ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅರ್ಜಿ

Ajit Agarkar applies for national selector’s job

ಮುಂಬೈ, ಜನವರಿ 24: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಅಜಿತ್‌ ಅಗರ್ಕರ್ ಅವರು ಶುಕ್ರವಾರ (ಜನವರಿ 24) ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಸದ್ಯ ಅಜಿತ್, ಆಯ್ಕೆ ಸಮಿತಿಯ ಅಧ್ಯಕ್ಷರ ಸ್ಥಾನಕ್ಕಿರುವ ಮುಂಚೂಣಿ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದಾರೆ.

ಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತ

ಮುಂಬೈ ಹಿರಿಯ ಆಯ್ಕೆದಾರರ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಅಜಿತ್ ಅಗರ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ವಿಕೆಟ್‌ ಸಾಧನೆ ಹೊಂದಿದ್ದಾರೆ. 42ರ ಹರೆಯದ ಅಜಿತ್ ಹೆಸರಿನಲ್ಲಿ 26 ಟೆಸ್ಟ್, 191 ಏಕದಿನ ಮತ್ತು 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಿಗೆ 349 ವಿಕೆಟ್‌ ದಾಖಲೆಯಿದೆ.

ವಿಶ್ವಕಪ್‌ ಸೋಲಿನ ಪ್ರತಿಕಾರದ ಬಗ್ಗೆ ಕೊಹ್ಲಿ ಉತ್ತರಕ್ಕೆ ಕೀವಿಸ್ ಅಭಿಮಾನಿಗಳೂ ಫಿದಾ!ವಿಶ್ವಕಪ್‌ ಸೋಲಿನ ಪ್ರತಿಕಾರದ ಬಗ್ಗೆ ಕೊಹ್ಲಿ ಉತ್ತರಕ್ಕೆ ಕೀವಿಸ್ ಅಭಿಮಾನಿಗಳೂ ಫಿದಾ!

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಭಾರತೀಯರಲ್ಲಿ ಈಗಲೂ ಅಜಿತ್ ಅಗರ್ಕರ್ (288 ವಿಕೆಟ್‌ಗಳು) ಮೂರನೇ ಸ್ಥಾನದಲ್ಲಿದ್ದಾರೆ. ಈ ಸಾಧನೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕನ್ನಡಿಗರಾದ ಅನಿಲ್ ಕುಂಬ್ಳೆ (334 ವಿಕೆಟ್‌ಗಳು) ಮತ್ತು ಜಾವಗಲ್ ಶ್ರೀನಾಥ್ (315 ವಿಕೆಟ್‌ಗಳು) ಇದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ಧೀನ್ ವಿರುದ್ಧ ವಂಚನೆ ಪ್ರಕರಣ ದಾಖಲುಟೀಮ್ ಇಂಡಿಯಾ ಮಾಜಿ ನಾಯಕ ಅಜರುದ್ಧೀನ್ ವಿರುದ್ಧ ವಂಚನೆ ಪ್ರಕರಣ ದಾಖಲು

ಅಷ್ಟೇ ಅಲ್ಲ ತಾನು ಆಡುತ್ತಿದ್ದಾಗ ವಿಶ್ವದ ವೇಗಿಗಳಲ್ಲಿ ಗುರುತಿಸಿಕೊಂಡಿದ್ದ ಅಗರ್ಕರ್, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್‌ ಪಡೆದ ದಾಖಲೆ ಈಗಲೂ ಉಳಿಸಿಕೊಂಡಿದ್ದಾರೆ. ಬರೀ 23 ಪಂದ್ಯಗಳಲ್ಲಿ ಅಜಿತ್ ಈ ಸಾಧನೆ ತೋರಿದ್ದರು. ಇದೇ ದಾಖಲೆಗಾಗಿ ಅಗ್ರ ಸ್ಥಾನದಲ್ಲಿರುವ ಅಜಂತ ಮೆಂಡಿಸ್ 19 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಮುರಿದಿದ್ದರು.

Story first published: Friday, January 24, 2020, 19:33 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X