ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದೂಡಿದ ಬೆನ್ನಲ್ಲೇ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರಕ್ಕೆ ಸಿದ್ಧತೆ

After IPL 2021 postponement, T20 World Cup set for UAE shift

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಸದ್ಯಕ್ಕೆ ರದ್ದಾಗಿದೆ. ಬೇರೆ ವೇಳಾಪಟ್ಟಿಯಂತೆ ಇನ್ನುಳಿದ ಪಂದ್ಯಗಳನ್ನು ನಡೆಸಲು ಸಾಧ್ಯವೇ ಎಂದು ಯೋಚಿಸಿ ತಿಳಿಸುತ್ತೇವೆ. ಸದ್ಯಕ್ಕಂತೂ ಈ ಬಾರಿಯ ಐಪಿಎಲ್ ರದ್ದಾಗಿದೆ ಎಂದು ಬಿಸಿಸಿಐ ಹೇಳಿದೆ.

'ಐಪಿಎಲ್ 2021' ಮತ್ತೆ ನಡೆಯುತ್ತಾ?: ಇಲ್ಲಿದೆ ಸಂಪೂರ್ಣ ಮಾಹಿತಿ'ಐಪಿಎಲ್ 2021' ಮತ್ತೆ ನಡೆಯುತ್ತಾ?: ಇಲ್ಲಿದೆ ಸಂಪೂರ್ಣ ಮಾಹಿತಿ

2021ರ ಐಪಿಎಲ್ ಆವೃತ್ತಿ ರದ್ದಾದ ಬೆನ್ನಲ್ಲೇ ಭಾರತದಲ್ಲಿ ನಡೆಯಲಿದ್ದ ಪ್ರತಿಷ್ಠಿತ ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್-19 ದ್ವಿತೀಯ ಅಲೆಯ ಅಪಾಯವನ್ನು ಮನಗಂಡಿರುವ ಬಿಸಿಸಿಐ ಟಿ20 ವಿಶ್ವಕಪ್‌ ಅನ್ನು ಯುಎಇಗೆ ಸ್ಥಳಾಂತರಿಸುವುದರಲ್ಲಿದೆ.

ಐಪಿಎಲ್ 2020ರ ಆವೃತ್ತಿ ಯುಎಇಯಲ್ಲೇ ಯಶಸ್ವಿಯಾಗಿ ನಡೆದಿತ್ತು. ಆದರೆ 2021ರ ಐಪಿಎಲ್ ಅನ್ನು ಭಾರತದಲ್ಲಿ ನಡೆಸಲು ನಿರ್ಧರಿಸುವ ಮೂಲಕ ಬಿಸಿಸಿಐ ಕೈ ಸುಟ್ಟುಕೊಂಡಿದೆ. ಹೀಗಾಗಿ ಮುಂಬರಲಿರುವ ಟಿ20 ವಿಶ್ವಕಪ್ಪನ್ನಾದರೂ ಯಶಸ್ವಿಯಾಗಿ ಯುಎಇಯಲ್ಲಿ ಆಯೋಜಿಸುವತ್ತ ಬಿಸಿಸಿಐ ಆಯೋಚಿಸುತ್ತಿದೆ.

ಐಪಿಎಲ್ ಮುಂದೂಡಿಕೆ: ಆಸ್ಟ್ರೇಲಿಯಾ ಆಟಗಾರರು ಸಿಬ್ಬಂದಿಗಳಿಗೆ ಮತ್ತಷ್ಟು ಆತಂಕಐಪಿಎಲ್ ಮುಂದೂಡಿಕೆ: ಆಸ್ಟ್ರೇಲಿಯಾ ಆಟಗಾರರು ಸಿಬ್ಬಂದಿಗಳಿಗೆ ಮತ್ತಷ್ಟು ಆತಂಕ

'ಈ ವರ್ಷ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಅನ್ನು ಯುಎಇಗೆ ಸ್ಥಳಾಂತರಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ನವೆಂಬರ್‌ನಲ್ಲಿ ಟೂರ್ನಿ ವೇಳೆಯೇ ಕೋವಿಡ್ ತೃತೀಯ ಅಲೆಯ ನಿರೀಕ್ಷೆಯಿರುವುದರಿಂದ ಇಲ್ಲಿಗೆ ತಂಡಗಳು ಬರಲು ಹಿಂದೇಟು ಹಾಕಬಹುದು,' ಎಂದು ಬಿಸಿಸಿಐ ಮೂಲ ತಿಳಿಸಿದೆ.

Story first published: Tuesday, May 4, 2021, 17:33 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X