ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶ್ವಿನ್ ಮಾಡಿದ ಒಂದೇ ಒಂದು ಟ್ವೀಟ್‌ನಿಂದ ಬ್ಲೂ ಬ್ಯಾಡ್ಜ್ ಪಡೆದ ನ್ಯೂಜಿಲೆಂಡ್‌ ಕ್ರಿಕೆಟಿಗ

Ajaz Patels twitter account gets verified after Ravichandran Ashwins request to Twitter

ರವಿಚಂದ್ರನ್ ಅಶ್ವಿನ್ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಆಟಗಾರರ ಪೈಕಿ ಕೇಳಿಬರುವ ಹೆಸರು. ಟಿ ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಯಾವುದೇ ಮಾದರಿಯ ಕ್ರಿಕೆಟ್ ಆಗಲಿ ತಂಡಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡುವುದರಲ್ಲಿ ರವಿಚಂದ್ರನ್ ಅಶ್ವಿನ್ ಮೋಸ ಮಾಡುವುದಿಲ್ಲ. ತನ್ನ ತಂಡದ ಪರ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರವಿಚಂದ್ರನ್ ಅಶ್ವಿನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದ್ದಾರೆ.

ದ. ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇಂದೇ ಪ್ರಕಟ; ಕೊಹ್ಲಿ ಬದಲು ಈತ ಏಕದಿನ ತಂಡದ ನೂತನ ನಾಯಕ!ದ. ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇಂದೇ ಪ್ರಕಟ; ಕೊಹ್ಲಿ ಬದಲು ಈತ ಏಕದಿನ ತಂಡದ ನೂತನ ನಾಯಕ!

ಅದರಲ್ಲಿಯೂ ನ್ಯೂಜಿಲೆಂಡ್ ವಿರುದ್ಧ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೌದು, ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಪಡೆದು ಮಿಂಚಿದ್ದ ರವಿಚಂದ್ರನ್ ಅಶ್ವಿನ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ರವಿಚಂದ್ರನ್ ಅಶ್ವಿನ್ ಮೈದಾನದಿಂದಾಚೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಭಿನ್ನವಿಭಿನ್ನವಾದ ಪೋಸ್ಟ್ ಮಾಡುವುದರ ಮೂಲಕ ನೆಟ್ಟಿಗರನ್ನು ತನ್ನತ್ತ ಸೆಳೆಯುತ್ತಾರೆ.

ಅದೇ ರೀತಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವಿಜಯದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ರವಿಚಂದ್ರನ್ ಅಶ್ವಿನ್ ಹಲವಾರು ಟ್ವೀಟ್ ಮಾಡಿದ್ದಾರೆ. ಮೊದಲಿಗೆ ಇತ್ತಂಡಗಳ ನಡುವೆ ನಡೆದ ಕಾನ್ಪುರ ಟೆಸ್ಟ್ ಪಂದ್ಯ ಮುಗಿದ ನಂತರ ಆ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಗೊಂಚಲು ಪಡೆಯುವುದರ ಮೂಲಕ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಶುಭಾಶಯವನ್ನು ಕೋರಿದ್ದರು.

ಇಂಥ ಒಳ್ಳೆ ಆಟಗಾರನನ್ನು ಕಡೆಗಣಿಸಿದ್ದಕ್ಕೆ ಕೊಹ್ಲಿ, ರವಿಶಾಸ್ತ್ರಿಯೇ ಉತ್ತರ ನೀಡಬೇಕು ಎಂದ ಮಾಜಿ ಕ್ರಿಕೆಟಿಗಇಂಥ ಒಳ್ಳೆ ಆಟಗಾರನನ್ನು ಕಡೆಗಣಿಸಿದ್ದಕ್ಕೆ ಕೊಹ್ಲಿ, ರವಿಶಾಸ್ತ್ರಿಯೇ ಉತ್ತರ ನೀಡಬೇಕು ಎಂದ ಮಾಜಿ ಕ್ರಿಕೆಟಿಗ

