ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೇನ್ ವಿಲಿಯಮ್ಸನ್ ಬಳಿಕ ಕಿವೀಸ್ ಪಡೆಯ ಮತ್ತೋರ್ವ ಆಟಗಾರ ಟಿ20 ಸರಣಿಯಿಂದ ಹೊರಕ್ಕೆ

After skipper Kane Williamson allrounder Kyle Jamieson also opts out for t20 series against India

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಬುಧವಾರದಿಂದ ಟಿ20 ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ. ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಟಿ20 ಸರಣಿಯ ಆರಂಭಕ್ಕೂ ಮುನ್ನವೇ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಿ20 ಸರಣಿಯಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ಇದೀಗ ಕಿವೀಸ್ ಪಡೆಯ ಮತ್ತೋರ್ವ ಪ್ರಮುಖ ಆಟಗಾರ ಕೂಡ ಚುಟುಕು ಕ್ರಿಕೆಟ್ ಸರಣಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡ ಕಳೆದ ಭಾನುವಾರವಷ್ಟೇ ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು.

ನ್ಯೂಜಿಲೆಂಡ್ ತಂಡ ಕಳೆದ ಭಾನುವಾರವಷ್ಟೇ ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಸೋತ ಕಿವೀಸ್ ಪಡೆ ಟಿ20 ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು. ಇದಾಗಿ ಎರಡೇ ದಿನ ಗಳ ಬಿಡುವಿನ ಮತ್ತೊಂದು ಸರಣಿಯಲ್ಲಿ ನ್ಯೂಜಿಲೆಂಡ್ ಆಡುತ್ತಿದೆ. ಹೀಗಾಗಿ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕಿವೀಸ್ ತಂಡದ ಮ್ಯಾನೇಜ್‌ಮೆಂಟ್ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ.

ಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರ

ಕೈಲ್ ಜೇಮಿಸನ್ ಕೂಡ ಸರಣಿಯಿಂದ ಹೊರಕ್ಕೆ

ಕೈಲ್ ಜೇಮಿಸನ್ ಕೂಡ ಸರಣಿಯಿಂದ ಹೊರಕ್ಕೆ

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಭಾರತ ವಿರುದ್ಧಧ ಟಿ20 ಸರಣಿಯಿಂದ ಹೊರಗುಳಿಯುತ್ತಾರೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಹೀಗಾಗಿ ಟಿ20 ಸರಣಿಯಲ್ಲಿ ಕಿವಿಸ್ ಪಡೆಯ ನಾಯಕತ್ವದ ಜವಾಬ್ಧಾರಿ ಟಿಮ್ ಸೌಥಿ ಹೆಗಲೇರಿದೆ. ಇದೀಗ ಟಿ20 ಸರಣಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ನ್ಯೂಜಿಲೆಂಡ್ ತಮಡದ ಕಡೆಯಿಂದ ಮತ್ತೊಂದು ಮಹತ್ವದ ಸುದ್ದಿ ಬಂದಿದೆ. ನ್ಯೂಜಿಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ಕೈಲ್ ಜೇಮಿಸನ್ ಕೂಡ ಈ ಸರಣಿಯಿಂದ ಹೊರಗುಳಿಯಲಿದ್ದಾರೆ.

ಮಾಹಿತಿ ನೀಡಿದ ಕಿವೀಸ್ ಕೋಚ್

ಮಾಹಿತಿ ನೀಡಿದ ಕಿವೀಸ್ ಕೋಚ್

ನ್ಯೂಜಿಲೆಂಡ್ ಕ್ರಿಕೆಟ್ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೀಡ್ ಕೇನ್ ವಿಲಿಯಮ್ಸನ್ ಜೊತೆಗೆ ಕೈಲ್ ಜೇಮಿಸನ್ ಕೂಡ ಈ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಅಂಶವನ್ನು ತಿಳಿಸಿದ್ದಾರೆ. ಆಟಗಾರರ ಮೇಲಿನ ವರ್ಕ್‌ಲೋಡ್ ಕಡಿಮೆ ಮಾಡುವ ಯೋಜನೆಯ ಅಂಗವಾಗಿ ಈ ಇಬ್ಬರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿರುವುದಾಗಿ ಗ್ಯಾರಿ ಸ್ಟೀಡ್ ವಿವರಿಸಿದ್ದಾರೆ.

ಒತ್ತಡ ಕಡಿಮೆ ಮಾಡಲು ತಂತ್ರ

ಒತ್ತಡ ಕಡಿಮೆ ಮಾಡಲು ತಂತ್ರ

ನಾವು ಕೇನ್ ಮಿಲಿಯಮ್ಸನ್ ಹಾಗೂ ಕೇಲ್ ಜೇಮಿಸನ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರ ಭಾಗವಾಗಿ ಈ ಸರಣಿಯಲ್ಲಿ ಈ ಇಬ್ಬರು ಕೂಡ ಆಡುತ್ತಿಲ್ಲ. ಈ ಇಬ್ಬರು ಕೂಡ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಾರೆ. ಹೀಗಾಗಿ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿರುವ ಆಟಗಾರರು ಸಂಪೂರ್ಣ ಸರಣಿಯ ಭಾಗವಾಗಿರುವುದಿಲ್ಲ" ಎಂದು ಗ್ಯಾರಿ ಸ್ಟೀಡ್ ವಿವರಣೆ ನೀಡಿದ್ದಾರೆ. "ಇದು ತಂಡದ ಸಮತೋಲನವನ್ನು ಕಾಪಾಡಿಕೊಳ್ಳಲು ತೆಗೆದುಕೊಂಡಿರುವ ನಿರ್ಧಾರವಾಗಿದೆ. ಐದು ದಿನಗಳಲ್ಲಿ ಮೂರು ಪಂದ್ಯಗಳನ್ನು ಆಡಬೇಕಿದೆ. ಅಲ್ಲದೆ ಬೇರೆ ಬೇರೆ ನಗರಗಳಲ್ಲಿ ಈ ಸರಣಿ ನಡೆಯುತ್ತಿರುವುದರಿಂದಾಗಿ ಪ್ರಯಾಣದ ಒತ್ತಡವೂ ಆಟಗಾರರ ಮೇಲಿರುತ್ತದೆ" ಎಂದಿದ್ದಾರೆ ಸ್ಟೀಡ್.

ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲೂ ಆಡಿಲ್ಲ ಜೇಮಿಸನ್

ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲೂ ಆಡಿಲ್ಲ ಜೇಮಿಸನ್

ನ್ಯೂಜಿಲೆಂಡ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಕೈಲ್ ಜೇಮಿಸನ್ ಈ ಬಾರಿಯ ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ಟಿ20 ಸರಣಿಯ ಮುಕ್ತಾಯದ ಬಳಿಕ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ ತವರಿಗೆ ಮರಳಲಿರುವ ಕಾರಣದಿಂದಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೇಮಿಸನ್ ಆಡುವ ನಿರೀಕ್ಷೆಯಿದೆ. ಇನ್ನು ಗಾಯದಿಂದ ವಿಶ್ವಕಪ್‌ನ ತಂಡದಿಂದ ಹೊರಗುಳಿದಿದ್ದ ಲೂಕಿ ಫರ್ಗ್ಯೂಸನ್ ಚೇತರಿಸಿಕೊಂಡಿದ್ದು ಮೊದಲ ಟಿ20 ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

Story first published: Wednesday, November 17, 2021, 12:43 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X