ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಾಜ್ ಪಟೇಲ್ 10 ವಿಕೆಟ್ ಸಾಧನೆ: ಅನಿಲ್ ಕುಂಬ್ಳೆ, ಜಿಮ್ ಲೇಕರ್‌ಗಿಂತ ಗ್ರೇಟ್ ಎಂದ ದೀಪಕ್ ಪಟೇಲ್

Ajaz patel

ಮುಂಬೈನಲ್ಲಿ ನಡೆದ ಭಾರತದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಅವಿಸ್ಮರಣೀಯ ಸಾಧನೆಯನ್ನ ಮಾಡಿದ್ರು. ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಸಾಧನೆ ಮಾಡಿದ್ರು.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ 372ರನ್‌ಗಳ ಬೃಹತ್ ಸೋಲನ್ನ ಕಂಡರೂ, ಅಜಾಜ್ ಪಟೇಲ್ ವಿಶೇಷ ದಾಖಲೆ ಮಾತ್ರ ಸ್ಮರಣೀಯವಾಗಿದೆ. ಭಾರತದ ಅನಿಲ್ ಕುಂಬ್ಳೆ ಮತ್ತು ಇಂಗ್ಲೆಂಡ್‌ನ ಜಿಮ್‌ ಲೇಕರ್‌ ಮಾಡಿದ ಸಾಧನೆಯನ್ನ ಅಜಾಜ್ ಸರಿಗಟ್ಟಿದ್ದನ್ನ ಕಿವೀಸ್ ನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ.

ದ್ರಾವಿಡ್ ಮತ್ತು ಕೊಹ್ಲಿ ಯಾವುದೇ ದೇಶದ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ: ಸಾಬಾ ಕರೀಂದ್ರಾವಿಡ್ ಮತ್ತು ಕೊಹ್ಲಿ ಯಾವುದೇ ದೇಶದ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ: ಸಾಬಾ ಕರೀಂ

ಆದ್ರೆ ಅಜಾಜ್‌ರ ಈ ಸಾಧನೆಯು ಅನಿಲ್ ಕುಂಬ್ಳೆ ಮತ್ತು ಜಿಮ್ ಲೇಕರ್‌ಗಿಂತ ಮಿಗಿಲಾದದ್ದು ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟ್ ದೀಪಕ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.

"ಅನಿಲ್‌ ಕುಂಬ್ಳೆ ಹಾಗೂ ಜಿಮ್ ಲೇಕರ್‌ ಅವರು ತವರು ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 10 ವಿಕೆಟ್‌ಗಳ ಸಾಧನೆ ಮಾಡಿದ್ದರು. ಆದರೆ, ಎಜಾಝ್‌ ಪಟೇಲ್‌ ಅವರ 10 ವಿಕೆಟ್‌ ಸಾಧನೆಯ ಪ್ರಯಾಣ ಪಂದ್ಯದ ಆರಂಭಿಕ ದಿನದಂದಿಲೇ ಶುರುವಾಗಿತ್ತು. ಅಷ್ಟೇ ಅಲ್ಲದೆ, ಅವರು ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿರುವುದರಿಂದ ಈ ಇಬ್ಬರು ದಿಗ್ಗಜರಿಗಿಂತ ಶ್ರೇಷ್ಠವಾದದ್ದು," ಎಂದು ಬಿಡಿಕ್ರಿಕ್‌ಟೈಮ್‌ಗೆ ದೀಪಕ್ ತಿಳಿಸಿದ್ದಾರೆ.

"ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ ಕಬಳಿಸುವುದು ಸುಲಭದ ಮಾತಲ್ಲ ಹಾಗೂ ಅದರಲ್ಲೂ ಸ್ಪಿನ್ನರ್‌ ಆಗಿ ನೀವು ಈ ಸಾಧನೆ ಅತ್ಯಂತ ಕಠಿಣವಾಗಿರುತ್ತದೆ," ಎಂದು ನ್ಯೂಜಿಲೆಂಡ್‌ ಪರ 37 ಟೆಸ್ಟ್‌ ಹಾಗೂ 75 ಓಡಿಐ ಪಂದ್ಯಗಳಾಡಿರುವ ದೀಪಕ್ ಪಟೇಲ್ ತಿಳಿಸಿದ್ದಾರೆ.

