ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೆಹಲಿಯ ಯುವ ಕ್ರಿಕೆಟಿಗನಿಗೆ ಎರಡು ವರ್ಷ ಕ್ರಿಕೆಟ್‌ನಿಂದ ನಿಷೇಧ

Age fudging: Delhi player banned by BCCI

ದೆಹಲಿ ಕ್ರಿಕೆಟಿಗ ಪ್ರಿನ್ಸ್ ರಾಮ್ ನಿವಾಸ್ ಎಂಬ ಯುವ ಆಟಗಾರನನ್ನು ಬಿಸಿಸಿಐ ದೇಸಿ ಕ್ರಿಕೆಟ್‌ನಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಿಸಿದೆ. ಅಂಡರ್-19 ತಂಡಕ್ಕೆ ಆಡಲು ನಕಲಿ ವಯಸ್ಸಿನ ಪ್ರಮಾಣ ಪತ್ರ ನೀಡಿದ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರವನ್ನು ಕೈಗೊಂಡಿದೆ.

ರಾಮ್ ನಿವಾಸ್ ಯಾದವ್ ಡೆಲ್ಲಿ & ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಶನ್‌(ಡಿಡಿಸಿಎ)ನಲ್ಲಿ ನೊಂದಣಿಯನ್ನು ಮಾಡಿಕೊಂಡಿದ್ದ ಆಟಗಾರ. ಆದರೆ ಈತ ಇದೀಗ ಬಿಸಿಸಿಐನಿಂದ ಅನರ್ಹಗೊಂಡಿದ್ದು ಮುಂದಿನ ಎರಡು ಋತುಗಳಲ್ಲಿ ಯಾವುದೇ ದೇಸಿ ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ. ಈ ವಿಚಾರವನ್ನು ಡಿಡಿಸಿಎ ಕೂಡ ಸ್ಪಷ್ಟ ಪಡಿಸಿದೆ.

ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್ಈ ತಂಡ ಮಾತ್ರ ಆಸ್ಟ್ರೇಲಿಯಾ ನೆಲದಲ್ಲಿ ಅದಕ್ಕೆ ಚಾಲೆಂಜ್ ಮಾಡಲು ಸಾಧ್ಯ: ಮೈಕಲ್ ವಾನ್

ಹತ್ತನೇ ತರಗತಿಯ ದಾಖಲಾತಿಯನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಪ್ರಿನ್ಸ್‌ಯಾದವ್ ಹುಟ್ಟಿದ ವರ್ಷ ಜೂನ್‌ 10, 1996 ಎಂದು ಧೃಡಪಟ್ಟಿದೆ. ಆದರೆ ಬಿಸಿಸಿಐಗೆ ನೀಡಿದ ದಾಖಲಾತಿಯಲ್ಲಿ ಡಿಸೆಂಬರ್ 12, 2001 ಎಂಬುದಾಗಿ ಇದೆ.

ಈ ಪ್ರಮಾಣಪತ್ರ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ತಕ್ಷಣದಿಂದಲೇ ಈ ನಿಷೇಧ ಜಾರಿಯಾಗುತ್ತದೆ ಎಂದು ಡಿಡಿಸಿಎ ಗೆ ಮೇಲ್ ಮೂಲಕ ತಿಳಿಸಿದೆ. ಹೀಗಾಗಿ 2020-21, 2021-22 ರ ಋತುವಿನಲ್ಲಿ ಪ್ರಿನ್ಸ್‌ ಯಾದವ್ ಕ್ರಿಕೆಟ್‌ ಆಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾನೆ.

Story first published: Monday, December 2, 2019, 21:23 [IST]
Other articles published on Dec 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X