದುಕೊಂಡಿದ್ದಾರೆ.

ಇನ್ನು ಬ್ರ್ಯಾನ್ ಲಾರಾ ಕೂಡ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಲಾರಾ ಈ ಚಿತ್ರಕ್ಕೆ 735 not out ಎಂದು ಅಡಿ ಬರಹವನ್ನು ಕೊಟ್ಟಿದ್ದಾರೆ. ಲಾರಾ ದಾಖಲೆಯ ಅಜೇಯ 400 ಮತ್ತು ವಾರ್ನರ್ ಅವರ ಅಜೆಯ 335 ರನ್ ಸೇರಿಸಿ ವಿಶಿಷ್ಟವಾಗಿ ಕ್ಯಾಪ್ಶನ್ ಕೊಟ್ಟಿದ್ದಾರೆ ವೆಸ್ಟ್‌ಇಂಡೀಸ್ ಕ್ರಿಕೆಟ್ ದಂತಕತೆ.

ತನ್ನ ದಾಖಲೆ ಮುರಿಯುವ ಅವಕಾಶವನ್ನು ಡೇವಿಡ್ ವಾರ್ನರ್ ಕಳೆದು ಕೊಂಡ ಸಂದರ್ಭದಲ್ಲಿ ಲಾರಾ ಆಸ್ಟ್ರೇಲಿಯಾದಲ್ಲೇ ಇದ್ದರು. ತನ್ನ ದಾಖಲೆಯನ್ನು ವಾರ್ನರ್ ಮುರಿಯುತ್ತಾರೇ ಎಂದೇ ಭಾವಿಸಿದ್ದೆ. ಅವರನ್ನು ಅಭಿನಂದಿಸಲು ನಾನು ಸಿದ್ದನಾಗಿದ್ದೆ ಎಂದು ಹೇಳಿಕೆಯನ್ನು ನೀಡಿದ್ದರು. ಇದಾದ ಬಳಿಕ ಸ್ವತಃ ಡೇವಿಡ್ ವಾರ್ನರ್ ಅವರೇ ಲಾರಾ ಅವರನ್ನು ಬೇಟಿಯಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, December 4, 2019, 19:27 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X