"ಬಲಿಷ್ಠ ಬ್ಯಾಟಿಂಗ್‌ ವಿಭಾಗ ಹೊಂದಿರುವ ಭಾರತ ತಂಡದ ವಿರುದ್ಧ ಎಜಾಝ್‌ ಪಟೇಲ್‌ ಅವರ ಪ್ರದರ್ಶನ ಅಸಾಧಾರಣವಾಗಿದೆ. ಅದರಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳಿಗೆ ಅತ್ಯಂತ ಬಲ ಶಾಲಿಯಾಗಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಎಜಾಝ್‌ ಪಟೇಲ್‌ ಅವರಿಂದ ಮೂಡಿ ಬಂದಿರುವ ಈ ಪ್ರದರ್ಶನ ಅತ್ಯುತ್ತಮವಾಗಿದೆ," ಎಂದು ಪಟೇಲ್‌ ಕೊಂಡಾಡಿದರು.

ವಿರಾಟ್ ಕೊಹ್ಲಿ ಅದ್ಭುತ ನಾಯಕ, ಆತನಿಗೆ ಇನ್ನೂ 5 ವರ್ಷ ಟೆಸ್ಟ್ ಕ್ರಿಕೆಟ್ ಬಾಕಿಯಿದೆ : MSK ಪ್ರಸಾದ್ ವಿರಾಟ್ ಕೊಹ್ಲಿ ಅದ್ಭುತ ನಾಯಕ, ಆತನಿಗೆ ಇನ್ನೂ 5 ವರ್ಷ ಟೆಸ್ಟ್ ಕ್ರಿಕೆಟ್ ಬಾಕಿಯಿದೆ : MSK ಪ್ರಸಾದ್

ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಪಿನ್ನರ್ ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಜೊತೆಗೆ ಒಟ್ಟಾರೆ ಮ್ಯಾಚ್‌ನಲ್ಲಿ 14 ವಿಕೆಟ್‌ ತಮ್ಮದಾಗಿಸಿಕೊಂಡಿದ್ದಾರೆ. ಇದು ನ್ಯೂಜಿಲೆಂಡ್ ಪರ ಎರಡನೇ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಭಾರತದ ನೆಲದಲ್ಲಿ ವಿದೇಶಿ ಬೌಲರ್‌ನ ಬೆಸ್ಟ್ ಬೌಲಿಂಗ್ ಫಿಗರ್ ಕೂಡ ಇದಾಗಿದೆ.

ಈ ಮೊದಲು 1980ರಲ್ಲಿ ಇಯಾನ್ ಬಾಥಮ್ 13 ವಿಕೆಟ್ ಕಬಳಿಸಿದ್ರು. ಆದ್ರೆ ಅಜಾಜ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಸೂಪರ್ ಬೌಲಿಂಗ್ ಮಾಡಿದ್ದಾರೆ. ಇದರ ಜೊತೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಯಾವುದೇ ಬೌಲರ್‌ ಗಳಿಸಿದ ಬೆಸ್ಟ್ ಬೌಲಿಂಗ್ ಇದಾಗಿದೆ.

ಈಗಾಗಲೇ 33 ವರ್ಷ ವಯಸ್ಸಿನ ಅಜಾಜ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ತುಂಬಾ ಲೇಟ್ ಆಗಿನೇ ಎಂಟ್ರಿ ಕೊಟ್ಟಿದ್ದಾರೆ. ಇದುವರೆಗೂ ಅವರು 11 ಟೆಸ್ಟ್ ಪಂದ್ಯ ಮತ್ತು 7 ಟಿ20 ಪಂದ್ಯಗಳನ್ನ ಆಡಿದ್ದಾರೆ.

"ಮೂರು ವರ್ಷಗಳ ಹಿಂದಷ್ಟೇ ಅಜಾಜ್ ಪಟೇಲ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿನಿಂದ ಇಲ್ಲಿಯವರೆಗೂ ಅತ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಈ ಹಾದಿಯಲ್ಲಿ ಅವರು ತುಂಬಾ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇದನ್ನು ನಾವು ಅವರ ಫಲಿತಾಂಶದಿಂದ ತಿಳಿದುಕೊಳ್ಳಬಹುದು," ಎಂದು ದೀಪಕ್‌ ಪಟೇಲ್‌ ಹೇಳಿದರು.

ಈ ವೆಸ್ಟ್ ಇಂಡೀಸ್ ಆಟಗಾರನಿಗೆ ಕ್ಯಾಪ್ಟನ್ ಕಿರೀಟ | Oneindia Kannada

ಮುಂಬೈ ಟೆಸ್ಟ್‌ ಅಜಾಜ್ ಪಟೇಲ್ ದಾಖಲೆಯ ಬೌಲಿಂಗ್ ಫಿಗರ್
ಅಜಾಜ್ ಪಟೇಲ್ ಬೌಲಿಂಗ್ ರೆಕಾರ್ಡ್‌
ಓವರ್‌: 73.5
ಮೇಡನ್: 15
ರನ್: 225
ವಿಕೆಟ್: 14

Story first published: Tuesday, December 7, 2021, 22:51 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X