ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೇಥನ್ ಲಿಯಾನ್‌ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ

Ajinkya Rahane gifted signed jersey to Australian spinner Nathan Lyon

ಬ್ರಿಸ್ಬೇನ್: ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿಗೆ ಭಿನ್ನತೆಯಿದೆ. ಕೊಹ್ಲಿಯ ನಡೆಗಿಂತ ಅಜಿಂಕ್ಯ ರಹಾನೆ ನಡೆ ಹೆಚ್ಚು ಮನಸ್ಸು ಗೆಲ್ಲುತ್ತದೆ. ತಂಡದ ನಾಯಕತ್ವ ವಹಿಸಿಕೊಂಡಾಗೆಲ್ಲ ರಹಾನೆ ಇಂಥದ್ದೇ ವಿಚಾರಕ್ಕೆ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ಗೆದ್ದಿರುವ ಭಾರತ ತಂಡದ ನಾಯಕತ್ವ ವಹಿಸಿದ್ದ ರಹಾನೆ ಈ ಬಾರಿಯೂ ವಿಶಿಷ್ಠ ನಡೆಗಾಗಿ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ.

ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!

ಬ್ರಿಸ್ಬೇನ್‌ನಲ್ಲಿ ಮುಕ್ತಾಯಗೊಂಡಿರುವ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್ ರೋಚಕ ಜಯ ಗಳಿಸಿದೆ. ನಾಲ್ಕು ಪಂದ್ಯಗಳ ಐತಿಹಾಸಿಕ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಆದರೆ ಸೋತ ಆಸ್ಟ್ರೇಲಿಯಾ ತಂಡದ ಆಟಗಾರನಿಗೆ ರಹಾನೆ ವಿಶೇಷ ಉಡುಗೊರೆ ನೀಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಬ್ರಿಸ್ಬೇನ್ ಟೆಸ್ಟ್‌ ಮೂಲಕ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಿಯಾನ್ 100ನೇ ಟೆಸ್ಟ್ ಪಂದ್ಯ ಆಡಿದ್ದರು. ಪಂದ್ಯದಲ್ಲಿ ಲಿಯಾನ್‌ಗೆ ಒಟ್ಟು 3 ವಿಕೆಟ್‌ಗಳು ಸಿಕ್ಕಿದ್ದವು. ಹೀಗಾಗಿ 100ನೇ ಪಂದ್ಯ ಆಡಿದ ಲಿಯಾನ್‌ಗೆ ಈ ಕ್ಷಣ ಅವಿಸ್ಮರಣೀಯವಾಗಿಸಲು ನಿರ್ಧರಿಸಿದ ರಹಾನೆ, ಭಾರತದ ಎಲ್ಲಾ ಆಟಗಾರರು ಸಹಿ ಹಾಕಿರುವ ಟೀಮ್ ಇಂಡಿಯಾದ ಜೆರ್ಸಿ ಉಡುಗೊರೆಯಾಗಿ ನೀಡಿದ್ದಾರೆ.

'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!''ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'

ಆಸ್ಟ್ರೇಲಿಯಾದಿಂದ 100 ಟೆಸ್ಟ್‌ ಪಂದ್ಯಗಳನ್ನಾಡಿದ 13ನೇ ಆಟಗಾರನಾಗಿ ಲಿಯಾನ್ ದಾಖಲೆ ನಿರ್ಮಿಸಿದ್ದಾರೆ. ಆದರೆ 100ನೇ ಪಂದ್ಯದಲ್ಲಿ 400ನೇ ವಿಕೆಟ್ ಮೈಲಿಗಲ್ಲು ಸ್ಥಾಪಿಸುವ ಅವಕಾಶವನ್ನು ಲಿಯಾನ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ. ಲಿಯಾನ್ ಟೆಸ್ಟ್‌ನಲ್ಲಿ ಒಟ್ಟಿಗೆ 399 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Tuesday, January 19, 2021, 17:32 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X