ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್

Ajinkya Rahanes men showed great courage, want them to win Test series says Shoaib Akhtar

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಆಸಿಸ್ ನೆಲದಲ್ಲಿ ಗೆಲುವನ್ನು ಸಾಧಿಸುವುದನ್ನು ಬಯಸುತ್ತೇನೆ ಎಂದಿದ್ದಾರೆ. ಅಜಿಂಕ್ಯ ರಹಾನೆ ಮುನ್ನಡೆಸುತ್ತಿರುವ ಭಾರತೀಯ ತಂಡ ಆಸಿಸ್ ನೆಲದಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸುತ್ತಿದೆ. ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿಗೆ ಭಾರತ ತಂಡ ಅರ್ಹವಾಗಿದ ಎಎಂದಿದ್ದಾರೆ ಶೋಯೆಬ್ ಅಖ್ತರ್.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ ತಂಡವನ್ನು "ಅಜಿಂಕ್ಯ ರಹಾನೆ ಮತ್ತು ಅವರ ಬಳಗ ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತವಾದ ರೀತಿಯಲ್ಲಿ ಪುಟಿದೇಳುವ ಧೈರ್ಯ ಹಾಗೂ ಪಾತ್ರವನ್ನು ನಿರ್ವಹಿಸಿದೆ" ಎಂದಿದ್ದಾರೆ.

ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್

ಸಂಘಟಿತ ಪ್ರದರ್ಶನ ನೀಡಿದ ಭಾರತ

ಸಂಘಟಿತ ಪ್ರದರ್ಶನ ನೀಡಿದ ಭಾರತ

ಅಡಿಲೇಡ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಸಂಪೂರ್ಣವಾಗಿ ಕುಸಿಯುವ ಮೂಲಕ ಟೀಮ್ ಇಂಡಿಯಾ ಆಘಾತಕಾರಿಯಾಗಿ ಎರಡನೇ ಇನ್ನಿಂಗ್ಸ್ ಮುಗಿಸಿತ್ತು. ಇದರ ಪರಿಣಾಮವಾಗಿ ಹೀನಾಯ ಸೋಲು ಕಂಡಿದ್ದ ಟೀಮ್ ಇಂಡಿಯಾ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತವಾಗಿ ಪುಟಿದೇಳುವಲ್ಲಿ ಯಶಸ್ವಿಯಾಘಿತ್ತು. ತಂಡದ ಸಂಘಟಿತ ಪ್ರದರ್ಶನದ ಕಾರಣದಿಂದಾಗಿ ಭಾರತ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಮಣಿಸಿತ್ತು. ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಈಗ 1-1 ರಿಂದ ಸಮಬಲಗೊಂಡಿದೆ.

ನಿನ್ನದು ದೊಡ್ಡ ನಿರೀಕ್ಷೆ

ನಿನ್ನದು ದೊಡ್ಡ ನಿರೀಕ್ಷೆ

"ನಾನು ಡಲ್ಲಿಯಲ್ಲಿರುವ ನನ್ನ ಗೆಳೆಯರಲ್ಲಿ ಭಾರತ ಆಸ್ಟ್ರೇಲಿಯಾವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸಲಿದೆ ಎಂದು ಹೇಳಿದ್ದೇನೆ. ನಾನು ಅವರಲ್ಲಿ ಭಾರತದ ಬ್ಯಾಟಿಂಗ್ ಉತ್ತಮ ಪ್ರದರ್ಶನ ನೀಡಿದರೆ, ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನ ನೀಡಿದರೆ ಭಾರತ ಸರಣಿಯನ್ನು ಗೆಲ್ಲಲು ಹೆಚ್ಚಿನ ಸಾಧ್ಯತೆಯಿದೆ ಎಂದಿದ್ದೆ. ಆದರೆ ಅವರು ನೀನು ದೊಡ್ಡ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿರುವೆ ಎಂದು ಪ್ರತಿಕ್ರಿಯಿಸಿದ್ದರು" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಸ್ಕೋರ್ ಬೋರ್ಡ್ ನೋಡಿ ಗೊಂದಲಕ್ಕೀಡಾಗಿದ್ದೆ

ಸ್ಕೋರ್ ಬೋರ್ಡ್ ನೋಡಿ ಗೊಂದಲಕ್ಕೀಡಾಗಿದ್ದೆ

ಇನ್ನು ಇದೇ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ 39/9 ವಿಕೆಟ್ ಕಳೆದುಕೊಂಡಿದ್ದ ಬಗ್ಗೆಯೂ ಪ್ರತಿಕ್ರಿಯಿಸಿದರು. ಅಂದು ಸ್ಕೋರ್ ಬೋರ್ಡ್ ನೋಡಿ ಗೊಂದಲಕ್ಕೀಡಾಗಿದ್ದೆ ಎಂದು ಶೋಯೆಬ್ ಅಖ್ತರ್ ವಿವರಿಸಿದ್ದಾರೆ.

Story first published: Thursday, December 31, 2020, 23:59 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X