ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ನಮ್ಮವರಿಗೆ ಹೊಟ್ಟೆಕಿಚ್ಚು": ಭಾರತ ಹಾಗೂ ಪಾಕ್ ತಂಡಗಳ ನಡುವಿನ ವ್ಯತ್ಯಾಸ ಹೇಳಿದ ಅಹ್ಮದ್ ಶಹ್ಜಾದ್

Ahmed Shahzad explain difference between India and Pakistan team said here seniors cannot digest success

ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶಹ್ಬಾಜ್ ಭಾರತದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ನಡುವಿನ ಬಾಂಧವ್ಯವನ್ನು ಉಲ್ಲೇಖಿಸಿ ಪಾಕಿಸ್ತಾನದ ಹಿರಿಯ ಆಟಗಾರರ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಹ್ಮದ್ ಶಹ್ಬಾಜ್ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪ್ರಮುಖ ವ್ಯತ್ಯಾಸವನ್ನು ಕೂಡ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಯುವ ಆಟಗಾರರಿಗೆ ಹಿರಿಯ ಆಟಗಾರರು ಯಾವ ರೀತಿಯಾಗಿ ಬೆಂಬಲವಾಗಿ ನಿಲ್ಲುತ್ತಿದ್ದರು ಎಂಬುದರ ಬಗ್ಗೆ ಅಹ್ಮದ್ ಶಹ್ಬಾಜ್ ಮಾತನನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಂಎಸ್ ಧೊನಿ ಹಾಗೂ ವಿರಾಟ್ ಕೊಹ್ಲಿ ಅವರ ನಡುವಿನ ಬಾಂಧ್ಯವ್ಯವನ್ನು ಉಲ್ಲೇಖಿಸಿದ್ದಾರೆ. ಆದರೆ ಪಾಕಿಸ್ತಾನ ತಂಡದಲ್ಲಿ ಅಂಥಾ ವಾತಾವರಣವಿರಲಿಲ್ಲ. ಯುವ ಆಟಗಾರರು ಚೆನ್ನಾಗಿ ಆಡುತ್ತಿದ್ದರೆ ಅವರಿಗೆ ಬೆಂಬಲ ನೀಡುವ ಬದಲು ಹೊಟ್ಟೆಕಿಚ್ಚು ಪಡುತ್ತಾರೆ ಎಂದಿದ್ದಾರೆ ಅಹ್ಮದ್ ಶಹ್ಬಾಜ್.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದರು ಧೋನಿ

ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದರು ಧೋನಿ

ಅಹ್ಮದ್ ಶಹ್ಜಾದ್ ಭಾರತದ ಆಟಗಾರ ವಿರಾಟ್ ಕೊಹ್ಲಿಗೆ ಅನುಭವಿ ಆಟಗಾರನಾಗಿ ಎಂಎಸ್ ಧೋನಿ ಹೇಗೆ ಬೆಂಬಲವಾಗಿ ನಿಂತಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಯುವ ಆಟಗಾರನಾಗಿ ತಮ್ಮ ವೃತ್ತಿ ಜೀವನದಲ್ಲಿ ಕಠಿಣ ಸಂದರ್ಭದಲ್ಲಿದ್ದಾಗ ಧೋನಿ ಬೆಂಬಲವಾಗಿದ್ದರು. 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗಲೂ ಧೋನಿ ಕೊಹ್ಲಿಯ ಕೈಬಿಟ್ಟಿರಲಿಲ್ಲ. ನಂತರ ವಿರಾಟ್ ಕೊಹ್ಲಿ ಕೂಡ ಇದಕ್ಕೆ ಪ್ರತಿಯಾಗಿ ಅದ್ಭುತ ಪ್ರದರ್ಶನ ನಿಡುವ ಮೂಲಕ ಸಮರ್ಥನೆ ಮಾಡಿಕೊಂಡರು. ಈ ಕಾರಣದಿಂದಾಗಿಯೇ ಕೊಹ್ಲಿ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ ಎಂದಿದ್ದಾರೆ ಅಹ್ಮದ್ ಶಹ್ಜಾದ್.

