ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಹಸ್ಯ ಸ್ಪಿನ್ನರ್' ಅಜಂತ ಮೆಂಡಿಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ

Ajantha Mendis retires from all forms of cricket

ಕೊಲಂಬೋ, ಆಗಸ್ಟ್ 29: ಶ್ರೀಲಂಕಾದ ರಹಸ್ಯ ಸ್ಪಿನ್ನರ್ ಅಜಂತ ಮೆಂಡಿಸ್ ಬುಧವಾರ (ಆಗಸ್ಟ್ 28) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 34ರ ಹರೆಯದ ಮೆಂಡಿಸ್ 2008ರಲ್ಲಿ ಶ್ರೀಲಂಕಾ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2015ರಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!

'ಕ್ಯಾರಮ್‌ ಬಾಲ್‌'ಗೆ ಖ್ಯಾತರಾಗಿದ್ದ ಮೆಂಡಿಸ್, 19 ಟೆಸ್ಟ್ ಪಂದ್ಯಗಳಲ್ಲಿ 70 ವಿಕೆಟ್‌, 87 ಏಕದಿನ ಪಂದ್ಯಗಳಲ್ಲಿ 152 ವಿಕೆಟ್‌, 39 ಟಿ20 ಪಂದ್ಯಗಳಲ್ಲಿ 66 ವಿಕೆಟ್‌ ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 288 ವಿಕೆಟ್‌ ಸಾಧನೆ ಹೊಂದಿದ್ದರು. ಆದರೆ ಗಾಯ ಮತ್ತು ಫಾರ್ಮ್‌ ಕಳೆದುಕೊಂಡು ಇತ್ತೀಚೆಗೆ ಲಂಕಾ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

ಕ್ರಿಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೇ ಏಕದಿನ ಪಂದ್ಯವನ್ನಾಡಿದ್ದ ಮೆಂಡಿಸ್, ಏಕದಿನದಲ್ಲಿ ವೇಗದ 50 ವಿಕೆಟ್‌ ದಾಖಲೆಗಾಗಿ ಗುರುತಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಟಿ20ಯಲ್ಲಿ 2 ಸಾರಿ 6 ವಿಕೆಟ್‌ಗಳನ್ನು ಪಡೆದ ಕೆಲವೇ ಕೆಲವು ಬೌಲರ್‌ಗಳಲ್ಲಿ ಅಜಂತ ಮೆಂಡಿಸ್ ಕೂಡ ಗುರುತಿಸಿಕೊಂಡಿದ್ದಾರೆ.

ವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮಾನಸಿ ಜೋಷಿವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮಾನಸಿ ಜೋಷಿ

ಮೆಂಡಿಸ್ ವೃತ್ತಿ ಬದುಕಿಗೆ ಅಭಿನಂದಿಸಿ ಟ್ವೀಟ್ ಮಾಡಿರುವ ಮಾಜಿ ಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್, 'ಚುಟುಕಾದರೂ ಶ್ರೇಷ್ಠ ವೃತ್ತಿ ಬದುಕಿಗೆ ಅಭಿನಂದನೆಗಳು ಮೆಂಡ. ಗಾಯದ ಕಾರಣ ದುರದೃಷ್ಟಕರವಾಗಿ ನೀನು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಆದರೆ ದೇವರು ನಿನಗೆ ಹಲವಾರು ದಾರಿ ತೋರಿಸಲಿದ್ದಾನೆ. ಆತನ ಆಶೀರ್ವಾದ ನಿನ್ನೊಂದಿಗಿರಲಿ,' ಎಂದು ಬರೆದುಕೊಂಡಿದ್ದಾರೆ.

Story first published: Thursday, August 29, 2019, 0:57 [IST]
Other articles published on Aug 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X