ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್‌ಗೆ ಪೆಟ್ಟು ನೀಡಿ ನಗುತ್ತಿದ್ದ ಆರ್ಚರ್‌ಗೆ ಬೌನ್ಸರ್‌ ಎಸೆದ ಅಖ್ತರ್‌!

ಅಸಭ್ಯ ವರ್ತನೆ ತೋರಿದ ಇಂಗ್ಲೆಂಡ್ ಆಟಗಾರರು..? | Oneindia Kannada
Akhtar slams Archer 2019

ಕರಾಚಿ, ಆಗಸ್ಟ್‌ 18: ಆ್ಯಷಸ್‌ ಸರಣಿಯ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಯುವ ವೇಗಿ ಜೋಫ್ರಾ ಆರ್ಚರ್‌, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ಗೆ ಬೌನ್ಸರ್‌ ಪೆಟ್ಟು ನೀಡಿ ಬಳಿಕ ನಗಾಡುತ್ತಾ ನಿಂತಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್‌ ಅಖ್ತರ್‌ ಇಂಗ್ಲೆಂಡ್‌ ಆಟಗಾರನ ವರ್ತನೆಯನ್ನು ಖಂಡಿಸಿದ್ದಾರೆ.

1
44039

ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಆಸ್ಟ್ರೇಲಿಯಾ ಪರ ಮತ್ತೊಂದು ಶತಕದ ಕಡೆಗೆ ಮುನ್ನುಗ್ಗುತ್ತಿದ್ದ ಸ್ಟೀವ್‌ ಸ್ಮಿತ್‌ 80 ರನ್‌ ಗಳಿಸಿದ್ದ ಸಂದರ್ಭದಲ್ಲಿ ಜೋಫ್ರಾ ಅರ್ಚರ್ ಎಸೆದ ಬೌನ್ಸರ್‌ನಲ್ಲಿ ತಲೆಗೆ ಪೆಟ್ಟು ತಿಂದು ನೆಲಕ್ಕುರುಳಿ ನೋವಿನಿಂದ ನರಳುತ್ತಿದ್ದರು.

ವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವ

ಈ ಸಂದರ್ಭದಲ್ಲಿ ವಿಕೆಟ್‌ ಕೀಪರ್‌ ಜೋಸ್‌ ಬಟ್ಲರ್‌ ಜೊತೆಗೂಡಿ ಆರ್ಚರ್‌ ನಗುತ್ತಿದ್ದ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಆರ್ಚರ್‌ ಅವರ ಈ ಸ್ವಭಾವಕ್ಕೆ ವ್ಯಾಪಕವಾಗಿ ಟೀಕೆಗಳು ಹರಿದು ಬಂದಿದೆ. ಇನ್ನಿ ಜಾಗತಿಕ ಕ್ರಿಕೆಟ್‌ನ ಸಾರ್ವಕಾಲಿಕ ಅತ್ಯಂತ ವೇಗದ ಬೌಲರ್‌ ಆಗಿರುವ ಶೊಯೇಬ್‌ ಅಖ್ತರ್‌ ಕೂಡ ಪ್ರತಿಕ್ರಿಯೆ ನೀಡಿದ್ದು, ಆರ್ಚರ್‌ ಕಡೆಗೆ ಟ್ವಿಟರ್‌ ಮೂಲಕ ಬೌನ್ಸರ್‌ ಎಸೆದಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

"ಬೌನ್ಸರ್‌ ಆಟದ ಅವಿಭಾಜ್ಯ ಅಂಗ. ಆದರೆ, ಬೌನ್ಸರ್ನಲ್ಲಿ ಬ್ಯಾಟ್ಸ್‌ಮನ್‌ ತಲೆಗೆ ಪೆಟ್ಟುಬಿದ್ದು, ಆತ ನೆಲಕ್ಕುರುಳಿದ್ದ ಸಂದರ್ಭದಲ್ಲಿ ಮೊದಲಿಗೆ ಬೌಲರ್‌ ಆತನ ಯೋಗಕ್ಷೇಮ ವಿಚಾರಿಸುವುದು ಮಾನವೀಯತೆಯ ಲಕ್ಷಣ. ಸ್ಮಿತ್‌ ನೋವಿನಿಂದ ನರಳುತ್ತಿದ್ದರೂ ಆರ್ಚರ್‌ ನಿರ್ಲಕ್ಷ್ಯ ತೋರಿದ್ದು ನಿಜಕ್ಕೂ ಉತ್ತಮ ಸಂಗತಿಯಲ್ಲ. ನಾನು ಅಂತಹ ಪ್ರತಿ ಸಂದರ್ಭದಲ್ಲೂ ಬ್ಯಾಟ್ಸ್‌ಮನ್‌ ಬಗ್ಗೆ ಕಾಳಜಿ ವಹಿಸಿದ್ದೇನೆ," ಎಂದು ಅಖ್ತರ್‌ ಟ್ವೀಟ್‌ ಮಾಡಿದ್ದಾರೆ.

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ

ಆರ್ಚರ್‌ ಎಸೆದ ಬೌನ್ಸರ್‌ನಿಂದಾಗಿ ಬೆಚ್ಚಿದ ಸ್ಮಿತ್‌, 80 ರನ್‌ ಗಳಿಸಿದ್ದಾಹ ನಿವೃತ್ತಿ ಹೊಂದಿದರು. ಬಳಿಕ ಬ್ಯಾಟಿಂಗ್‌ಗೆ ಮರಳಿದರಾದರೂ 92 ರನ್‌ ಗಳಿಸಿದ್ದಾಗ ವೋಕ್ಸ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಶತಕ ವಂಚಿತರಾದರು. ಪಂದ್ಯ ಬಹುತೇಕ ಡ್ರಾ ಫಲಿತಾಂಶದ ಕಡೆಗೆ ವಾಲಿದೆ. ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿದರೂ ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ 252 ರನ್‌ಗಳ ಜಯ ದಾಖಲಿಸಿ 5 ಟೆಸ್ಟ್‌ಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದಿತ್ತು.

ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 258 ಮತ್ತು 2ನೇ ಇನಿಂಗ್ಸ್‌ 162/5 (ಬೆನ್‌ ಸ್ಟೋಕ್ಸ್‌ ಅಜೇಯ 51; ಪೀಟರ್‌ ಸಿಡ್ಲ್‌ 22ಕ್ಕೆ 2, ಪ್ಯಾಟ್‌ ಕಮಿನ್ಸ್‌ 24ಕ್ಕೆ 2).
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 94.3 ಓವರ್‌ಗಳಲ್ಲಿ 250/10 (ಉಸ್ಮಾನ್‌ ಖವಾಜ 36, ಸ್ಟೀವ್‌ ಸ್ಮಿತ್‌ 92, ಟಿಮ್‌ ಪೇಯ್ನ್‌ 23; ಸ್ಟುವರ್ಟ್‌ ಬ್ರಾಡ್ 65ಕ್ಕೆ 4, ಜೋಫ್ರಾ ಆರ್ಚರ್‌ 59ಕ್ಕೆ 2, ಕ್ರಿಸ್‌ ವೋಕ್ಸ್‌ 61ಕ್ಕೆ 3).

Story first published: Sunday, August 18, 2019, 19:05 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X