ತಂಡದ ಆಟಗಾರರು ಯಶಸ್ಸು ಸಾಧಿಸಿದರೆ ಹೊಟ್ಟೆಕಿಚ್ಚು

ತಂಡದ ಆಟಗಾರರು ಯಶಸ್ಸು ಸಾಧಿಸಿದರೆ ಹೊಟ್ಟೆಕಿಚ್ಚು

ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ವಿಚಾರಕ್ಕೆ ಬಂದರೆ ಹಾಗಿರಲಿಲ್ಲ ಎಂದು ಶಹ್ಬಾಜ್ ಕಿಡಿಕಾರಿದ್ದಾರೆ. ತಂಡದಲ್ಲಿರುವ ಆಟಗಾರರು ಯಶಸ್ಸು ಸಾಧಿಸಿದರೆ ಇತರರು ಹೊಟ್ಟೆಕಿಚ್ಚು ಪಡುತ್ತಿದ್ದರು ಎಂದಿದ್ದಾರೆ. ನಿಮ್ಮ ತಂಡದ ಆಟಗಾರರೇ ನಿಮಗೆ ಬೆಂಬಲವಾಗಿ ನಿಲ್ಲುತ್ತಿರಲಿಲ್ಲ. ಯುವ ಆಟಗಾರನೋರ್ವ ಯಶಸ್ಸು ಸಾಧಿಸಿದರೆ ಅದನ್ನು ಹಿತಿಯ ಆಟಗಾರರು ಹಾಗೂ ಮಾಜಿ ಕ್ರಿಕೆಟಿಗರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಇದು ಪಾಕಿಸ್ತಾನ ಕ್ರಿಕೆಟ್‌ನ ದುರಂತ ಎಂದಿದ್ದಾರೆ ಅಹ್ಮದ್ ಶಹ್ಜಾದ್.

ಐಪಿಎಲ್ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಐರ್ಲೆಂಡ್ ತಂಡದ ನಾಯಕ

ಕೊಹ್ಲಿಗೆ ಬೆಂಬಲವಾಗಿ ನಿಂತಿದೆ ತಂಡ

ಕೊಹ್ಲಿಗೆ ಬೆಂಬಲವಾಗಿ ನಿಂತಿದೆ ತಂಡ

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸದ್ಯ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರೂ ಅವರಿಗೆ ಟೀಮ್ ಇಂಡಿಯಾ ಬೆಂಬಲವಾಗಿ ನಿಂತಿದೆ ಎಂಬುದನ್ನು ಅಹ್ಮದ್ ಶಹ್ಜಾದ್ ಉಲ್ಲೇಖಿಸಿದ್ದಾರೆ. ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗಿದ್ದರು ಕೂಡ ಅವರಿಗೆ ಟೀಮ್ ಇಂಡಿಯಾ ಬೆಂಬಲ ನೀಡಿದೆ. ಆದರೆ ತನ್ನ ಪರಿಸ್ಥಿತಿ ಭಿನ್ನವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ಪಂದ್ಯಗಳಲ್ಲಿ ಕಳಪೆ ಆಡಿದ್ದಕ್ಕೆ ಮತ್ತೆ ಅವಕಾಶ ದೊರೆಯಲಿಲ್ಲ

ಎರಡು ಪಂದ್ಯಗಳಲ್ಲಿ ಕಳಪೆ ಆಡಿದ್ದಕ್ಕೆ ಮತ್ತೆ ಅವಕಾಶ ದೊರೆಯಲಿಲ್ಲ

"ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ನಾನು ಕೇವಲ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ ಎಂಬ ಕಾರಣಕ್ಕೆ ತಂಡದಿಂದ ಹೊರಗಿಡಲಾಯಿತು. ಫೈಜಲಾಬಾದ್ ಟೂರ್ನಿಯಲ್ಲಿ ಚೆನ್ನಾಗಿ ಆಡಿದರೆ ಅವಕಾಶ ನೀಡಲಾಗುತ್ತದೆ ಎಂದು ನನಗೆ ಹೇಳಿದ್ದರು. ಅಲ್ಲಿ ನಾನು ಅತಿ ಹೆಚ್ಚಿನ ರನ್‌ಗಳಿಸಿದರೂ ನನಗೆ ಮತ್ತೊಂದು ಅವಕಾಶ ಈವರೆಗೂ ದೊರೆತಿಲ್ಲ" ಎಂದಿದ್ದಾರೆ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶಹ್ಜಾದ್.

Story first published: Friday, June 24, 2022, 18:10 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X