ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪದ್ಮಶ್ರೀ ಪ್ರಶಸ್ತಿಗೆ ಫುಟ್ಬಾಲ್ ದಿಗ್ಗಜ ಐಎಮ್ ವಿಜಯನ್ ನಾಮನಿರ್ದೇಶನ

Aiff To Recommend Im Vijayan For Padma Shri Honour

ಮಾಜಿ ಫುಟ್ಬಾಲ್ ಆಟಗಾರ ಐಎಮ್ ವಿಜಯನ್ ಅವರನ್ನು ಪದ್ಮ ಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಿರ್ಧರಿಸಿದೆ. ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕನೂ ಆಗಿರುವ ವಿಜಯನ್ ಭಾರತ ಕಂಡ ಪ್ರತಿಭಾವಂತ ಫುಟ್ಬಾಲಿಗರಲ್ಲಿ ಒಬ್ಬರಾಗಿದ್ದಾರೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ ಕಳುಹಿಸಲು ಜೂನ್ 3 ಅಂತಿಮ ದಿನವಾಗಿತ್ತು. ಆದರೆ ಬಳಿಕ ಅದನ್ನು ಕ್ರೀಡಾ ಸಚಿವಾಲಯ 22ರ ವರೆಗೆ ಮುಂದೂಡಿದೆ. ಭಾರತದ ನಾಗರೀಕ ಪ್ರಶಸ್ತಿಯಲ್ಲಿ ಭಾರತರತ್ನ, ಪದ್ಮ ವಿಭೂಷಣ, ಪದ್ಮ ಭೂಷಣದ ಬಳಿಕ ಪದ್ಮಶ್ರೀ ಪ್ರಶಸ್ತಿ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾಗಿದೆ.

ಅರ್ಜುನ ಪ್ರಶಸ್ತಿ ನಾಮನಿರ್ದೇಶನದ ವಿರುದ್ಧ ಗುಡುಗಿದ ಬ್ಯಾಡ್ಮಿಂಟನ್ ತಾರೆಅರ್ಜುನ ಪ್ರಶಸ್ತಿ ನಾಮನಿರ್ದೇಶನದ ವಿರುದ್ಧ ಗುಡುಗಿದ ಬ್ಯಾಡ್ಮಿಂಟನ್ ತಾರೆ

1992ರಲ್ಲಿ ವಿಜಯನ್ ಮೊದಲ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದರು. ಬಳಿಕ ಭಾರತ ಫುಟ್ಬಾಲ್ ಲೋಕದಲ್ಲಿ ತಾರೆಯಾಗಿ ಮಿಂಚಿದರು. 11 ವರ್ಷಗಳ ಅಂತಾರಾಷ್ಟ್ರೀಯ ಫುಟ್ಬಾಲ್ ಕೆರಿಯರ್‌ನಲ್ಲಿ ವಿಜಯನ್ 79 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 40 ಗೋಲ್‌ಗಳನ್ನು ಬಾರಿಸಿದ್ದಾರೆ.

2003ರಲ್ಲಿ ಭಾರತದಲ್ಲಿ ನಡೆದ ಆಫ್ರೋ-ಏಷ್ಯನ್ ಕ್ರೀಡಾ ಕೂಟದಲ್ಲಿ ನಾಲ್ಕು ಗೋಲು ಭಾರಿಸಿ ಕೂಟದ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮುವುದರೊಂದಿಗೆ ತಮ್ಮ ಅಂತಾರಾಷ್ಟ್ರೀಯ ಕೆರಿಯರ್‌ಗೆ ವಿದಾಯ ಹೇಳಿದರು. 1999ರಲ್ಲಿ ಭೂತಾ್ ವಿರುದ್ಧ 12ನೇ ಸೆಕೆಂಡ್‌ನಲ್ಲಿ ಗಳಿಸಿದ ಗೋಲ್ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೂರನೇ ಅತಿ ವೇಗದ ಗೋಲ್ ಎಂಬ ಹೆಗ್ಗಳಿಕೆಯನ್ನು ಇನ್ನೂ ಉಳಿಸಿಕೊಂಡಿದೆ.

ನನ್ನ ಫುಟ್ಬಾಲ್ ಆಟ ಆನಂದಿಸುತ್ತಿದ್ದೇನೆ, ಸದ್ಯಕ್ಕೆ ದೂರ ಹೋಗಲ್ಲ: ಛೆಟ್ರಿನನ್ನ ಫುಟ್ಬಾಲ್ ಆಟ ಆನಂದಿಸುತ್ತಿದ್ದೇನೆ, ಸದ್ಯಕ್ಕೆ ದೂರ ಹೋಗಲ್ಲ: ಛೆಟ್ರಿ

90ರ ದಶಕದಲ್ಲಿ ಭಾರತೀಯ ಫಟ್ಬಾಲ್‌ನಲ್ಲಿ ವಿಜಯನ್ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿದ್ದ ಆಟಗಾರರಲ್ಲಿ ಒಬ್ಬರಾಗಿದ್ದರು. ಕೇರಳ ಪೊಲೀಸ್, ಎಫ್‌ಸಿ ಕೊಚ್ಚಿ ಮತ್ತು ಕೋಲ್ಕತಾ ದೈತ್ಯ ಸಂಸ್ಥೆಗಳಾದ ಪೂರ್ವ ಬಂಗಾಳ ಮತ್ತು ಮೋಹನ್ ಬಗಾನ್ ಸೇರಿದಂತೆ ಅಂದಿನ ಉನ್ನತ ದರ್ಜೆಯ ಕ್ಲಬ್‌ಗಳೊಂದಿಗೆ ಒಪ್ಪಂದ ಹೊಂದಿದ್ದರು.

Story first published: Wednesday, June 17, 2020, 15:42 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X