ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದ ಅಜಿಂಕ್ಯ ರಹಾನೆ

Ajinkya Rahane gets first dose of COVID-19 vaccine

ಮುಂಬೈ: ಭಾರತದ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಶನಿವಾರ (ಮೇ 8) ಕೋವಿಡ್-19 ವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಹಾನೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರಾದರೂ ಹೆಚ್ಚಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಆಡಿದ ಪಂದ್ಯದಲ್ಲಿ ಅಂಥ ಪ್ರದರ್ಶನವೇನೂ ನೀಡಿರಲಿಲ್ಲ.

ಈ ವಿಚಾರದಲ್ಲಿ ಆರ್‌ಸಿಬಿಯೇ ನಂ.1, ಬೆಂಗಳೂರ್ ಸೂಪರ್!ಈ ವಿಚಾರದಲ್ಲಿ ಆರ್‌ಸಿಬಿಯೇ ನಂ.1, ಬೆಂಗಳೂರ್ ಸೂಪರ್!

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶುಕ್ರವಾರ (ಮೇ 7) ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಂಡ ಪ್ರಕಟಿಸಿತ್ತು. ಈ ತಂಡದಲ್ಲಿ ಉಪನಾಯಕರಾಗಿ ಅಜಿಂಕ್ಯ ರಹಾನೆ ಕಾಣಿಸಿಕೊಂಡಿದ್ದರು. ನಾಯಕತ್ವ ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದರು.

32ರ ಹರೆಯದ ರಹಾನೆ ಟ್ವೀಟ್‌ನಲ್ಲಿ, 'ಇವತ್ತು ನಾನು ಕೋವಿಡ್ ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡಿದ್ದೇನೆ. ನೀವು ಅರ್ಹರಿರುವುದಾದರೆ, ಎಲ್ಲರೂ ನೋಂದಾಯಿಸಿಕೊಂಡು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ನಾನು ಎಲ್ಲರಲ್ಲೂ ಕೋರಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆಯ್ಕೆಗೆ ಪೃಥ್ವಿಗೆ ಶರತ್ತು ವಿಧಿಸಿದ ಆಯ್ಕೆದಾರರುಟೀಮ್ ಇಂಡಿಯಾ ಆಯ್ಕೆಗೆ ಪೃಥ್ವಿಗೆ ಶರತ್ತು ವಿಧಿಸಿದ ಆಯ್ಕೆದಾರರು

ಭಾರತದಲ್ಲಿ ಕೊರೊನಾವೈರಸ್ ದ್ವಿತೀಯ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಆತಂಕ ಮಟ್ಟದಲ್ಲಿ ಏರುತ್ತಿದೆ. ಹೀಗಾಗಿ ಕ್ರಿಕೆಟಿಗರು ಜನರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಐಪಿಎಲ್ ಬಯೋಬಬಲ್ ಒಳಗೂ ಸೋಂಕು ಪ್ರವೇಶಿಸಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಮುಂದೂಡಲ್ಪಟ್ಟಿದೆ.

Story first published: Saturday, May 8, 2021, 22:25 [IST]
Other articles published on May 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X