ಇನ್ನು ಅಜಾಜ್ ಪಟೇಲ್ ಟ್ವಿಟರ್ ಖಾತೆ ಪರಿಶೀಲಿಸಲಾದ ಖಾತೆ ಆಗಿರಲಿಲ್ಲ. ಹೌದು, ಸೆಲೆಬ್ರಿಟಿಗಳಿಗೆ, ಕ್ರಿಕೆಟಿಗರಿಗೆ ಹಾಗೂ ಜನಪ್ರಿಯತೆಯನ್ನು ಗಳಿಸಿರುವ ವ್ಯಕ್ತಿಗಳ ಖಾತೆಗಳನ್ನು ಟ್ವಿಟ್ಟರ್ ಪರಿಶೀಲಿಸಲಾದ ಖಾತೆ ಎಂದು ಬ್ಲ್ಯೂ ಬ್ಯಾಡ್ಜ್ ಒಂದನ್ನು ನೀಡುತ್ತದೆ. ಆದರೆ, ಅಜಾಜ್ ಪಟೇಲ್ ಅವರಿಗೆ ಈ ಬ್ಲೂ ಬ್ಯಾಡ್ಜ್ ಅನ್ನು ಟ್ವಿಟ್ಟರ್ ನೀಡಿರಲಿಲ್ಲ. ಹೀಗಾಗಿ ರವಿಚಂದ್ರನ್ ಅಶ್ವಿನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್ ಗೊಂಚಲು ಪಡೆದ ಆಟಗಾರನಿಗೆ ಬ್ಲ್ಯೂ ಬ್ಯಾಡ್ಜ್ ನೀಡಬೇಕಾಗಿದೆ ಎಂದು ಅಜಾಜ್ ಪಟೇಲ್ ಅವರ ಖಾತೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.

ರವಿಚಂದ್ರನ್ ಅಶ್ವಿನ್ ಈ ರೀತಿ ಬರೆದುಕೊಳ್ಳುವುದರ ಮೂಲಕ ಟ್ವಿಟ್ಟರ್ ಬಳಿ ಮನವಿ ಮಾಡಿಕೊಂಡ ಬೆನ್ನಲ್ಲೇ ಅಜಾಜ್ ಪಟೇಲ್ ಅವರ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಿ ಬ್ಲೂ ಬ್ಯಾಡ್ಜ್ ನೀಡಲಾಗಿದೆ. ಹಾಗೂ ಟ್ವಿಟ್ಟರ್ ಅಜಾಜ್ ಪಟೇಲ್ ಅವರ ಟ್ವಿಟರ್ ಖಾತೆಗೆ ಬ್ಲೂ ಬ್ಯಾಡ್ಜ್ ನೀಡಿದ ಕುರಿತಾಗಿಯೂ ಟ್ವೀಟ್ ಮಾಡಿರುವ ರವಿಚಂದ್ರನ್ ಅಶ್ವಿನ್ ಅಜಾಜ್ ಪಟೇಲ್ ಅವರ ಖಾತೆಯನ್ನು ಪರಿಶೀಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಂಬ್ಳೆ ದಾಖಲೆ ಸರಿದೂಗಿಸಿದ್ದ ಅಜಾಜ್ ಪಟೇಲ್

ಟೀಮ್ ಇಂಡಿಯಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ 47.5 ಓವರ್ ಬೌಲಿಂಗ್ ಮಾಡಿ 119 ರನ್ ನೀಡುವುದರ ಮೂಲಕ 10 ವಿಕೆಟ್ ಪಡೆದರು. ಹೀಗೆ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್‍ಗಳನ್ನು ಪಡೆದುಕೊಂಡ ವಿಶ್ವದ ಮೂರನೇ ಬೌಲರ್ ಎಂಬ ದಾಖಲೆಯನ್ನು ಅಜಾಜ್ ಪಟೇಲ್ ಈ ಪಂದ್ಯದ ಮೂಲಕ ಬರೆದರು. ಹೀಗೆ 10 ವಿಕೆಟ್ ಗೊಂಚಲು ಪಡೆದ ಅಜಾಜ್ ಪಟೇಲ್ 22 ವರ್ಷಗಳ ನಂತರ ಈ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡರು. ಹೌದು, ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು ಮೊದಲಿಗೆ ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲಾಕೆರ್ 1956ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲಾ 10 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಮಾಡಿದ್ದರು. ಇದಾದ ಬಳಿಕ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗೊಂಚಲನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಈ ದಾಖಲೆ ಬರೆದಿದ್ದರು. ಹೀಗೆ ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಜಾಜ್ ಪಟೇಲ್ ಇದೇ ಸಾಧನೆಯನ್ನು ಮತ್ತೊಮ್ಮೆ ಮಾಡುವುದರ ಮೂಲಕ 22 ವರ್ಷಗಳ ಬಳಿಕ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿದೂಗಿಸಿಕೊಂಡರು.

Story first published: Tuesday, December 7, 2021, 19:13 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X