ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?

 Ajinkya Rahane dreams about pink-ball Test

ಕ್ರಿಕೆಟ್‌ ಪ್ರೇಮಿಗಳಿಗೆ ಈಗ ಪಿಂಕ್ ಬಾಲ್ ಡೇ ನೈಟ್ ಪಂದ್ಯದ ಬಗ್ಗೆಯೇ ಕುತೂಹಲ. ಕ್ರಿಕೆಟ್ ನೋಡೋ ಪ್ರೇಮಿಗಳಿಗೇ ಇಷ್ಟು ಕುತೂಹಲ ಇರಬೇಕಾದರೆ ಇನ್ನು ಆಡೋ ಆಟಗಾರರಿಗೆ ಅದೆಷ್ಟು ಕುತೂಹಲ ಇರ್ಬೆಡ! ಹೌದು.. ಟೀಮ್ ಇಂಡಿಯಾ ಆಟಗಾರರು ಪಿಂಕ್ ಬಾಲ್ ನಲ್ಲಿ ಆಡಲು ಅದೆಷ್ಟು ಕಾತುರರಾಗಿದ್ದಾರೆ ಅಂದ್ರೆ ಕನಸಿನಲ್ಲೂ ಪಿಂಕ್ ಚೆಂಡೇ ಕಾಣಿಸುತ್ತಿದೆಯಂತೆ.

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಟೀಮ್ ಇಂಡಿಯಾ ಉಪ ನಾಯಕ ಅಜಿಂಕ್ಯಾ ರಹಾನೆ ತಾವೆಷ್ಟು ಕಾತುರತೆಯಿಂದ ಈ ಐತಿಹಾಸಿಕ ಪಂದ್ಯಕ್ಕೆ ಕಾಯುತ್ತಿರೋದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ. ಮಲಗಿರುವ ರಹಾನೆ ತಮ್ಮ ಪಕ್ಕದಲ್ಲೇ ಪಿಂಕ್ ಬಾಲನ್ನು ಇರಿಸಿಕೊಂಡಿರುವ ಚಿತ್ರವನ್ನು ಅಪ್‌ಲೋಡ್‌ ಮಾಡಿದ್ದಾರೆ. ಮಾತ್ರವಲ್ಲ ಇದಕ್ಕೆ "ಈಗಾಗಲೇ ಐತಿಹಾಸಿಕ ಪಿಂಕ್ ಬಾಲ್ ಪಂದ್ಯದ ಕುರಿತಾಗಿ ಕನಸು ಕಾಣುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್ಒಂದು ವರ್ಷ ಅಮಾನತಾದ ಆಸ್ಟ್ರೇಲಿಯನ್ ಕ್ರಿಕೆಟರ್

ರಹಾನೆ ಅಪ್‌ಲೊಡ್ ಮಾಡಿರುವ ಈ ಚಿತ್ರಕ್ಕೆ ಪ್ರತಿಕ್ರಿಯಿಸಿರುವ ನಾಯಕ ಕೊಹ್ಲಿ 'ಚೆನ್ನಾಗಿ ಪೋಸ್ ಕೊಟ್ಟಿದ್ದೀಯಾ ಜಿಂಕ್ಸಿ' ಎಂದು ತಮಾಷೆಯಾಡಿದ್ದರೆ, ಮತ್ತೋರ್ವ ಆಟಗಾರ ಶಿಖರ್ ಧವನ್ 'ಕನಸಿನಲ್ಲಿ ತೆಗೆದ ಫೋಟೋ' ಎಂದು ಕಾಲೆಳೆದಿದ್ದಾರೆ. ಕೊಲ್ಕತ್ತಾದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಅಜಿಂಕ್ಯಾ ರಹಾನೆ ಮತ್ತು ನಾಯಕ ವಿರಾಟ್‌ ಕೊಹ್ಲಿ ಮೊದಲನೇದಾಗಿ ಆಗಮಿಸಿದ್ದರು. ಕಳೆದ ರಾತ್ರಿಯೇ ಕೊಲ್ಕತ್ತಾ ತಲುಪಿರುವ ನಾಯಕ ಹಾಗೂ ಉಪನಾಯಕನನ್ನು ಇನ್ನುಳಿದ ಆಟಗಾರರು ಇನ್ನಷ್ಟೇ ಸೇರಿಕೊಳ್ಳಬೇಕಿದೆ.

View this post on Instagram

Already dreaming about the historic pink ball test 😊

A post shared by Ajinkya Rahane (@ajinkyarahane) on

ಈಗಾಗಲೇ ಮೊದಲನೇ ಪಂದ್ಯವನ್ನು ಭಾರತ ಗೆದ್ದುಕೊಂಡು ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮಾತ್ರವಲ್ಲ ವಿಶ್ವ ಟೆಸ್ಟ್‌ ಚಾಂಪಿಯನ್ಸ್‌ಶಿಪ್‌ನಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಆರನ್ನೂ ಭಾರತ ಗೆದ್ದುಕೊಂಡಿದ್ದು 300 ಅಂಕಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ ತಂಡಕ್ಕಿಂತ 240ಅಂಕ ಮುಂದಿರುವ ಟೀಮ್ ಇಂಡಿಯಾ ತನ್ನ ಜೈತಯಾತ್ರೆಯನ್ನು ಮುಂದುವರೆಸಲು ಸಿದ್ಧವಾಗಿದೆ.

Story first published: Tuesday, November 19, 2019, 16:11 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X